ಮುಕ್ವೆಯಲ್ಲಿ ಮತದಾನ ಬಹಿಷ್ಕಾರ ಬ್ಯಾನರ್ ರಾಜಕೀಯ ಪ್ರೇರಿತ-ಸ್ಪಷ್ಟನೆ

0

ಪುತ್ತೂರು: ಮುಕ್ವೆಯ ಓಂಕಾರ ಬಡಾವಣೆಯ ನಿವಾಸಿಗಳು ಮತದಾನ ಬಹಿಷ್ಕಾರ ಮಾಡಲು ತೀರ್ಮಾನಿಸಿರುವ ಕುರಿತು ಬ್ಯಾನರ್ ಹಾಕಿರುವುದು ಯಾರು ಎನ್ನುವ ಬಗ್ಗೆ ನಮಗೆ ಮಾಹಿತಿಯೇ ಇಲ್ಲ. ಇದು ರಾಜಕೀಯ ಪ್ರೇರಿತವಾಗಿದೆ ಎಂದು ಬಡಾವಣೆಯ ನಿವಾಸಿಗಳು ಸ್ಪಷ್ಟಪಡಿಸಿದ್ದಾರೆ.

ಮತದಾನ ನಮ್ಮ ಜನ್ಮಸಿದ್ಧ ಹಕ್ಕಾಗಿದ್ದು ಅದನ್ನು ಹೇಗೆ, ಯಾರಿಗೆ ಚಲಾವಣೆ ಮಾಡಬೇಕೆಂದು ಬುದ್ಧಿವಂತರೇ ಇರುವ ಬಡಾವಣೆಯ ಜನರಿಗೆ ಗೊತ್ತಿದೆ. ಇಲ್ಲಿನ ಗ್ರಾಮ ಪಂಚಾಯತ್‌ನವರು ಕುಡಿಯುವ ನೀರಿನ ಸಂಪರ್ಕಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ತಯಾರುಮಾಡಿದ್ದು ಇನ್ನು ಕೆಲವೇ ದಿನಗಳಲ್ಲಿ ಬಡಾವಣೆಯ ನಿವಾಸಿಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಿದ್ದಾರೆ.

ರಸ್ತೆ ಕಾಂಕ್ರೀಟ್‌ಗಾಗಿ ಶಾಸಕರ ಅನುದಾನ ಮಂಜೂರಾಗಿದ್ದು, ಸಂಬಂಧಿಸಿದ ಇಂಜಿನಿಯರ್‌ಗಳು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸರಕಾರದ ನಿಯಮಗಳಂತೆ ತಾಂತ್ರಿಕ ಕಾರ್ಯಗಳು ಮುಗಿದು ರಸ್ತೆಯೂ ನಿರ್ಮಾಣವಾಗಲಿದೆ. ಗ್ರಾಮ ಪಂಚಾಯತ್ ಮತ್ತು ಇಲ್ಲಿನ ನಿವಾಸಿಗಳಾದ ನಾವು ನಿಕಟ ಸಂಪರ್ಕದಲ್ಲಿದ್ದು ಒಂದೊಂದೇ ಕೆಲಸಗಳು ಸಾಂಗವಾಗಿ ನಡೆಸಲು ಪರಸ್ಪರ ಸಹಕರಿಸುತ್ತಿದ್ದರೂ ನಮಗೆ ಅರಿವಿಲ್ಲದೇ ಈ ರೀತಿ ಬ್ಯಾನರ್ ಅಳವಡಿಸಿರುವುದು ಯಾರು ಎಂದು ಅದೇ ಸ್ಥಳದಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿರುವ ಸಿ. ಸಿ. ಟಿ. ವಿ. ಯಿಂದ ಮಾಹಿತಿ ಪಡೆದರೆ ಸತ್ಯ ತಿಳಿಯುತ್ತದೆ ಎಂದು ಇಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಈ ಕುರಿತ ಬರಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

LEAVE A REPLY

Please enter your comment!
Please enter your name here