ಪುತ್ತೂರು: ಸರಕಾರಿ ಬಸ್ಸು ನಿರ್ವಾಹಕನಿಗೆ ನಿಂದಿಸಿ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಉಮೇಶ ದೊಡ್ಡಮನಿ ಎಂಬವರಿಗೆ ಮಂಗಳೂರು ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಡಿ.7ರಂದು ಸಂಜೆ 7.30ಕ್ಕೆ ಪುತ್ತೂರಿನ ಬಸ್ಸು ನಿಲ್ದಾಣದಿಂದ ಬಲ್ಯಕ್ಕೆ ಹೋಗುವ ಸಲುವಾಗಿ ಉಮೇಶ ದೊಡ್ಡಮನಿ ಎಂಬವರು ತನ್ನ ಅತ್ತೆಗೆ ಟಿಕೆಟ್ ನೀಡಲು ಹೇಳಿದಾಗ ನಿರಾಕರಿಸಿದ ನಿರ್ವಾಹಕ ಟಿಕೇಟು ನೀಡದೆ ಅತ್ತೆಯವರಲ್ಲಿ ಕೊಡುವುದಾಗಿ ಕೇಳಿದಾಗ ಕೋಪಗೊಂಡ ಉಮೇಶ ದೊಡ್ಡಮನಿ ಮತ್ತು ನಿರ್ವಾಹಕನ ನಡುವೆ ಮಾತಿಗೆ ಮಾತು ಬೆಳೆದು ಉಮೇಶ ದೊಡ್ಡಮನಿಯವರು ನಿರ್ವಾಹಕನಿಗೆ ಹಲ್ಲೆ ನಡೆಸಿ ತನ್ನ ಕೈಯಲ್ಲಿದ್ದ ಬೀಗದ ಕೈಯಿಂದ ನಿರ್ವಾಹಕನ ಕೆನ್ನೆಗೆ ತಿವಿದು ಗಾಯಗೊಳಿಸಿರುವುದರಿಂದ ನಿರ್ವಾಹಕ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಪೊಲೀಸರಿಗೆ ದೂರು ನೀಡಿದ್ದರು. ಉಮೇಶ್ ದೊಡ್ಡಮನಿ ವಿರುದ್ಧ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಮಂಗಳೂರು ಜಿಲ್ಲಾ ನ್ಯಾಯಾಲಯವು ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಆರೋಪಿಯ ಪರ ಪುತ್ತೂರಿನ ನೋಟರಿ ನ್ಯಾಯವಾದಿ ಎಂ.ಪಿ ಅಬೂಬಕ್ಕರ್ ಮತ್ತು ಎಂ.ಪಿ ಅರ್ಷಾದ್ ವಾದಿಸಿದ್ದರು.