ಪುತ್ತೂರು:ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯಿಂದ ವಿಟ್ಲದಲ್ಲಿ,ಕ್ಯಾನ್ಸರ್ ರೋಗಿಗಳ ಚಿಕಿತ್ಸಾ ವೆಚ್ಚದ ಸಹಾಯಾರ್ಥ ನಡೆದ ಜೈ ಭೀಮ್ ಕ್ರಿಕೆಟ್ ಪಂದ್ಯಾಟದಲ್ಲಿ ಉಳಿಕೆಯಾಗಿರುವ ರೂ.40ಸಾವಿರದ ಪೈಕಿ ರೂ.20 ಸಾವಿರವನ್ನು ಸವಣೂರಿನ ಎರಡು ಕುಟುಂಬಗಳಿಗೆ ಹಸ್ತಾಂತರ ಮಾಡಲಾಯಿತು.
ಸವಣೂರು ಗ್ರಾಮದ ಬರಮೇಲು ಮೋನಪ್ಪ ನಾಯ್ಕ ಮತ್ತು ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಪ್ರವೀಣ್ ಪಿಲಿಗುಂಡ ಅವರಿಗೆ ತಲಾ ರೂ.10ಸಾವಿರವನ್ನು ನೆರವಾಗಿ ನೀಡಲಾಯಿತು.ಈ ಸಂದರ್ಭದಲ್ಲಿ ದಲಿತ್ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಕಾಡು, ಜಿಲ್ಲಾಧ್ಯಕ್ಷ ಚಂದ್ರಶೇಖರ್ ಯು ವಿಟ್ಲ, ಜಿಲ್ಲಾ ಉಪಾಧ್ಯಕ್ಷ ಯಾಮಿನಿ ಬೆಟ್ಟಂಪಾಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಧನಂಜಯ ನಾಯ್ಕ ಬಲ್ನಾಡು, ತಾಲೂಕು ಅಧ್ಯಕ್ಷ ಬಿ.ಕೆ.ಅಣ್ಣಪ್ಪ ಕಾರೆಕ್ಕಾಡು, ಮಹಿಳಾ ಅಧ್ಯಕ್ಷೆ ಲಲಿತ ಕಾರ್ಪಾಡಿ, ಮಾಜಿ ಅಧ್ಯಕ್ಷೆ ಸುನಂದಾ, ಬಂಟ್ವಾಳ ತಾಲೂಕು ಮಾಜಿ ಅಧ್ಯಕ್ಷ ಗಣೇಶ್ ಸೀಗೆಬಲ್ಲೆ, ಯಾದವ ಕುರಿಯ, ದಾಮೋದರ ಮುರ ಉಪಸ್ಥಿತರಿದ್ದರು.ಎರಡು ದಿನದ ಹಿಂದೆ ಮುಂಡೂರು ಕಂಪದಲ್ಲಿ ಕೊಲೆಗೀಡಾದ ಜಯಶ್ರೀ ಅವರ ಮನೆಗೆ ಭೇಟಿ ಅವರ ತಾಯಿಗೆ ಸಾಂತ್ವನ ಹೇಳಲಾಯಿತು.