ಬೆಂಗಳೂರು:ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಮಾನ್ಯತೆಯ ನವೀಕರಣದ ಅವಧಿಯನ್ನು ಶಿಕ್ಷಣ ಇಲಾಖೆ ಜ.25ರವರೆಗೂ ವಿಸ್ತರಿಸಿದೆ.
ಶಾಲೆಗಳ ಮಾನ್ಯತೆ ನವೀಕರಣದ ಅವಧಿ ಕಳೆದ ನವೆಂಬರ್ನಲ್ಲೇ ಮುಕ್ತಾಯವಾಗಿತ್ತು. 2022-23ನೇ ಶೈಕ್ಷಣಿಕ ಅವಧಿಗೆ ಮಾನ್ಯತೆ ಮುಕ್ತಾಯವಾಗುವ ಶಾಲೆಗಳು ನವೀಕರಣಕ್ಕೆ ಅರ್ಜಿ ಸಲ್ಲಿಸದಿದ್ದರೆ, ಅವುಗಳನ್ನು ಅನಧಿಕೃತ ಶಾಲೆಗಳೆಂದು ಪರಿಗಣಿಸಲಾಗುವುದು. ಮಾನ್ಯತೆ ನವೀಕರಣ ಮಾಡದ ಶಾಲೆಗಳ ವಿದ್ಯಾರ್ಥಿಗಳನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೂರಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಕೊನೆಯ ಅವಕಾಶ ನೀಡಲಾಗುತ್ತಿದೆ. ಈ ಬಾರಿಯೂ ಅವಕಾಶ ಬಳಸಿಕೊಳ್ಳದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆಯ ಆಯುಕ್ತ ವಿಶಾಲ್ ಎಚ್ಚರಿಸಿದ್ದಾರೆ.