





ಪುತ್ತೂರು: ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಪುತ್ತೂರಿನ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳನ್ನು ಶಾಸಕ ಅಶೋಕ್ ರೈ ಅಭಿನಂದಿಸಿದರು.
ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಸಕರು ವಾಲಿಬಾಲ್ ತಂಡದಲ್ಲಿರುವ ವಿದ್ಯಾರ್ಥಿಗಳಾದ ಮೊಹಮ್ಮದ್ ತೌಫೀಕ್, ಕೇಟನ್‌ದಿಕ್ಷನ್ ತೋರಸ್, ಅಬೂಬಕ್ಕರ್ ಶಾನ್, ಮೊಹಮ್ಮದ್ ಅಕ್ಮಲ್, ಸಂಚಯ್ ಎಸ್, ಅಬ್ದುಲ್ ಹನನ್, ಮೊಹಮ್ಮದ್ ಹೂದ್, ಶಲೋನ್‌ಸೆರಾವೋ, ಮಹಮ್ಮದ್ ಖಲಂದರ್ ಶಹಜಾದ್, ನಿಶ್ಚಲ್ ಶಾಂತವನ ಸಿ, ಅಲನ್ ಜೋಶ್ಮೆಲ್ ಡಿಸೋಜಾ, ಮಹಮ್ಮದ್ ರಹೀಂ ರನ್ನು ಶಾಸಕರು ಶಾಲು ಹೊದಿಸಿ ಸನ್ಮಾನಿಸಿ ರಾಷ್ಟ್ರಮಟ್ಟದಲ್ಲಿ ವಿಜೇತರಾಗುವ ಮೂಲಕ ಪುತ್ತೂರಿನ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುವಂತೆ ಹರಸಿದಿರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ದೈಹಿಕ ಶಿಕ್ಷಕರಾದ ನಿರಂಜನ್ ಎಂ, ಅಕ್ಷಯ್ ಕೆ, ಶಿಕ್ಷಕಿ ಚಂದ್ರಪ್ರಭಾ ಉಪಸ್ಥಿತರಿದ್ದರು.











