ಪುತ್ತೂರು: ಕಾಸರಗೋಡು ಐ.ಸಿ.ಎ.ಆರ್ – ಸಿ.ಪಿ.ಸಿ.ಆರ್.ಐ. ನಿರ್ದೇಶಕರಾಗಿ ಡಾ. ಕೆ.ಬಿ. ಹೆಬ್ಬಾರ್ ಅವರು ಅಧಿಕಾರ ಸ್ವೀಕರಿಸಿದರು.
ಅಗ್ರಿಕಲ್ಚರಲ್ ಸೈಂಟಿಸ್ಟ್ ರಿಕ್ರೂಟ್ಮೆಂಟ್ ಬೋರ್ಡ್, ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಶಿಫಾರಸಿನ ಮೇಲೆ ಐ.ಸಿ.ಎ.ಆರ್ – ಸಿ.ಪಿ.ಸಿ.ಆರ್.ಐ. ನಿರ್ದೇಶಕರ ನೇಮಕ ಮಾಡಲಾಗಿದೆ. ವಿಟ್ಲ ಸಿಪಿಸಿಆರ್ಐ ಹಾಗೂ ಕಡಬದ ಕಿದು ಸಿಪಿಸಿಆರ್ಐ ಕಾಸರಗೋಡು ಸಿಪಿಸಿಆರ್ಐ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
1995ರಲ್ಲಿ ನಾಗಪುರದ ಸೆಂಟ್ರಲ್ ಇನ್ಸ್ಟಿಟ್ಯೂಟ್ ಫಾರ್ ಕಾಟನ್ ರೀಸರ್ಚಿನಲ್ಲಿ ವಿಜ್ಞಾನಿಯಾಗಿ ವೃತ್ತಿ ಜೀವನ ಆರಂಭಿಸಿದ ಡಾ. ಕೆ.ಬಿ. ಹೆಬ್ಬಾರ್ ಅವರು, 2007ರಲ್ಲಿ ಬೋಪಾಲ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಾಯಿಲ್ ಸೈನ್ಸ್ ನಲ್ಲಿ ಪ್ರಧಾನಿ ವಿಜ್ಞಾನಿಯಾಗಿ ನೇಮಕಗೊಂಡರು. 2010ರಿಂದ ಕಾಸರಗೋಡು ಸಿಪಿಸಿಆರ್ಐನಲ್ಲಿ ಪ್ಲಾಂಟ್ ಸೈಕಾಲಜಿ, ಬಯೋಕೆಮಿಸ್ಟ್ರಿ ಮತ್ತು ಪೋಸ್ಟ್ ಹಾರ್ವೆಸ್ಟ್ ಟೆಕ್ನಾಲಜಿ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇದೀಗ ಸಿಪಿಸಿಆರ್ಐನ ನಿರ್ದೇಶಕರಾಗಿ ನೇಮಕಗೊಂಡರು. ಇವರು ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಸಿಪಿಸಿಆರ್ಐ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.