ಒಳಮೊಗ್ರು ಕುಕ್ಕುಮುಗೇರು ರಾಜಮಾಡದಲ್ಲಿ ಉಳ್ಳಾಕುಲು ನೇಮೋತ್ಸವ ಸಂಭ್ರಮ: ಅದ್ಧೂರಿ ಹೊರೆಕಾಣಿಕೆ ಸಮರ್ಪಣೆ, ಕದಿಕೆ ತುಂಬಿಸುವ ಕಾರ್ಯಕ್ರಮ

0

ಪುತ್ತೂರು: ಒಳಮೊಗ್ರು ಗ್ರಾಮದ ಶ್ರೀ ಕುಕ್ಕುಮುಗೇರು ಉಳ್ಳಾಕುಲು ದೈವಸ್ಥಾನದ ಶ್ರೀ ಕುಕ್ಕುಮುಗೇರು ಉಳ್ಳಾಕುಲು ಪರಿವಾರ ದೈವಗಳ ನೇಮೋತ್ಸವವು ಬೊಳ್ಳಾಡಿ ರಾಜಮಾಡದಲ್ಲಿ ಜ.೨೯ ರಿಂದ ಆರಂಭಗೊಂಡು ಫೆ.೩ ರವರೇಗೆ ನಡೆಯಲಿದ್ದು ಇದರ ಅಂಗವಾಗಿ ಜ.೨೯ ರಂದು ಬೆಳಿಗ್ಗೆ ಮುಗೇರು ಕದಿಕೆ ಚಾವಡಿ ಮತ್ತು ಕೈಕಾರ ಕಿನ್ನಿಮಾಣಿ ದೈವಸ್ಥಾನದಲ್ಲಿ ಗಣಪತಿ ಹೋಮ, ಶುದ್ಧ ಕಲಶ ಮತ್ತು ತಂಬಿಲ ಸೇವೆ ನಡೆದು ಮುಗೇರು ಕದಿಕೆ ಚಾವಡಿಯಲ್ಲಿ ಕದಿಕೆ ತುಂಬಿಸುವ ಕಾರ್ಯಕ್ರಮ ನಡೆಯಿತು.

ಅದ್ಧೂರಿ ಹೊರೆಕಾಣಿಕೆ ಸಮರ್ಪಣೆ: ಬೆಳಿಗ್ಗೆ ೮. ೩೦ ಕ್ಕೆ ಮುಗೇರು ಕದಿಕೆ ಚಾವಡಿ ಕದಿಕೆ ತುಂಬಿಸಲು ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಿತು. ದರ್ಬೆತ್ತಡ್ಕ ಶಾಲಾ ಬಳಿ ಹೊರೆ ಕಾಣಿಕೆ ಮೆರವಣಿಗೆಯ ಉದ್ಘಾಟನೆ ನಡೆಯಿತು. ದೈವಸ್ಥಾನದ ಆಡಳಿತ ಮೊಕ್ತೇಸರ ಎ.ಜಿ ವಿಜಯ ಕುಮಾರ್ ರೈ ಮುಗೇರುರವರು ತೆಂಗಿನ ಕಾಯಿ ಒಡೆದು, ಆರತಿ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಹೊರೆಕಾಣಿಕೆ ಮೆರವಣಿಗೆ ಹಾಗೂ ಕದಿಕೆ ತುಂಬಿಸುವ ಕಾರ್ಯಕ್ರಮದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರುಗಳಾದ ಎ. ಚಿಕ್ಕಪ್ಪ ನಾಕ್ ಅರಿಯಡ್ಕ, ಎ.ಜಿ.ವಿಜಯ ಕುಮಾರ್ ರೈ ಮುಗೇರು, ನಿತ್ಯಾನಂದ ರೈ ಕೈಕಾರ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸದಸ್ಯರುಗಳಾದ ಶೀನಪ್ಪ ನಾಯ್ಕ, ಪ್ರದೀಪ್, ಮಹೇಶ್ ರೈ ಕೇರಿ, ಕುಂಬ್ರ ಸಿಎ ಬ್ಯಾಂಕ್ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ರಕ್ಷಿತ್ ರೈ ಮುಗೇರು, ಶ್ರೀನಿವಾಸ ರೈ ಕುಂಬ್ರ, ರಾಜೇಶ್ ರೈ ಪರ್ಪುಂಜ, ಸಂತೋಷ್ ರೈ ಕೈಕಾರ, ಬಾಬು ದರ್ಬೆತ್ತಡ್ಕ, ಬಾಬು ಪ್ರಸಾದ್, ರಮೇಶ್ ಪೂಜಾರಿ, ಪ್ರವೀಣ್ ಪಲ್ಲತ್ತಾರು, ಜೀವನ ಅಮೀನ್, ವಿಶ್ವನಾಥ ಗೌಡ ಬೊಳ್ಳಾಡಿ, ಸತೀಶ್ ರೈ ನೀರ್ಪಾಡಿ, ಶಾಂತರಾಮ ರೈ, ಅನೀಶ್ ಬೊಳ್ಳಾಡಿ, ಸಂದೇಶ್ ಪೂಜಾರಿ ಬೊಳ್ಳಾಡಿ, ವೆಂಕಪ್ಪ ಬೊಳ್ಳಾಡಿ, ಗೀತಾ ಬೊಳ್ಳಾಡಿ, ಶಾರದಾ ರೈ, ಅಮರನಾಥ ರೈ, ಹೊನ್ನಪ್ಪ ಗೌಡ ಇಡಿಂಜಿಲ, ಸತ್ಯಾವತಿ ರೈ, ಅರುಣ್ ರೈ ಬಿಜಳ, ರಾಮಣ್ಣ ಗೌಡ ಬೊಳ್ಳಾಡಿ, ಗುತ್ತಿಗೆದಾರ ಯುವರಾಜ್ ಶೆಟ್ಟಿ ಮೇರ್ಲ, ಪುರಂದರ ಶೆಟ್ಟಿ ಮುಡಾಲ, ರಾಜ್‌ಪ್ರಕಾಶ್ ರೈ ಕುಂಬ್ರ, ಸುಶಾಂತ್ ಅಜ್ಜಿಕಲ್ಲು, ಗಣೇಶ್ ಕೊಲತ್ತಡ್ಕ, ಅಶ್ವಥ್ ಬೈರಮೂಲೆ, ನಾರಾಯಣ ಪೂಜಾರಿ ಅಜಲಡ್ಕ, ಯತಿರಾಜ್ ರೈ ನೀರ್ಪಾಡಿ, ರಾಜ್‌ಶೇಖರ್, ಪ್ರೇಮ್‌ರಾಜ್ ರೈ, ಮಿತ್ರದಾಸ ರೈ ಸೇರಿದಂತೆ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.


ಹೊರೆಕಾಣಿಕೆ ಮೆರವಣಿಗೆಯು ದರ್ಬೆತ್ತಡ್ಕ ಶಾಲೆ, ನೀರ್ಪಾಡಿ, ಅಜಲಡ್ಕ ವಿಠಲ ಪೂಜಾರಿ ಅಂಗಡಿ, ಉಪ್ಪಳಿಗೆ, ಗುಮ್ಮಟೆಗದ್ದೆ, ಸಾಹೇಬರ ಅಂಗಡಿ ಹತ್ತಿರ, ಶ್ರೀ ದೇವಿ ಭಜನಾ ಮಂದಿರ ಮುಂಡೋವುಮೂಲೆ, ಅಜ್ಜಿಕಲ್ಲು, ಬೈರೋಡಿ, ಕಾಪಿಕಾಡು, ತೊಟ್ಲ, ಕೈಕಾರ ಹಾಲಿನ ಸೊಸೈಟಿ, ಕೈಕಾರ ಜುಮಾದಿ ದೈವಸ್ಥಾನದ ಹತ್ತಿರ, ರಾಜ್ ಕಾಂಪ್ಲೆಕ್ಸ್ ಪರ್ಪುಂಜ, ಸದಾಶಿವ ಭಜನಾ ಮಂದಿ, ಕೊಲತ್ತಡ್ಕ ಶಿವಕೃಪಾ, ಕುಂಬ್ರ ಶ್ರೀ ರಾಮ ಭಜನಾ ಮಂದಿರ, ಶೇಖಮಲೆ ಹಾಗೂ ಮುಡಾಲ ಮರಾಟಿ ಮಂದಿರ ಇಲ್ಲಿಂದ ಹೊರಟು ಮುಗೇರು ಕದಿಕೆ ಚಾವಡಿಗೆ ಬಂದು ಸೇರಿತು.

ಕ.30: ಶ್ರೀ ರಾಜಮಾಡದಲ್ಲಿ ನೇಮೋತ್ಸವ ಸಂಭ್ರಮ
ಜ.೩೦ ರಂದು ಬೆಳಿಗ್ಗೆ ಶ್ರೀ ಕಿನ್ನಿಮಾಣಿ ದೈವದ ನೇಮ, ಗಂಧಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಬಳಿಕ ಶ್ರೀ ಪೂಮಾಣಿ ದೈವದ ನೇಮ, ಗಂಧ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆದು ಸುಡುಮದ್ದು ಸೇವೆ ನಡೆಯಲಿದೆ. ಬಳಿಕ ಶ್ರೀ ಮಲರಾಯ ದೈವದ ನೇಮ, ಗಂಧ ಪ್ರಸಾದ ವಿತರಣೆ, ವರ್ಣರ ಪಂಜುರ್ಲಿ ದೈವದ ನೇಮ, ಗಂಧ ಪ್ರಸಾದ ವಿತರಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕ್ಷೇ ತ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here