ಪುತ್ತೂರು: ಪುತ್ತೂರು ಮಾಜಿ ಸೈನಿಕರ ಸಂಘದ ಮಾಜಿ ಉಪಾಧ್ಯಕ್ಷ ಸಂಪ್ಯದ ಮೂಲೆ ನಿವಾಸಿ ಕೆ.ಸಿ ಪೊನ್ನಪ್ಪ ಗೌಡ(57ವ)ರವರು ಜ.29ರಂದು ನಿಧನರಾದರು.
ಮೂಲತಃ ಪೆರ್ಲಂಪಾಡಿ ಕೆಮ್ಮಾರ ಪಾದೆಕಲ್ಲು ನಿವಾಸಿ ಕೆ.ಸಿ.ಪೊನ್ನಪ್ಪ ಗೌಡ ಅವರು ಪುತ್ತೂರು ಸಂಪ್ಯದ ಮೂಲೆಯಲ್ಲಿ ವಾಸ್ತವ್ಯ ಹೊಂದಿದ್ದು, ಜ.28ರಂದು ರಾತ್ರಿ ಅವರ ಆರೋಗ್ಯದಲ್ಲಿ ಏರುಪೇರಾಗಿ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಜ.29ರಂದು ನಿಧನರಾದರು.
17 ವರ್ಷ ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸಿದ್ದರು:
ಕೆ.ಸಿ. ಪೊನ್ನಪ್ಪ ಗೌಡ ಅವರು 17 ವರ್ಷ ಇಂಡಿಯನ್ ಆರ್ಮಿ ಎ.ಇ.ಸಿಯಲ್ಲಿ ಸೇವೆ ಸಲ್ಲಿಸಿ 2007ರಲ್ಲಿ ಸ್ವಯಂ ನಿವೃತ್ತಿ ಹೊಂದಿದ್ದರು. ಬಳಿಕ ಅವರು ಮಂಗಳೂರು ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಪುತ್ತೂರು ಸಂಪ್ಯದ ಮೂಲೆಯಲ್ಲಿ ವಾಸ್ತವ್ಯ ಹೊಂದಿದ್ದರು. ಪುತ್ತೂರು ಮಾಜಿ ಸೈನಿಕರ ಸಂಘದ ಸಕ್ರೀಯ ಸದಸ್ಯರಾಗಿ ಸಂಘದ ಮಾಜಿ ಉಪಾಧ್ಯಕ್ಷರಾಗಿದ್ದರು. ಮೃತರು ಪತ್ನಿ ನರಿಮೊಗರು ಐಟಿಐಯಲ್ಲಿ ಶಿಕ್ಷಕಿಯಾಗಿರುವ ರಾಜೀವಿ, ಪುತ್ರಿಯರಾದ ಪೂಜಾ ಮತ್ತು ಪೂರ್ಣ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಅವರ ಹುಟ್ಟೂರು ಪೆರ್ಲಂಪಾಡಿ ಕೆಮ್ಮಾರ ಪಾದೆಕಲ್ಲಿನಲ್ಲಿ ನಡೆಯಿತು. ಪುತ್ತೂರು ಮಾಜಿ ಸೈನಿಕರ ನಿಯೋಗ ಮೃತರ ಮನೆಗೆ ತೆರಳಿ ಮಿಲಿಟರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿದರು.