ಪುತ್ತೂರು: ಸರ್ವೆ ಗ್ರಾಮದ ಎಲಿಯ ಶ್ರೀ ವಿಷ್ಣುಮೂರ್ತಿ ದೇವರ ಪ್ರಥಮ ಪ್ರತಿಷ್ಠಾ ವರ್ಧಂತಿಯ ಎಲಿಯ ಜಾತ್ರೆಗೆ ಗೊನೆ ಮುಹೂರ್ತ ಜ.31 ರಂದು ಜರಗಿತು. ಬೆಳಿಗ್ಗೆ ದೇವಳದಲ್ಲಿ ಸಾಮೂಹಿಕ ದೇವತಾ ಪ್ರಾರ್ಥನೆ ಮಾಡಿ ದೇವಳದ ಹತ್ತಿರ ಇರುವ ಮಜಲುಗದ್ದೆ ಎಂಬಲ್ಲಿನ ತೋಟಕ್ಕೆ ತೆರಳಿ 11 ಗಂಟೆಯ ಸುಮುಹೂರ್ತದಲ್ಲಿ ದೇವಳದ ಪ್ರಧಾನ ಅರ್ಚಕ ಎಲಿಯ ನಾಗೇಶ ಕಣ್ಣಾರಾಯರವರು ಗೊನೆ ಮುಹೂರ್ತ ನೆರವೇರಿಸಿದರು. ಬಳಿಕ ಗೊನೆಯನ್ನು ದೇವಳಕ್ಕೆ ಶಂಖ, ಜಾಗಟೆಯ ನಾದದೊಂದಿಗೆ ಭಕ್ತಾದಿಗಳ ಮೆರವಣಿಗೆಯಲ್ಲಿ ತಂದು ದೇವಳದಲ್ಲಿ ಪೂಜೆಯಾಗಿ ಜಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಜಾತ್ರಾ ಸಮಿತಿಯ ಗೌರವಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಅಧ್ಯಕ್ಷ ಶಿವರಾಮ ರೈ ಸೊರಕೆ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕರುಣಾಕರ ಗೌಡ ಎಲಿಯ ಸೇರಿದಂತೆ ಜಾತ್ರಾ ಸಮಿತಿಯ ಸರ್ವ ಪದಾಧಿಕಾರಿಗಳು, ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು, ವಿವಿಧ ಸಮಿತಿಯ ಸಂಚಾಲಕರು, ಸದಸ್ಯರುಗಳು, ಭಕ್ತಾದಿಗಳು ಉಪಸ್ಥಿತರಿದ್ದರು.