ಅರಿಯಡ್ಕ ವಲಯ ಮಟ್ಟದ ವಾರ್ಷಿಕೋತ್ಸವ ಮತ್ತು ಭಜನೋತ್ಸವದ ಪೂರ್ವಭಾವಿ ಸಭೆ

0

ಬಡಗನ್ನೂರು : ಅರಿಯಡ್ಕ ವಲಯ ಮಟ್ಟದ ವಾರ್ಷಿಕೋತ್ಸವ ಮತ್ತು ಭಜನೋತ್ಸವದ ದ್ವಿತೀಯ ಹಂತದ ಪೂರ್ವಭಾವಿ ಸಭೆಯು ಪಡುಮಲೆ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು ರವರ ಅಧ್ಯಕ್ಷತೆಯಲ್ಲಿ ಡಿ. 2 ರಂದು ಪಡುಮಲೆ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಅರಿಯಡ್ಕ ವಲಯ ಮೇಲ್ವಿಚಾರಕ ಹರೀಶ್ ಕುಲಾಲ್ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.

ಭಜನಾ ಪರಿಸತ್ ಸಮನ್ವಯ ಅಧಿಕಾರಿ ಸಂತೋಷ್ ಮಾತನಾಡಿ, ಭಜನೆಯ ಮಹತ್ವ ಮತ್ತು ಕಾರ್ಯಕ್ರಮ ಅಯೋಜನೆ ಮತ್ತಿತರ ವಿಷಯಗಳ ಬಗ್ಗೆ ಮಾತನಾಡಿದರು.

ವೇದಿಕೆಯಲ್ಲಿ ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ, ಭಜನಾ ಪರಿಷತಿನ ಅಧ್ಯಕ್ಷ ಗಂಗಾಧರ ರೈ ಎಂ. ಜಿ ಸುಳ್ಯಪದವು, ಬಡಗನ್ನೂರು ಬಿ ಒಕ್ಕೂಟದ ಅಧ್ಯಕ್ಷ ಸುಬ್ಬಯ್ಯ ರೈ ಹಲಸಿನಡಿ ಉಪಸ್ಥಿತರಿದ್ದರು.

ಸಭೆಯಲ್ಲಿ ವರಮಹಾಲಕ್ಮಿ ಪೂಜಾ ಸಮಿತಿ ಅಧ್ಯಕ್ಷೆ ವಾಣಿಶ್ರೀ ಪಡುಮಲೆ, ವಲಯದ ವಿವಿಧ ಭಜನಾ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು ಒಕ್ಕೂಟ ಪದಾಧಿಕಾರಿಗಳು ವಲಯ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ಬಡಗನ್ನೂರು ಒಕ್ಕೂಟದ ಸೇವಾಪ್ರತಿನಿಧಿ ಸಾವಿತ್ರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಲಯ ವಲಯ ಮೇಲ್ವಿಚಾರಕ ಹರೀಶ್ ಕುಲಾಲ್ ವಂದಿಸಿದರು.

LEAVE A REPLY

Please enter your comment!
Please enter your name here