ಪುತ್ತೂರು: ಇತ್ತೀಚೆಗೆ ಅಗಲಿದ ನಿವೃತ್ತ ತಹಶೀಲ್ದಾರ್ ಹಾಗೂ ಗಾಂಧೀವಾದಿ ಚಿಲ್ಮೆತ್ತಾರು ಕೋಚಣ್ಣ ರೈಯವರ ಶ್ರದ್ಧಾಂಜಲಿ ಸಭೆಯು ದರ್ಬೆ ಬೈಪಾಸ್ ರಸ್ತೆಯ ಬಳಿಯ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಇಂದು ಮಧ್ಯಾಹ್ನ ಜರಗಲಿದೆ.
ಪುತ್ತೂರಿನ ಬೈಪಾಸ್ ರಸ್ತೆ ಅಭಿವೃದ್ಧಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಗದ್ದೆ, ರಥಬೀದಿ ಜಮೀನು ಭೂ ಸ್ವಾಧೀನ, ಮೊಟ್ಟೆತ್ತಡ್ಕದಲ್ಲಿ ಎನ್‌ಆರ್‌ಸಿಸಿ ಘಟಕ ಸ್ಥಾಪನೆ, ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆ ಹೀಗೆ ಅನೇಕ ಜನಪರ ಯೋಜನೆಗಳ ಅಭಿವೃದ್ಧಿ ಚಿಂತಕರಾದ ಅಗಲಿದ ನಿವೃತ್ತ ತಹಶೀಲ್ದಾರ್ ಚಿಲ್ಮೆತ್ತಾರ್ ಕೋಚಣ್ಣ ರೈಯವರ ಉತ್ತರಕ್ರಿಯಾದಿ ಸದ್ಗತಿ ಕಾರ್ಯಗಳು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಕ್ಷೇತ್ರದಲ್ಲಿ ಕೋಚಣ್ಣ ರೈಯವರ ಮಕ್ಕಳು ಹಾಗೂ ಕುಟುಂಬಿಕರೊಂದಿಗೆ ನೆರವೇರಲಿರುವುದು. ಮಧ್ಯಾಹ್ನ ದರ್ಬೆ ಬೈಪಾಸ್ ರಸ್ತೆಯ ಬಳಿಯ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಜರಗುವ ಶ್ರದ್ಧಾಂಜಲಿ ಸಭೆಗೆ ಕೋಚಣ್ಣ ರೈಯವರ ಆಪ್ತರು, ಹಿತೈಷಿಗಳು, ಅಭಿಮಾನಿ ಮಿತ್ರರು, ಬಂಧುಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕಾಗಿ ಅಗಲಿದ ನಿವೃತ್ತ ತಹಶೀಲ್ದಾರ್ ಕೋಚಣ್ಣ ರೈಯವರ ಪುತ್ರಿಯರಾದ ಶ್ರೀಮತಿ ವಿಜಯ ಆರ್.ಅಡ್ಯಂತಾಯ, ಶ್ರೀಮತಿ ಸುಜಯ ವಿ.ರೈ, ಪುತ್ರ ಡಾ.ಮಂಜುನಾಥ್ ರೈ, ಅಳಿಯ ರಾಮಕೃಷ್ಣ ಅಡ್ಯಂತಾಯ, ಸೊಸೆ ಶ್ರೀಮತಿ ಅರ್ಪಣಾ ಎಂ.ರೈಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.