ಪುತ್ತೂರು: ಭಾರತೀಯ ಹೋಮೀಯೋಪತಿ ವೈದ್ಯರ ಸಂಘ ಕರ್ನಾಟಕ ಹಾಗೂ ಮಂಗಳೂರು ಘಟಕದ ವತಿಯಿಂದ ಎ. 10ರಂದು ಮಧ್ಯಾಹ್ನ 2.15ಕ್ಕೆ ಮಂಗಳೂರು ವೆನಲಾಕ್ ಆಸ್ಪತ್ರೆ ಆವರಣದಲ್ಲಿ ಇರುವ ಆರ್.ಎ.ಪಿ.ಸಿ.ಸಿ ಕಾನ್ಫರೆನ್ಸ್ ಹಾಲ್ ನಲ್ಲಿ ಹೋಮೀಯೋಪತಿ ಪದ್ಧತಿಯ ಜನಕ ಸಾಮುಯಲ್ ಹಾನಿಮನ್ ಜನ್ಮ ದಿನಾಚರಣೆ ಅಂಗವಾಗಿ ವಿಶ್ವ ಹೋಮೀಯೋಪತಿ ದಿನಾಚರಣೆ ಹಾಗೂ ಹೋಮೀಯೋಪತಿ ವೈದ್ಯರ ವಿಚಾರ ಸಂಕಿರಣ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಆಯುಷ್ ಅಧಿಕಾರಿ ಡಾ. ಮೊಹಮ್ಮದ್ ಇಕ್ಬಾಲ್ ಭಾಗವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಹೋಮೀಯೋಪತಿ ತಜ್ಞ ವೈದ್ಯರುಗಳಾದ ಡಾ. ರಾಮಕೃಷ್ಣ ರಾವ್, ಡಾ. ಅನೀಶ್ ಕುಮಾರ್ ಹಾಗೂ ಡಾ. ದೀಪಕ್ ಆರ್. ಡಿ. ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಹೋಮೀಯೋಪತಿ ಕ್ಷೇತ್ರದಲ್ಲಿ ಮಾಡಿದ ಅಪೂರ್ವ ಸಾಧನೆಗೆ ಮಂಗಳೂರಿನ ಪ್ರಸಿದ್ಧ ವೈದ್ಯ ಹಾಗೂ ಹೋಮೀಯೋಪತಿ ಔಷಧ ತಯಾರಿಕಾ ಘಟಕ ಸೇಂಟ್ ಜಾರ್ಜ್ ಹೋಮಿಯೋಪತಿ ಸಂಸ್ಥೆಯ ರೂವಾರಿಗಳಾದ ಡಾ. ಅಬ್ರಹಾಂ ಜಾಕರಿಯಾಸ್ ಹಾಗೂ ಡಾ. ಸೋಫಿಯ ಜಾಕರಿಯಾಸ್ ದಂಪತಿಯನ್ನು ವೈದ್ಯರ ಸಂಘದ ಪರವಾಗಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಪ್ರವೀಣ್ ಕುಮಾರ್ ರೈ ಹಾಗೂ ಮಂಗಳೂರು ಘಟಕದ ಅಧ್ಯಕ್ಷ ಡಾ. ಅವಿನಾಶ್ ವಿ. ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.