- ಕಂಬಳದ ಅಭಿವೃದ್ಧಿಗೆ ಅಕಾಡೆಮಿ ರಚಿಸಲು ಸರಕಾರಕ್ಕೆ ಆಗ್ರಹ
ಉಪ್ಪಿನಂಗಡಿ: ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರಾದ ಉದ್ಯಮಿ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ಎಪ್ರಿಲ್ 2 ಮತ್ತು 3ರಂದು ನಡೆಯುವ ಉಪ್ವಿನಂಗಡಿಯ ವಿಜಯ ವಿಕ್ರಮ ಜೋಡುಕರೆ ಕಂಬಳದ ಕರೆ ಮುಹೂರ್ತ ಫೆ.20ರಂದು ಕೂಟೇಲು ನದಿ ಕಿನಾರೆಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಜಾಗದಲ್ಲಿ ನಡೆಯಿತು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಅರ್ಚಕ ಮಧುಸೂದನ್ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಬಳಿಕ ಕಂಬಳದ ಸಿದ್ಧತೆಯ ಕುರಿತು ಸಮಾಲೋಚನಾ ಸಭೆ ನಡೆಯಿತು.ಕಂಬಳ ಸಮಿತಿಯ ಪದಾಧಿಕಾರಿಗಳಾದ ಉಮೇಶ್ ಶೆಣೈ, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ನಿರಂಜನ ರೈ ಮಠಂತಬೆಟ್ಟು, ಜಯಂತ ಪುರೋಳಿ, ರಾಮಚಂದ್ರ ಮಣಿಯಾಣಿ, ಕೃಷ್ಣಪ್ರಸಾದ್ ಪೆರಿಯಡ್ಕ, ಕಂಗ್ವೆ ವಿಶ್ವನಾಥ ಶೆಟ್ಟಿ, ಜಯಪ್ರಕಾಶ್ ಬದಿನಾರು, ಸದಾಶಿವ ಸಾಮಾನಿ ಸಂಪಿಗೆದಡಿ ಸಹಿತ ಹಲವರು ಭಾಗವಹಿಸಿದ್ದರು.
ಕಂಬಳ ಅಭಿವೃದ್ಧಿಗೆ ಅಕಾಡೆಮಿ ರಚಿಸಲು ಆಗ್ರಹ:
ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೋಡಿಂಬಾಡಿ ಅಶೋಕ್ ಕುಮಾರ್ ರೈ ಮಾತನಾಡಿ ಪ್ರಾಣಿ ದಯಾ ಸಂಘದ ನಾನಾ ಪ್ರಯತ್ನದ ಹೊರತಾಗಿಯೂ ಗ್ರಾಮೀಣ ಕ್ರೀಡೆಯಾಗಿರುವ ಕಂಬಳ ದಿನೇ ದಿನೇ ತನ್ನ ಮೆರಗನ್ನು ಹೆಚ್ಚಿಸುತ್ತಿದೆ. ಕಂಬಳ ಕ್ರೀಡೆಗೆ ಸರ್ಕಾರದಿಂದ ಇನ್ನೂ ಹೆಚ್ಚಿನ ಪ್ರೋತ್ಸಾಹ ಲಭಿಸುವಂತಾಗಲು ಸರಕಾರವು ಕಂಬಳಅಕಾಡೆಮಿಯನ್ನು ರಚಿಸಬೇಕು ಎಂದು ಹೇಳಿದರು.
ಈಗಾಗಲೇ ಗ್ರಾಮೀಣ ಸೊಗಡಿನ ಕಂಬಳ ಕ್ರೀಡೆಗೆ ವಿದೇಶದಲ್ಲೂ ಕುತೂಹಲ ಹೆಚ್ಚಿದ್ದು, ಲಾಕ್‌ಡೌನ್ ಕಾರಣದಿಂದ ಒಂದು ವರ್ಷ ಕಂಬಳ ನಡೆಸಲಾಗದ ಬಗ್ಗೆ ವಿದೇಶಿಗರು ಕಳವಳ ವ್ಯಕ್ತಪಡಿಸುವ ಮಟ್ಟಿಗೆ ಕಂಬಳ ಜಾಗತಿಕ ಮಾನ್ಯತೆಯನ್ನು ಪಡೆದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಭೂಮಿಯಲ್ಲಿ ನಡೆಸಲಾಗುತ್ತಿರುವ ಕಂಬಳ ಕಾರ್ಯದ ಬಗ್ಗೆ ಸ್ವತಃ ಧರ್ಮಾಧಿಕಾರಿಗಳೇ ಸಂತಸ ವ್ಯಕ್ತಪಡಿಸುತ್ತಿದ್ದು, ಕಂಬಳದೊಂದಿಗಿನ ನಂಟು ಹೊಂದಿರುವ ಕಜೆಕ್ಕಾರು ಪರಿಸರದ ಹಲವು ಮನೆಯ ನಿವಾಸಿಗರಿಗೆ ಅವರವರ ಅಡಿ ಸ್ಥಳವನ್ನು ಉಚಿತವಾಗಿ ಕ್ರಯಸಾಧನದ ಮೂಲಕ ಒದಗಿಸಿಕೊಟ್ಟಿರುವುದು ಈ ಸಾತ್ವಿಕ ಕಾರ್ಯದ ಬಗ್ಗೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು ಹೊಂದಿರುವ ಉತ್ತಮ ಭಾವನೆಯ ಪ್ರತೀಕವಾಗಿದೆ ಎಂದರು.
ಕಂಬಳ ಸಮಿತಿ ನಿರಂಜನ ರೈ ಮಠಂತಬೆಟ್ಟು ಸಂದರ್ಭೋಚಿತವಾಗಿ ಮಾತನಾಡಿದರು. ಕಂಬಳ ಸಮಿತಿ ಪದಾಧಿಕಾರಿಗಳಾದ ಎನ್. ಉಮೇಶ್ ಶೆಣೈ, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಜಯಂತ ಪೊರೋಳಿ, ರಾಮಚಂದ್ರ ಮಣಿಯಾಣಿ, ವಿದ್ಯಾಧರ ಜೈನ್, ಪ್ರವೀಣ್ ಕುಮಾರ್, ಜಯಪ್ರಕಾಶ್ ಬದಿನಾರು, ಕಂಗ್ವೆ ವಿಶ್ವನಾಥ ಶೆಟ್ಟಿ, ಸದಾಶಿವ ಸಮಾನಿ, ಮುನೀರ್ ದಾವೂದ್, ಕೃಷ್ಣ ಪ್ರಸಾದ್ ಬೊಳ್ಳಾವು, ಕಬೀರ್ ಕರ್ವೇಲು, ಜಗದೀಶ್ ಕುಮಾರ್, ಕೃಷ್ಣಪ್ಪ ಪೂಜಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯಜನೆಯ ಉಮೇಶ್ ಪೂಜಾರಿ, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.