ಅರಿಯಡ್ಕ: ಕರ್ನಾಟಕ ಸರ್ಕಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಅರಿಯಡ್ಕ ಗ್ರಾಮ ಪಂಚಾಯತ್ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಪುತ್ತೂರು ಮತ್ತು ಪಶು ಆಸ್ಪತ್ರೆ ಪಾಣಾಜೆ ಇದರ ಆಶ್ರಯದಲ್ಲಿ ಪ್ರಾಥಾಮಿಕ ಪಶು ಚಿಕಿತ್ಸಾ ಕೇಂದ್ರ ಕೌಡಿಚ್ಚಾರು ಇದರ ಸಹಯೋಗದಲ್ಲಿ 15 ನೇ ವರ್ಷದ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ ಅ.14 ರಂದು ಶ್ರೀ ಕೃಷ್ಣ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪಶು ಆಸ್ಪತ್ರೆ ಪುತ್ತೂರು ಇದರ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಧರ್ಮಪಾಲ್ ದೀಪ ಬೆಳಗಿಸಿ ಉದ್ಘಾಟಿಸಿ ಮಾಹಿತಿ ನೀಡಿ, ಕಳೆದ 15 ವರ್ಷಗಳಿಂದ ಸತತವಾಗಿ ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆಗಳನ್ನು ನೀಡಲಾಗುತ್ತಿರುವುದು ಸಂತಸ ತಂದಿದೆ.ಸಾಕು ಪ್ರಾಣಿಗಳನ್ನು ಪಾಲಕರು ವಹಿಸ ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ವಿವರವಾಗಿ ಪಾಲಕರಿಂದ ತಿಳಿಸಿ ಕಾರ್ಯ ಕ್ರಮಕ್ಕೆ ಶುಭ ಹಾರೈಸಿದರು.ವೇದಿಕೆಯಲ್ಲಿ ಪಾಣಾಜೆ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಪ್ರಕಾಶ್ ಎಂ.ಪಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮೀನಾಕ್ಷಿ ಪಾಪೆ ಮಜಲು, ಸದಸ್ಯ ಲೋಕೇಶ್ ಚಾಕೋಟೆ ಉಪಸ್ಥಿತರಿದ್ದರು.ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ಸಭಾಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ನಾರಾಯಣ ನಾಯ್ಕ ಚಾಕೋಟೆ, ಅನಿತಾ ಆಚಾರಿ ಮೂಲೆ, ನರಿಮೊಗ್ರು ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಕಾಸಿಂ,ನರಿಮೊಗ್ರು ಪಶು ಆಸ್ಪತ್ರೆಯ ಪಶು ವೈದ್ಯ ಪರಿವೀಕ್ಷಕರಾದ ಪ್ರತಿಮಾ, ಪಶು ಆಸ್ಪತ್ರೆಯ ಸಿಬ್ಬಂದಿಗಳಾದ ಕೀರ್ತನ್, ಪ್ರದೀಪ್, ಸುನಿಲ್ ಕುಮಾರ್,ಸರೋಜ, ಪಶು ಸಖಿಯರಾದ ಸವಿತಾ ಮತ್ತು ಜ್ಯೋತಿ, ಕೊರಗಪ್ಪ ಗೌಡ ಮಡ್ಯಂಗಳ, ದಯಾನಂದ ಗೌಡ ಆಕಾಯಿ, ಶೇಷಪ್ಪ ನಾಯ್ಕ ಮಾಯಿಲ ಕೊಚ್ಚಿ, ಮತ್ತಿತರರು ಉಪಸ್ಥಿತರಿದ್ದರು.

ಪಂಚಾಯತ್ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಸಹಕರಿಸಿದರು, ಸತತ 15 ವರ್ಷ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ವಿತರಿಸಲು ಸಹಕರಿಸಿದ ಇಲಾಖೆಯ ಸಿಬ್ಬಂದಿಗಳಿಗೆ , ಗ್ರಾಮ ಪಂಚಾಯತ್ ಗೆ ,ಕೆ.ಎಂ.ಎಫ್ ಪಾಪೆ ಮಜಲು ,ಜೀವ ಮೆಡಿಕಲ್ಸ್ ಕುಂಬ್ರ, ಶ್ರೀ ಕೃಷ್ಣ ಮೆಡಿಕಲ್ಸ್ ಕೌಡಿಚ್ಚಾರು, ಪ್ರಾಯೋಜಕತ್ವದಲ್ಲಿ ಸ್ಮರಣಿಕೆ ನೀಡಲಾಯಿತು.
ಪಶು ಆಸ್ಪತ್ರೆ ಪುತ್ತೂರು ಇದರ ಜಾನುವಾರು ಅಭಿವೃದ್ಧಿ ಅಧಿಕಾರಿ ಪುಷ್ಪರಾಜ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ , ಸ್ವಾಗತಿಸಿದರು.ಕೌಡಿಚ್ಚಾರು ಹಿರಿಯ ಪಶು ವೈದ್ಯ ಪರಿವೀಕ್ಷಕರಾದ ವೀರಪ್ಪ ಜಮಾದಾರ್ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಅರಿಯಡ್ಕ ಮತ್ತು ಮಾಡ್ನೂರು ಗ್ರಾಮಗಳ 30ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳಲ್ಲಿ 510 ಕ್ಕೂ ಮಿಕ್ಕಿ ನಾಯಿಗಳಿಗೆ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆಗಳನ್ನು ನೀಡಲಾಯಿತು.
ಅರಿಯಡ್ಕ ಗ್ರಾಮ ಪಂಚಾಯತ್ ಸಹಕಾರದಿಂದ ಕಳೆದ 15 ವರ್ಷಗಳಿಂದ ಸತತವಾಗಿ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರವನ್ನು ಏರ್ಪಡಿಸಿ, ಅರಿಯಡ್ಕ ಮತ್ತು ಮಾಡ್ನೂರು ಗ್ರಾಮಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆದು , ಲಸಿಕೆ ನೀಡುತ್ತಿದ್ದೇವೆ. ಈ ಯಶಸ್ವಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಅರಿಯಡ್ಕ ಗ್ರಾಮ ಪಂಚಾಯತ್ ಹಾಗೂ ಉತ್ತಮ ಸ್ಪಂದನೆ ನೀಡಿದ ಸಾರ್ವಜನಿಕರಿಗೆ ಅಭಿನಂದನೆಗಳು.
ವೀರಪ್ಪ ಜಮಾದಾರ್
ಹಿರಿಯ ಪಶು ವೈದ್ಯಪರಿ ವೀಕ್ಷಕರು ಪಶು ಆಸ್ಪತ್ರೆ ಕೌಡಿಚ್ಚಾರು