ಪುತ್ತೂರು: ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿರುವ ಚೊಕ್ಕಾಡಿ ಉಳ್ಳಾಕುಲು ದೈವಸ್ಥಾನವನ್ನು ಮೂಲ ವಂಶಸ್ಥರಿಗೆ ಬಿಟ್ಟುಕೊಡಬೇಕು ಮತ್ತು ದೈವಸ್ಥಾನವನ್ನು ಜೀರ್ಣೋದ್ಧಾರ ಮಾಡುವ ಕುರಿತು ಅಯ್ಯಪ್ಪ ವೃತಧಾರಿಯೊಬ್ಬರ ಮನವಿ ಮತ್ತು ಧರಣಿಗೆ ಸಂಬಂಧಿಸಿ ಪುತ್ತೂರು ಸಹಾಯಕ ಕಮೀಷನರ್ ಜ.13ರಂದು ದೈವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಸಹಾಯಕ ಕಮೀಷನರ್ ಅವರು ಸ್ಥಳ ತನಿಖೆ ಮಾಡಬೇಕೆಂದು ಮನವಿ ಸಲ್ಲಿಸಿದರೂ ಬಂದಿಲ್ಲ ಎಂದು ಅಯ್ಯಪ್ಪ ವೃತಧಾರಿ ಸುಳ್ಯ ಅಮರಮುಡ್ನೂರು ಗ್ರಾಮದ ಹಿಂದುಳಿದ ವರ್ಗಗಳ ಅನುಸೂಚಿತ ಜಾತಿಗಳ ಬುಡಕಟ್ಟು ಜನಾಂಗದ ಜಾಗೃತಿ ಸಮಿತಿ ನಾಮ ನಿರ್ದೇಶಿತ ಸದಸ್ಯರಾಗಿರುವ ಮಂಜುನಾಥ್ ಕುಕ್ಕುಜೆ ಅವರು ಜ.೭ರಂದು ಪುತ್ತೂರು ಗಾಂಧಿಕಟ್ಟೆಯಲ್ಲಿ ಅಮರಣಾಂತ ಉಪವಾಸ ಕೈಗೊಂಡಿದ್ದರು. ಮಾರನೆ ದಿನ ಬೆಳಗ್ಗೆ ತಾಲೂಕು ಆಡಳಿತ ಸೌಧದ ಬಳಿ ಕುಳಿತಿದ್ದರು. ಬೆಳವಣಿಗೆಯಲ್ಲಿ ಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ಅವರು ಧರಣಿ ನಿರತರ ಮಂಜುನಾಥ್ ಕುಕ್ಕುಜೆ ಅವರಿಗೆ ವೀಕೆಂಡ್ ಕರ್ಫ್ಯೂವಿನಲ್ಲಿ ಧರಣಿ ಕುಳಿತಿರುವುದು ಸರಿಯಲ್ಲ. ನಾನು ಸ್ಥಳ ತನಿಖೆಗಾಗಿ ಬರುವುದಾಗಿ ತಿಳಿಸಿದ್ದ ಹಿನ್ನೆಲೆಯಲ್ಲಿ ಮಂಜುನಾಥ್ ಅವರು ಧರಣಿ ಹಿಂಪಡೆದಿದ್ದರು. ಇದೀಗ ಜ.೧೩ರಂದು ಸಹಾಯಕ ಕಮೀಷನರ್ ಅವರು ಚೊಕ್ಕಾಡಿ ಉಳ್ಳಾಕುಲು ದೈವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
https://puttur.suddinews.com/archives/609392