ಪುತ್ತೂರು : ಫೆ.11 ರಂದು ತೆಂಕಿಲದಲ್ಲಿ ನಡೆಯಲಿರುವ ಬೃಹತ್ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರ ಆಗಮನದ ಪೂರ್ವಸಿದ್ಧತೆಯ ಕುರಿತು ವಿವಿಧ ಸಮಿತಿಗಳ ಪೂರ್ವಭಾವಿ ಸಭೆಯು ಫೆ. 4 ರಂದು ಅಪರಾಹ್ನ ನರೇಂದ್ರ ಪ.ಪೂ.ಕಾಲೇಜಿನಲ್ಲಿ ಜರುಗಿತು.
ನರೇಂದ್ರ ಪ.ಪೂ.ಕಾಲೇಜಿನಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿರವರು ಕಾರ್ಯಾಲಯವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಯಶಸ್ಸಿಗಾಗಿ ಅಧಿಕಾರಿಗಳು ಮತ್ತು ಸ್ವಯಂ ಸೇವಕರನ್ನು ಒಳಗೊಂಡಂತಹ ಹಲವು ಸಮಿತಿಗಳನ್ನು ರಚಿಸಲಾಗಿದ್ದು ಅದರಲ್ಲಿ ಮುಖ್ಯವಾಗಿ ಅಧಿಕಾರಿಗಳ ಸಂಪರ್ಕ,ಗಣ್ಯರ ಸಂಪರ್ಕ,ವಸತಿ,ಊಟೋಪಚಾರ,ವಾಹನ ಪಾರ್ಕಿಂಗ್,ವೇದಿಕೆ,ಕುಡಿಯುವ ನೀರು,ಸ್ವಚ್ಛತೆ,ಮಾಧ್ಯಮ,ಪತ್ರಿಕಾ ಪ್ರಚಾರ,ಸೋಶಿಯಲ್ ಮೀಡಿಯಾ,ಮುದ್ರಣ,ಬ್ಯಾನರ್ ಮತ್ತು ಫ್ಲೆಕ್ಸ್,ಸ್ಕ್ವಾಡ್ ಹಾಗೂ ವೈದ್ಯಕಿಯ ಸಮಿತಿಗಳೊಂದಿಗೆ ಇಂದು ಪೂರ್ವಭಾವಿ ಸಭೆಯು ಜರುಗಿತು.ಪ್ರಮುಖರಾದ ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಕುಮಾರ್ ಸಮಿತಿಗಳು ಯಾವ ರೀತಿಯಾಗಿ ಕಾರ್ಯ ನಿರ್ವಹಿಸಬೇಕೆಂದು ಸಂಪೂರ್ಣ ಮಾಹಿತಿಯನ್ನು ಸಭೆಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ,ಮುರಳಿ ಕೃಷ್ಣ ಹಸಂತಡ್ಕ,ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ,ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಕುಮಾರ್,ಕ್ಯಾಂಪ್ಕೋ ಮಾಜಿ ಅಧ್ಯಕ್ಷರಾದ ಸತೀಶ್ಚಂದ್ರ ,ಮೆಸ್ಕಾಂ ನ ನಿರ್ದೇಶಕ ಕಿಶೋರ್ ಬೊಟ್ಯಾಡಿ,ಅಪ್ಪಯ್ಯ ಮಣಿಯಾಣಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಶಿವಪ್ರಸಾದ್ ಇ.,ಖಜಾಂಚಿ ಅಚ್ಯುತ ನಾಯಕ್,ವಿವೇಕಾನಂದ ಪ.ಪೂ,ಕಾಲೇಜಿನ ಅಧ್ಯಕ್ಷ ರವೀಂದ್ರ ರೈ,ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ರವಿನಾರಾಯಣ,ಮುಖ್ಯೋಪಾಧ್ಯಾಯರಾದ ಸತೀಶ್ಕುಮಾರ್ರೈ, ಬೂಡಿಯಾರು ರಾಧಾಕೃಷ್ಣ ರೈ,ನರೇಂದ್ರ ಪ.ಪೂ.ಕಾಲೇಜಿನ ಅಧ್ಯಕ್ಷ ಶ್ರೀಕಾಂತ ಕೊಳತ್ತಾಯ,ಸಂಚಾಲಕ ಸಂತೋಷ ಬಿ.,ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು.