ಸುದ್ದಿ ಕೇಂದ್ರದ ಸದಸ್ಯರಾದವರಿಗೆ, ನೋಂದಾಯಿತರಿಗೆ ಸೇವೆ ಮತ್ತು ರಕ್ಷಣೆ
ಕೃಷಿ ನಮ್ಮ ದೇಶದ ಜೀವಾಳ. ಕೊರೋನಾ ಸಂದರ್ಭದಲ್ಲಿ ಕೃಷಿಯ ಬೆಳವಣಿಗೆಗೆ, ಉತ್ಪನ್ನಗಳ ಮಾರಾಟಕ್ಕೆ, ಸಾಗಾಟಕ್ಕೆ, ಸೇವನೆಗೆ ಯಾವುದೇ ಅಡ್ಡಿ ಆತಂಕ ಇರಲಿಲ್ಲ. ಅದರ ಬದಲು ಪ್ರೋತ್ಸಾಹವೇ ದೊರಕಿತ್ತು ಯಾಕೆಂದರೆ ಅದು ಇಲ್ಲದಿದ್ದರೆ ಬದುಕೇ ಇಲ್ಲ ಎಂಬಂತಾಗಿ ಅದು ಅತ್ಯಂತ ಅಗತ್ಯದ ಸೇವೆಯಾಗಿ ಪರಿಗಣಿಸಲ್ಪಟ್ಟಿತ್ತು. ಉಳಿದ ಯಾವುದೇ ಸಂಪಾದನೆ,ಉತ್ಪಾದನೆ, ಸೇವೆಗಳಿಗಿಂತ ಕೃಷಿಕರ ಸೇವೆ ಪ್ರಾಮುಖ್ಯ, ಶಾಶ್ವತ ಮತ್ತು ಅನಿವಾರ್ಯ ಎಂಬ ಭಾವನೆ ಮೂಡಿದ್ದರಿಂದ ಎಷ್ಟೋ ಜನರು ತಮ್ಮ ಕೆಲಸಗಳನ್ನು ಬಿಟ್ಟು ಕೃಷಿಯ ಕಡೆ ಮುಖಃ ಮಾಡಿದ್ದಾರೆ. ಊರಿಗೆ ಬಂದಿದ್ದಾರೆ. ಹೊಸ ಬದುಕು ಕಟ್ಟಿಕೊಳ್ಳುವುದರೊಂದಿಗೆ ಮಾದರಿಯ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ. ಅದರಿಂದಾಗಿ ಕೃಷಿಗೆ, ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಬರಲಾರಂಬಿಸಿದೆ. ಕೃಷಿಕರ ಜೀವನದ ಮೌಲ್ಯವರ್ಧನೆಯಾಗಿದೆ. ಸುದ್ದಿ ಕೃಷಿ ಮಾಹಿತಿ ಸೇವಾ ಕೇಂದ್ರ ಆ ನಿಟ್ಟಿನಲ್ಲಿ ಕಳೆದ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದೆ. ಕೃಷಿಕರು ಸ್ವತಂತ್ರರಾಗಬೇಕು. ಅವರಿಗೆ (ಕೃಷಿಕರಿಗೆ) ಬೇಕಾದ ಮಾಹಿತಿ, ತರಬೇತಿ ಲಭ್ಯವಾಗಬೇಕು. ಯಾವುದೇ ಹಂಗಿನಲ್ಲಿರಬಾರದು, ಕೃಷಿಕರ ಮನೆ ಬಾಗಿಲಿಗೆ ಸೇವೆ, ಮಾಹಿತಿ ದೊರಕಬೇಕು, ವಸ್ತುಗಳ ಖರೀದಿ ಮಾತ್ತು ಮಾರಾಟ ಅವರಿಗೆ ಉತ್ತಮ ಬೆಲೆ ದೊರಕಬೇಕು. ಎಲ್ಲಿಯೂ ಅವರಿಗೆ ಅನ್ಯಾಯವಾಗಬಾರದು, ಕೃಷಿಕರಿಗೆ ಸಂಪೂರ್ಣ ಸ್ವಾತಂತ್ರ್ಯ ದೊರಕಬೇಕು ಎಂಬುವುದು ಸುದ್ದಿ ಕೃಷಿ ಸೇವಾ ಕೇಂದ್ರದ ಘೋಷಣೆ ಮತ್ತು ಉದ್ದೇಶವಾಗಿದೆ.
ಸುದ್ದಿ ಕೃಷಿ ಸೇವಾ, ಮಾಹಿತಿ ಕೇಂದ್ರವನ್ನು ಸುಳ್ಯ ತಾಲೂಕಿನಲ್ಲಿ ತೆರೆಯಲಾಗಿದೆ. ಪುತ್ತೂರು, ಬೆಳ್ತಂಗಡಿಗಳಲ್ಲಿ ಶೀಘ್ರದಲ್ಲಿ ತೆರೆಯಲಿದ್ದೆವೆ. ತಾಲೂಕಿನ ಗ್ರಾಮ ಗ್ರಾಮಗಳಲ್ಲಿ ಸುದ್ದಿ ಕೃಷಿ ಸೇವಾ ಕೇಂದ್ರ ತೆರೆದು ಪ್ರತಿನಿಧಿಗಳನ್ನು ನೇಮಕ ಮಾಡಲಾಗುವುದು. ಯಾವುದೇ ಕೃಷಿಕರು ಮಾಹಿತಿ, ಸೇವೆ, ಮಾರಾಟ, ಖರೀದಿಯಲ್ಲಿ ಅನ್ಯಾಯಕ್ಕೆ ಒಳಗಾಗದಂತೆ ರಕ್ಷಣೆ ಪಡೆಯುವ ಕೇಂದ್ರ ಇದಾಗಲಿದೆ. ಈ ಕೇಂದ್ರದಲ್ಲಿ ನೋಂದಾವಣೆ ಮಾಡಿದವರು ಮತ್ತು ಸದಸ್ಯರಾದವರಿಗೆ ಆ ವಿಶೇಷ ಸೌಲಭ್ಯ ದೊರಕಲಿದೆ ಎಂದು ತಿಳಿಸಲು ಸಂತೋಷ ಪಡುತ್ತೇವೆ.