ಕಾಣಿಯೂರು : ತುಳುನಾಡಿನ ಅತ್ಯಂತ ಪುರಾತನ ಸುಮಾರು 800 ವರ್ಷದ ಇತಿಹಾಸವಿರುವ ಕಾರಣಿಕ ಕ್ಷೇತ್ರವಾಗಿರುವ ಚಾರ್ವಾಕ ಗ್ರಾಮದ ದೈಪಿಲ ಶ್ರೀ ಶಿರಾಡಿ ರಾಜನ್ ದೈವಸ್ಥಾನದಲ್ಲಿ ಶ್ರೀ ಶಿರಾಡಿ ರಾಜನ್ ದೈವ ಮತ್ತು ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ನೇಮೋತ್ಸವವು ಫೆ 8ರಂದು ವಿಜ್ರಂಭಣೆಯಿಂದ ನಡೆಯಿತು.
ಫೆ.7ರಂದು ದೈಪಿಲ ಸ್ಥಾನದಲ್ಲಿ ಸ್ಥಳಶುದ್ಧಿ ಹಾಗೂ ಗಣಪತಿ ಹೋಮ ನಡೆದು ಬಳಿಕ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಿತು. ಫೆ.8ರಂದು ನೇಮೋತ್ಸವ, ಸೇವೆಗಳನ್ನು ಮತ್ತು ಹರಕೆಗಳನ್ನು ಒಪ್ಪಿಸುವ ಕಾರ್ಯಕ್ರಮ, ಅಪರಾಹ್ನ ಗಡಿಗೆ ಬಿಂದು ಒಪ್ಪಿಸುವ ಕಾರ್ಯಕ್ರಮ ನಡೆದು, ಬಳಿಕ ಅನ್ನಸಂತರ್ಪಣೆ ನಡೆಯಿತು.
ಚಂದ್ರಕಲಾ ಜಯರಾಮ್ ಅರುವಗುತ್ತು, ಪ್ರದೀಪ್ ಆರ್. ಗೌಡ, ವಚನಾ ಪ್ರದೀಪ್ ಮತ್ತು ನಾಲ್ಕು ಮನೆಯವರು, 14 ವರ್ಗದವರು ಉಪಸ್ಥಿತರಿದ್ದು, ಭಕ್ತಾಧಿಗಳನ್ನು ಸ್ವಾಗತಿಸಿ, ಶ್ರೀ ದೈವದ ಪ್ರಸಾದ ನೀಡಿ ಸತ್ಕರಿಸಿದರು. ಹಲವಾರು ಮಂದಿ ಭಕ್ತಾದಿಗಳು ಭಾಗವಹಿಸಿ ಕ್ಷೇತ್ರದ ನೇಮೋತ್ಸವದ ವೈಭವವನ್ನು ನೋಡಿ ಕಣ್ತುಂಬಿಕೊಂಡರು.
ಸುದ್ದಿಯಲ್ಲಿ ನೇರಪ್ರಸಾರ: ಫೆ 8ರಂದು ದೈಪಿಲ ಕ್ಷೇತ್ರದಲ್ಲಿ ನಡೆದ ನೇಮೋತ್ಸವವು ಸುದ್ದಿ ಯೂ ಟ್ಯೂಬ್ ಹಾಗೂ ಫೇಸ್ ಬುಕ್ ಪೇಜ್ನಲ್ಲಿ ನೇರ ಪ್ರಸಾರಗೊಂಡಿದ್ದು ಸಾವಿರಾರು ಮಂದಿ ವೀಕ್ಷಣೆ ಮಾಡಿದರು