ಪುತ್ತೂರು: ನೆ.ಮುಡ್ನೂರು ಗ್ರಾಮದ ಗೋಳಿದಡಿ ಸ.ಹಿ.ಪ್ರಾ. ಶಾಲೆಯಲ್ಲಿ ಕಲಿತ 2002ರಿಂದ 2009 ವರೆಗಿನ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಶಾಲೆಯಲ್ಲಿ ಹಿಂದೆ ನಿವೃತ್ತ ಮುಖ್ಯಗುರು ಮುರಳಿಧರ ರಾವ್, ಕುಂಞಿ ರಾಮ ಕೆ. ವಿ., ನಿವೃತ್ತ ಮುಖ್ಯ ಗುರುಗಳು, ಸಹಶಿಕ್ಷಕರಾದ ವಿದ್ಯಾಸರಸ್ವತಿ ಕಡೆಶಿವಾಲಯ, ಜಯಶ್ರೀ ಸುಳ್ಯ, ಕೈಕಾರ ಶಾಲಾ ಮುಖ್ಯಗುರು ರಾಮಣ್ಣ ರೈ ಕರ್ನೂರು, ಕೃಷ್ಣ ಮಧುರ್ ನಿವೃತ್ತ ಅಧಿಕಾರಿಗಳು, ಪರ್ಲಡ್ಕ ಶಾಲಾ ಪ್ರಭಾರ ಮಖ್ಯಗುರು ವತ್ಸಲ, ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಪೂರ್ಣಿಮಾ ಕುಂಟಾರು, ಕುಸುಮ ಪೆರಿಯಾ, ಮಾಲತಿ ಕಾಣಿಯೂರು, ಪ್ರೀತ ಮಂಗಳೂರು ಭಾಗವಹಿಸಿದ್ದರು. ಸಿಂಸಾರ್ ಸ್ವಾಗತಿಸಿ, ಹೇಮಲತ ಸಿ. ವಂದಿಸಿದರು. ದಿವ್ಯ ತುಳಸಿ ಕೆ. ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯಗುರು ವಿದ್ಯಾ ಕುಮಾರಿ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಲತಾ, ಶಾಹಿನಾ ಬೇಗಂ ಕಾರ್ಯಕ್ರಮ ಸಂಯೋಜಿಸಿದರು. ಅಬ್ದುಲ್ ಖಾದರ್ ಸಹಕಾರ ನೀಡಿದರು. ಅಡುಗೆ ಸಿಬ್ಬಂದಿಗಳು ಊರವರು ಸಹಕರಿಸಿದರು. ಗೋಳಿದಡಿ ಶಾಲೆ ಇತಿಹಾಸದಲ್ಲಿ ಪ್ರಥಮ ಬಾರಿಗೆ ಇಂತಹ ಒಂದು ಕಾರ್ಯಕ್ರಮ ನಡೆದಿದ್ದು ಪಾಲ್ಗೊಂಡವರು ಸಿಹಿ ಕಹಿ ಹಂಚಿಕೊಂಡರು. ನಂತರ ಸಹಭೋಜನ ನಡೆಯಿತು.
Home ಇತ್ತೀಚಿನ ಸುದ್ದಿಗಳು ಅಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಗಡಿನಾಡಿನ ಗೋಳಿದಡಿ ಶಾಲೆಹಿರಿಯ ವಿದ್ಯಾರ್ಥಿಗಳ ಸಮ್ಮಿಲನ – ಶಿಕ್ಷಕರಿಗೆ ಗೌರವಾರ್ಪಣೆ