ಪುಣ್ಚತ್ತಾರು ಬೀರ್ನೇಲು ದೇವರಗದ್ದೆಯಲ್ಲಿ “ಕೆಸರ್ ಡ್ ಒಂಜಿ ದಿನ” ಕ್ರೀಡಾಕೂಟದ ಸಂಭ್ರಮ

0

ಕಾಣಿಯೂರು: ಕಾಣಿಯೂರು ಗ್ರಾಮದ ಪುಣ್ಚತ್ತಾರು ಬೀರ್ನೇಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಕೆಸರುಗದ್ದೆ ಕ್ರೀಡಾಕೂಟ ಸಮಿತಿ ವತಿಯಿಂದ ಕ್ಷೇತ್ರದ ದೇವರಗದ್ದೆಯಲ್ಲಿ ಪೆ. 12 ರಂದು ನಡೆದ ಕೆಸರ್ ಡ್ ಒಂಜಿ ದಿನ ಕ್ರೀಡಾ ಕೂಟವು ವಿಜೃಂಭಣೆಯಿಂದ ಸಂಪನ್ನಗೊಂಡಿತು. ಸಂಜೆ ನಡೆದ ವಿಜೇತರಿಗೆ ಬಹುಮಾನ ವಿತರಣಾ ಸಂದರ್ಭದಲ್ಲಿ ಕೆಸರುಗದ್ದೆ ಕ್ರೀಡಾಕೂಟ ಸಮಿತಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ ಬೀರ್ನೇಲು, ಶ್ರೀ ಕ್ಷೇತ್ರದ ಮೊಕ್ತೇಸರರಾದ ಕೃಷ್ಣಪ್ಪ ಗೌಡ ಬೀರ್ನೇಲು, ವಸಂತ ಗೌಡ ಬೀರ್ನೇಲು, ಪುರುಷೋತ್ತಮ ಗೌಡ ಬೀರ್ನೇಲು, ಕುಸುಮಾಧರ ಗೌಡ ಬೀರ್ನೇಲು, ಕ್ಷೇತ್ರದ ಪ್ರಧಾನ ಅರ್ಚಕ ಚಿದಾನಂದ ಉಪಾಧ್ಯಾಯ, ಕಾರ್ಯದರ್ಶಿ ಸುಗುಣ ಬೀರ್ನೇಲು, ಉಪಾಧ್ಯಕ್ಷ ಹರೀಶ್ ಬೀರ್ನೇಲು, ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಪೈಕ, ಕೋಶಾಧಿಕಾರಿ ಪ್ರವೀಣ್ ಬೀರ್ನೇಲು, ಸಹ ಕಾರ್ಯದರ್ಶಿಗಳಾದ ಭವಿಷ್ ಕರಿಮಜಲು, ದೇವಿಪ್ರಸಾದ್ ಬೀರ್ನೇಲು, ಸುಲಕ್ಷಣ್ ರೈ ಪೈಕ, ಹರೀಶ್ ಪೈಕ, ಪ್ರಶಾಂತ್ ಮುರುಳ್ಯ, ಹರೀಶ್ ಕಟೀಲ್ ಪೈಕ, ಏಲಡ್ಕ ದಿ ಪವರ್ ಸೋಲಾರ್ ಸಂಸ್ಥೆಯ ಮಾಲಕ ರಾಧಾಕೃಷ್ಣ ಎಚ್, ಯುವರಾಜ್ ಮತ್ತಿತರರು ಉಪಸ್ಥಿತರಿದ್ದರು. ವಿ.ಜೆ ವಿಖ್ಯಾತ್ ಸುಳ್ಯ ವೀಕ್ಷಕ ವಿವರಣೆ ನೀಡಿದರು. ಪ್ರದೀಪ್ ಎಣ್ಮೂರು ಕಾರ್ಯಕ್ರಮ ನಿರೂಪಿಸಿದರು.

ಪುಣ್ಚತ್ತಾರು ಬೀರ್ನೇಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಕೆಸರ್ ಡ್ ಒಂಜಿ ದಿನ ಕ್ರೀಡಾ ಕೂಟ ನಡೆಯಿತು. ಪುರುಷರ ಮುಕ್ತ ಕೆಸರುಗದ್ದೆ ಹಗ್ಗಜಗ್ಗಾಟ, ಪುರುಷರ ಮುಕ್ತ ಕೆಸರು ಗದ್ದೆ ವಾಲಿಬಾಲ್ ಪಂದ್ಯಾಟ, ಮಹಿಳೆಯರ ಕೆಸರು ಗದ್ದೆ ಹಗ್ಗಜಗ್ಗಾಟ, ಮಹಿಳೆಯರ ಅಹ್ವಾನಿತ ತ್ರೋಬಾಲ್ ಪಂದ್ಯಾಟ ಮತ್ತು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಇತರ ಆಟೋಟ ಸ್ಪರ್ಧೆಗಳು ನಡೆಯಿತು. ಪುರುಷರ ಮುಕ್ತ ಕೆಸರುಗದ್ದೆ ಹಗ್ಗಜಗ್ಗಾಟದಲ್ಲಿ ಅತಿಥಿ ಫ್ರೆಂಡ್ಸ್ ನಿಂತಿಕಲ್ಲು ಪ್ರಥಮ ಸ್ಥಾನ ಪಡೆದರೆ, ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಪುಣ್ಚತ್ತಾರು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಪುರುಷರ ಮುಕ್ತ ಕೆಸರುಗದ್ದೆ ವಾಲಿಬಾಲ್ ಪಂದ್ಯಾಟದಲ್ಲಿ ಶ್ರೀಹರಿ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಪುಣ್ಚತ್ತಾರು ಪ್ರಥಮ ಸ್ಥಾನ ಪಡೆದುಕೊಂಡರೆ, RYC ಏನೇಕಲ್ಲ ದ್ವಿತೀಯ ಸ್ಥಾನ ಪಡೆದುಕೊಂಡಿತು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಪ್ರಿಯಾ ಮತ್ತು ತಂಡ ಪ್ರಥಮ ಸ್ಥಾನ ಪಡೆದು, ವಿಶಾಲಾಕ್ಷಿ ಮತ್ತು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here