ಪುತ್ತೂರು: ಜನವರಿ 26ರಿಂದ 29ರ ವರೆಗೆ ಜರುಗಿದ ಕಬಕ ಗ್ರಾಮದ ಪೋಳ್ಯ ಲಕ್ಷ್ಮೀ ಶ್ರೀವೆಂಕಟರಮಣ ಮಠದ ವಾರ್ಷಿಕ ಜಾತ್ರೆ ಹಾಗೂ ಸ್ಥಾನೀಯ ದೈವಗಳ ನೇಮೋತ್ಸವ ಯಶಸ್ವಿ ಸಂಪನ್ನಗೊಂಡ ಹಿನ್ನಲೆಯಲ್ಲಿ ಭಕ್ತರ ಹಾಗೂ ಉತ್ಸವ ಸಮೀತಿಯ, ಆಡಳಿತ ಮಂಡಳಿ ವತಿಯಿಂದ ಕೃತಜ್ಞತಾ ಸಭೆ ದೇವಸ್ಥಾನದ ವಠಾರದಲ್ಲಿ ನಡೆಯುತು.
ಶ್ರೀದೇವಳದ ಆಡಳಿತ ಮಂಡಳಿ ಅಧ್ಯಕ್ಷ ಉಮಾಶಂಕರ ಎದುರ್ಕಳ ಸ್ವಾಗತಿಸಿ ಜಾತ್ರೋತ್ಸವದ ವರದಿ ವಿವರಿಸಿದರು. ಉತ್ಸವ ಸಮಿತಿ, ಸಹಕರಿಸಿದ ಸ್ವ ಸಹಾಯ ಸಂಘ ಸಂಸ್ಥೆಗಳು ಹಾಗೂ ಭಕ್ತರ ಪಾಲ್ಗೊಳ್ಳುವಿಕೆ ಹಾಗೂ ಸಹಕಾರಕ್ಕಾಗಿ ಕೃತಜ್ಞತೆ ತಿಳಿಸಿದರು.
ಮುಂದಿನ ವರ್ಷ ಶ್ರೀಲಕ್ಷ್ಮೀ ವೆಂಕಟರಮಣ ದೇವರಿಗೆ ಬ್ರಹ್ಮಕಲಶೋತ್ಸವ ಹಿನ್ನಲೆಯಲ್ಲಿ ಹೆಚ್ಚಿನ ಸಹಕಾರ ಹಾಗೂ ತನು-ಮನ-ಧನ ಸಹಾಯದ ನಿರೀಕ್ಷೆಯನ್ನು ವ್ಯಕ್ತಪಡಿಸಿದರು. ಜಾತ್ರೆಯ ಕುಂದುಕೊರತೆಗಳನ್ನು ಚರ್ಚಿಸಲಾಯಿತು.
ಉತ್ಸವ ಸಮಿತಿ ಅದ್ಯಕ್ಷ ಡಾ. ಕೃಷ್ಣ ಪ್ರಸನ್ನರವರು ತಿರುಪತಿ ಮೂಲದೇವರ ಭಾವಚಿತ್ರದ ಸ್ಮರಣಿಕೆಯನ್ನು ಎಲ್ಲರಿಗೂ ವಿತರಿಸಿದರು. ಉತ್ಸವ ಸಮಿತಿ ಕಾರ್ಯದರ್ಶಿ ಸುದರ್ಶನ್ ವಂದಿಸಿದರು.