ಪುತ್ತೂರು: ಗಡಿನಾಡ ಧ್ವನಿ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಇದರ ಆರನೇ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ಪ್ರೇಮ್‌ರಾಜ್ ಆರ್ಲಪದವು ಅವರನ್ನು ಕಲಾ ಭೂಷಣ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿರುತ್ತಾರೆ.
ಪ್ರಶಸ್ತಿ ಪ್ರದಾನ ಮಹಾಸಮ್ಮೇಳನವು ಗಡಿನಾಡ ಪ್ರದೇಶವಾದ ಒಡ್ಯ ಸಹಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಫೆ. 25ರಂದು ನಡೆಯಲಿದೆ ಎಂದು ಗಡಿನಾಡ ಧ್ವನಿಯ ಅಧ್ಯಕ್ಷ ಡಾ. ಹಾಜಿ ಎಸ್. ಅಬೂಬಕ್ಕರ್ ಆರ್ಲಪದವು, ಪ್ರ.ಕಾರ್ಯದರ್ಶಿ ಈಶ್ವರ ಭಟ್ ಕಡಂದೇಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಾ ಕ್ಷೇತ್ರಗಳಲ್ಲಿ ನಾಡಿಗೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ನೀಡಲ್ಪಡುವ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಇವರು ಕನ್ನಡ ಕಿರುಚಿತ್ರಗಳಾದ ನಿಸ್ವಾರ್ಥ, ಸ್ವಭಾವ, ಸುಜಲಾಂ, ಅಗ್ನಿವೀರ್, ನಿರಾಕರಣ, ಪಾಂಚಜನ್ಯ ಹಾಗೂ ಆಲ್ಬಂ ಸಾಂಗ್‌ಗಳಾದ ಸುಳಿಯೊಳಗೆ, ಭಾವ ಮಂಜರಿ, ಅನಿರೀಕ್ಷಿತದ ನಿರ್ದೇಶನ ಮಾಡಿರುತ್ತಾರೆ. ಕನ್ನಡ, ತುಳು, ಕೊಂಕಣಿ ಚಿತ್ರಗಳು, ಭರತನಾಟ್ಯ, ನಾಟಕಗಳಲ್ಲಿ ಮೇಕಪ್ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.