ನೆಲ್ಯಾಡಿ: ಬಜತ್ತೂರು ಗ್ರಾಮದ ಮಣಿಕ್ಕಳ ಮೂವರು ದೈವಗಳ ಕ್ಷೇತ್ರದಲ್ಲಿ ನೂತನ ಮಾಡದ ಪ್ರತಿಷ್ಠಾ ಕಾರ್ಯಕ್ರಮಕ್ಕೆ ತೋರಣ ಮುಹೂರ್ತ ಹಾಗೂ ಉಗ್ರಾಣ ಮುಹೂರ್ತದ ಮೂಲಕ ಫೆ.23ರಂದು ಚಾಲನೆ ನೀಡಲಾಯಿತು.
ಬೆಳಿಗ್ಗೆ 10-50ಕ್ಕೆ ನಡ್ಪ ವಿಷ್ಣುಮೂರ್ತಿ ದೇವಳದ ಪ್ರಧಾನ ಅರ್ಚಕರಾದ ನಾರಾಯಣ ಬಡೆಕ್ಕಿಲ್ಲಾಯ ಅವರ ತಂಡ ಧಾರ್ಮಿಕ ವಿಧಿವಿಧಾನಗಳ ಮೂಲಕ ತೋರಣ ಮಹೂರ್ತ ಹಾಗೂ ಗಂಟೆ 11-05ಕ್ಕೆ ಉಗ್ರಾಣ ಮಹೂರ್ತ ಕಾರ್ಯಗಳನ್ನು ನೆರವೇರಿಸಿದರು. ನಂತರ ಗಂಟೆ 11-45ಕ್ಕೆ ಮಣಿಕ್ಕಳ ಬೈಲು, ವಿದ್ಯಾನಗರ ಬೆದ್ರೋಡಿ, ವಳಾಲು ಪಡ್ಪು, ಮುದ್ಯ, ಕಾಂಚನ, ಮುಗೇರಡ್ಕ ಮತ್ತಿತರ ಪ್ರದೇಶಗಳಿಂದ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಿತು. ವಾಹನಗಳಲ್ಲಿ ಹಸಿರು ಹೊರೆಕಾಣಿಕೆಗಳನ್ನು ವಿದ್ಯಾನಗರ ಬೆದ್ರೋಡಿಗೆ ತಂದು ಅಲ್ಲಿಂದ ಮೆರವಣಿಗೆ ಮೂಲಕ ಮಣಿಕ್ಕಳ ಮೂವರು ದೈವಗಳ ಕ್ಷೇತ್ರದ ನೂತನ ಮಾಡಕ್ಕೆ ತರಲಾಯಿತು. ವಾದ್ಯಮೇಳ, ಗೊಂಬೆಕುಣಿತ ಮೆರವಣಿಗೆಯ ಆಕರ್ಷಣೆಯಾಗಿತ್ತು. ಸುಮಾರು 300 ಮಂದಿ ಪುರುಷರು ಹಾಗೂ ಮಹಿಳೆಯರು ಈ ಹೊರೆಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸಂಜೆ ದೇವತಾ ಪ್ರಾರ್ಥನೆ, ಆಚಾರ್ಯಾ ಋತ್ವಿಗ್ವರಣ, ಸ್ವಸ್ತಿಪುಣ್ಯಾಹ, ವಾಚನ, ಸಪ್ತಶುದ್ಧಿ, ಪ್ರಸಾದಶುದ್ದಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ಬಿಂಬಾಧಿವಾಸ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು. ರಾತ್ರಿ ಅನ್ನಸಂತರ್ಪಣೆ ನಡೆಯಿತು.
ತೋರಣಮುಹೂರ್ತ, ಉಗ್ರಾಣ ಮುಹೂರ್ತ ಹಾಗೂ ಹೊರೆಕಾಣಿಕಾ ಮೆರವಣಿಗೆಯಲ್ಲಿ ಕಾಂಚನ ತಲೆಮನೆಯ ರೋಹಿಣಿ ಸುಬ್ಬರತ್ನಂ, ಶೇಡಿ ದಾಮೋದರ ಗೌಡ, ಸುಳ್ಯ ಕುಶಾಲಪ್ಪ ಗೌಡ, ಗ್ರಾ.ಪಂ. ಸದಸ್ಯ ಮೋನಪ್ಪ ಗೌಡ ಬೆದ್ರೋಡಿ, ಸುಳ್ಯ ಹೊನ್ನಪ್ಪ ಗೌಡ, ವಸಂತ ಗೌಡ ಪಿಜಕ್ಕಳ, ಆರಾಲು ತಿಮ್ಮಪ್ಪ ಗೌಡ, ಉಗ್ರಾಣಿ ಲಿಂಗಪ್ಪ ಗೌಡ, ಮಣಿಕ್ಕಳ ಸಮಸ್ತ ದೈವಗಳ ಸೇವಾ ಸಮಿತಿಯ ಜಗದೀಶರಾವ್ ಮಿನ್ನಾವು, ರಘುವೀರರಾವ್ ಮಣಿಕ್ಕಳ, ಮುರಳೀಧರ ರಾವ್ ಮಣಿಕ್ಕಳ, ಹೊನ್ನಪ್ಪ ಗೌಡ ಕುದುರು, ರಾಮಣ್ಣ ಗೌಡ ಮೇಲಿನ ಮನೆ, ದೇರಣ್ಣ ಗೌಡ ಓಮಂದೂರು, ಲಿಂಗಪ್ಪ ಗೌಡ ಆರಕರೆ, ಸುಧಾಕರ ನಾತೊಟ್ಟು, ರಮೇಶ್ ಬರೆಮೇಲು, ಯೋಗೀಶ್ ಗೌಡ ಹೊಸಮನೆ, ಅಕ್ಷಯ್ ನಾಗೋಜಿ, ಚೇತನ್ ಕುದುರು, ಲೋಕೇಶ್ ಗೌಡ ಓಲೆಬಳ್ಳಿ, ಮಾಜಿ ಯೋಧ ವಿಶ್ವನಾಥ ಗೌಡ ಮಾಯಿತಾಲ್, ವಿಠಲ ಗೌಡ ನಾಗೋಜಿ, ಮೋನಪ್ಪ ಗೌಡ ನಾಗೋಜಿ, ಸದಾಶಿವ ಗೌಡ ನಾಗೋಜಿ, ಉಮೇಶ್ ಮಾಯಿತಾಲು, ಧನಂಜಯ ಗೌಡ ಪಾಲೆತ್ತಾಡಿ, ಉಮೇಶ್ ಓಮಂದೂರು, ದಿನೇಶ್ ಓಮಂದೂರು, ಯಶೋಧರ ಗೌಡ ಬೈರುಮಾರು, ಧನಂಜಯ ಗೌಡ ಗುತ್ತಿಮಾರು, ಶೀತಲ್ ನಾಗೋಜಿ, ರಂಜಿತ್ ನಾಗೋಜಿ, ವೀರಪ್ಪ ಗೌಡ ಓಮಂದೂರು ಮತ್ತಿತರ ಪ್ರಮುಖರು ಭಾಗವಹಿಸಿದ್ದರು.
ಇಂದು ಪ್ರತಿಷ್ಠೆ, ಕಲಶಾಭಿಷೇಕ
ಫೆ.24ರಂದು ಬೆಳಿಗ್ಗೆ ಗಂಟೆ 7ರಿಂದ ಗಣಪತಿ ಹೋಮ, ಪ್ರತಿಷ್ಠಾಹೋಮ, ಕಲಶಾರಾಧನೆ ಹಾಗೂ ನಾಗತಂಬಿಲ, ಉದ್ಭವತಾಣವಾದ ಮರೋಜಿಕಾನದಲ್ಲಿ ತಂಬಿಲ, ಸ್ಥಾನ ಚಾವಡಿಯಲ್ಲಿ ತಂಬಿಲ, ಪವಮಾನ ಹೋಮ, ಗಂಟೆ 11.24ಕ್ಕೆ ದೈವತಾ ಪ್ರತಿಷ್ಠೆ, ಕಲಶಾಭಿಷೇಕ, ಆಶ್ಲೇಷಾಬಲಿ, ಮಹಾಪೂಜೆ, ಪ್ರಸಾದವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ಈ ಧಾರ್ಮಿಕ ವಿಧಿವಿಧಾನಗಳು ನೀಲೇಶ್ವರ ವೇದಮೂರ್ತಿ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕರಾದ ನಾರಾಯಣ ಬಡೆಕ್ಕಿಲ್ಲಾಯ ಅವರ ನೇತೃತ್ವದಲ್ಲಿ ನಡೆಯಲಿದೆ. ಫೆ.28ರಂದು ಮೂವರು ದೈವಗಳಿಗೆ ವಾರ್ಷಿಕ ನೇಮೋತ್ಸವ ಜರಗಲಿದೆ.