ನಗರಸಭೆ: ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ ವಿವಿಧ ಸವಲತ್ತಿಗೆ ನೆರವು ಪತ್ರ ವಿತರಣೆ

0

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ನಗರಸಭೆ ಮತ್ತು ನಗರೋತ್ಥಾನದ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತ್ತುಪರಿಶಿಷ್ಟ ಪಂಗಡದ ಫಲಾನುಭವಿಗಳಗೆ ಹೊಸಮನೆ ನಿರ್ಮಾಣ, ಮನೆ ದುರಸ್ಥಿಗೆ ಸಹಿತ ಹಲವು ಸೌಲಭ್ಯಗಳಿಗೆ ನೆರವು ಪತ್ರ ವಿತರಣೆ ಕಾರ್ಯಕ್ರಮ ಫೆ. 23ರಂದು ನಗರಸಭೆ ಸಭಾಂಗಣದಲ್ಲಿ ನಡೆಯಿತು.

ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಸಾಂಕೇತಿಕವಾಗಿ ನೆರವು ಪತ್ರ ವಿತರಿಸಿ ಮಾತನಾಡಿ, ಹೊಸ ಮನೆ ರಚನೆಗೆ 35 ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಹಾಗು ಇತರ ಜಾತಿಯಲ್ಲಿ ಶೇ.5ರಂತೆ 11 ಮಂದಿಗೆ, ಮನೆ ದುರಸ್ತಿಗೆ 55 ಮಂದಿ ಎಸ್ಸಿ, ಎಸ್ಟಿಗಳಿಗೆ, ಇತರ ಜಾತಿಗೆ ಶೇ.7.25ರಂತೆ 149 ಮಂದಿಗೆ, 9 ಮಂದಿಗೆ ಶೌಚಾಲಯ ರಚನೆ, ಮೂವರಿಗೆ ವಿದ್ಯುತ್ ಜೋಡಣೆ, 7 ಮಂದಿಗೆ ನೀರಿನ ಸಂಪರ್ಕ, ಶೇ.5ರಲ್ಲಿ ವಾಹನ ಖರೀದಿಗೆ 7 ಮಂದಿಗೆ ಸೌಲಭ್ಯ ವಿತರಣೆ ಮಾಡಲಿದ್ದೇವೆ ಎಂದು ಅವರು ಹೇಳಿದರು.

ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ಪೌರಾಯುಕ್ತ ಮಧು ಎಸ್ ಮನೋಹರ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here