ಪುತ್ತೂರು: ತೆಂಕಿಲ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಗರಡಿಯಲ್ಲಿ ಮೊಗೇರ್ಕಳ ಹಾಗು ಕೊರಗ ತನಿಯ ದೈವದ ನೇಮೋತ್ಸವ ಮಾ.3 ರಿಂದ 5 ರ ತನಕ ನಡೆಯಲಿದೆ.
ಮಾ.3ರಂದು ಬೆಳಿಗ್ಗೆ ಸ್ಥಳ ಶುದ್ದಿ, ಗಣಪತಿ ಹೋಮ, ರಾತ್ರಿ ಅನ್ನಸಂತರ್ಪಣೆ ಬಳಿಕ ಗುಳಿಗ ದೈವದ ನೇಮೋತ್ಸವ ನಡೆಯಲಿದೆ ಮಾ.4ರಂದು ರಾತ್ರಿ ಭಂಡಾರ ತೆಗೆದು, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 9 ಕ್ಕೆ ಮೊಗೇರ್ಕಳ ದೈವ ಗರಡಿ ಇಳಿಯುವುದು, ರಾತ್ರಿ ಗಂಟೆ 12 ಕ್ಕೆ ತನ್ನಿಮಾನಿಗ ಗರಡಿ ಇಳಿಯುವುದು. ಮಾ.೫ರಂದು ಬೆಳಿಗ್ಗೆ ಗಂಟೆ 6 ರಿಂದ ಕೊರಗ ತನಿಯ ದೈವದ ನೇಮೋತ್ಸವ ನಡೆಯಲಿದೆ.
ಮೊಗೇರ ದೈವಗಳಿಗೆ ಮಂಜ ಸೇವೆ, ಕೊರಗ ತನಿಯ ದೈವಕ್ಕೆ ಅಗೇಲು ಸೇವೆ ಕೋಲ ಸೇವೆಗಳಿಗೆ ಭಕ್ತರಿಗೆ ಅವಕಾಶವಿದೆ. ಮೂರು ದಿನಗಳು ನಡೆಯುವ ನೇಮೋತ್ಸದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿ ಅಧ್ಯಕ್ಷ ಲೋಹಿತ್ ತೆಂಕಿಲ, ಕಾರ್ಯದರ್ಶಿ ಗಣೇಶ್ ಟಿ. ತೆಂಕಿಲ, ಕೋಶಾಧಿಕಾರಿ ಸುರೇಂದ್ರ ಟಿ.ಕಮ್ನಾರು ಅವರು ತಿಳಿಸಿದ್ದಾರೆ.