





ಪುತ್ತೂರು: ಸೀರೆಗಳ ಖರೀದಿಗೆ ಮಹಿಳೆಯ ಅಚ್ಚು ಮೆಚ್ಚಿನ ತಾಣವಾಗಿರುವ ಪಿಎಸ್‌ಆರ್ ಸಿಲ್ಕ್ ಸಾರೀಸ್‌ನವರು ಎರಡು ದಿನಗಳ ಕಾಲ ದರ್ಬೆ ಬೈಪಾಸ್ ರಸ್ತೆಯ ಅಶ್ವಿನಿ ಹೋಟೇಲ್ ಸಭಾಂಗಣದಲ್ಲಿ ಆಯೋಜಿಸಿರುವ ಸೀರೆಗಳ ಪ್ರದರ್ಶನ ಮತ್ತು ಮಾರಾಟವು ಮಾ.3ರಂದು ಪ್ರಾರಂಭಗೊಂಡಿದೆ.








ಕೊಯಂಬತ್ತೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಪಿಎಸ್‌ಆರ್ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ರಸ್ತೆಯಲ್ಲಿ ತನ್ನ ಶಾಖೆಯನ್ನು ಹೊಂದಿದೆ. ಸಂಸ್ಥೆಯ ಮಂಗಳೂರು ಶಾಖೆಯ ಮುಖಾಂತರ ಪ್ರತಿ ವರ್ಷದಂತೆ ಈ ವರ್ಷವೂ ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಿದ್ದು, ರೇಷ್ಮೆ ಸೀರೆಗಳು, ಕಾಟನ್ ಸೀರೆಗಳು, ಫ್ಯಾನ್ಸಿ ಸೀರೆಗಳು ಹಾಗೂ ಡ್ರೆಸ್ ಮೆಟಿರಿಯಲ್‌ಗಳು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಲಭ್ಯವಿದೆ. ಉತ್ತಮ ಗುಣಮಟ್ಟದ, ನವನವೀನ ಮಾದರಿಯ, ವಿವಿಧ ವಿನ್ಯಾಸಗಳನ್ನು ಹೊಂದಿರುವ ಆಕರ್ಷಕ ಮನಸೂರೆಗೊಳಿಸುವ ಸೀರೆಗಳು ಲಭ್ಯವಿದೆ.

ರೂ.400ರಿಂದ ಪ್ರಾರಂಭಿಸಿ ರೂ.13,000ದ ಬೆಲೆಯ ಸೀರೆಗಳು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಲಭ್ಯವಿದೆ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ದರ್ಜೆಯ ಸೀರೆಗಳನ್ನು ಖರೀದಿಸುವ ಅವಕಾಶವನ್ನು ನೀಡುತ್ತಿದೆ. ಎಲ್ಲಾ ರೀತಿಯ ಖರೀದಿಯ ಮೇಲೆ ಶೇ.5 ಡಿಸ್ಕೌಂಟ್‌ನ್ನು ನೀಡಲಾಗುತ್ತಿದೆ. ಪ್ರದರ್ಶನ ಹಾಗೂ ಮಾರಾಟವು ಬೆಳಿಗ್ಗೆ 10 ಗಂಟೆಯಿಂದ ಸಂಜೆ 8 ಗಂಟೆಯ ತನಕ ನಡೆಯಲಿದೆ. ಪ್ರದರ್ಶನ ಹಾಗೂ ಮಾರಾಟವು ಮಾ.4ರಂದು ಕೊನೆಗೊಳ್ಳಲಿದ್ದು ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆ ಪ್ರಕಟಣೆ ತಿಳಿಸಿದೆ.











