ಇಂದಿನಿಂದ(ಮಾ.9) ದ್ವಿತೀಯ ಪಿಯುಸಿ ಪರೀಕ್ಷೆ ; ಪುತ್ತೂರು,ಕಡಬದಲ್ಲಿ 10 ಪರೀಕ್ಷಾ ಕೇಂದ್ರಗಳು

0

ಪುತ್ತೂರು:ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮಾ.9ರಿಂದ ನಡೆಯಲಿದ್ದು ಪುತ್ತೂರು, ಕಡಬದಲ್ಲಿ 10 ಸೇರಿದಂತೆ ದ.ಕ.ಜಿಲ್ಲೆಯಲ್ಲಿ ಒಟ್ಟು 52 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು 34,340 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ.

ಪುತ್ತೂರುನಲ್ಲಿ 5, ಕಡಬದಲ್ಲಿ 5, ಬೆಳ್ತಂಗಡಿಯಲ್ಲಿ 6, ಮಂಗಳೂರು ತಾಲೂಕಿನಲ್ಲಿ 18, ಬಂಟ್ವಾಳದಲ್ಲಿ 6,ಸುಳ್ಯದಲ್ಲಿ2, ಮೂಡುಬಿದಿರೆಯಲ್ಲಿ 4,ಮುಲ್ಕಿಯಲ್ಲಿ 2, ಉಳ್ಳಾಲ ತಾಲೂಕಿನಲ್ಲಿ 4 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಸರಕಾರಿ 15, ಅನುದಾನಿತ 21, ಅನುದಾನ ರಹಿತ 16 ಕಾಲೇಜುಗಳಲ್ಲಿ ಈ ಕೇಂದ್ರಗಳನ್ನು ತೆರೆಯಲಾಗಿದೆ.

ಪರೀಕ್ಷೆ ವಿಷಯಗಳು: ಪರೀಕ್ಷೆಯು ಬೆಳಗ್ಗೆ 10:15ಕ್ಕೆ ಆರಂಭಗೊಂಡು 1:15ಕ್ಕೆ ಮುಕ್ತಾಯಗೊಳ್ಳಲಿದೆ.ಮಾ.9ರಂದು ಕನ್ನಡ ಮತ್ತು ಅರಬಿಕ್, ಮಾ.11ರಂದು ಗಣಿತ ಶಾಸ್ತ್ರ ಮತ್ತು ಶಿಕ್ಷಣ ಶಾಸ್ತ್ರ, ಮಾ.13ರಂದು ಅರ್ಥಶಾಸ, ಮಾ.14ರಂದು ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ, ರಸಾಯನ ಶಾಸ, ಮೂಲಗಣಿತ, ಮಾ.15ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಮಾ.16ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಮಾ.17ರಂದು ಮಾಹಿತಿ ತಂತ್ರಜ್ಞಾನ, ರೀಟೈಲ್, ಅಟೋಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಆಂಡ್ ವೆಲ್‌ನೆಸ್, ಮಾ.18ರಂದು ಭೂಗೋಳಶಾಸ್ತ್ರ, ಜೀವಶಾಸ್ತ್ರ, ಮಾ.20ರಂದು ಇತಿಹಾಸ, ಭೌತಶಾಸ್ತ್ರ, ಮಾ.21ರಂದು ಹಿಂದಿ, ಮಾ.23ರಂದು ಇಂಗ್ಲಿಷ್, ಮಾ.25ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಮಾ.27ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ, ಮಾ.29ರಂದು ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ ಪರೀಕ್ಷೆ ನಡೆಯಲಿದೆ. ರೆಗ್ಯುಲರ್ 15,171 ಬಾಲಕರು, 16,051 ಬಾಲಕಿಯರು ಸಹಿತ 31,222 ಮತ್ತು ಖಾಸಗಿ 1,342 ಬಾಲಕರು, 674 ಬಾಲಕಿಯರು ಸಹಿತ 2,016 ಹಾಗೂ ಪುನರಾವರ್ತಿತ 722 ಬಾಲಕರು, 169 ಬಾಲಕಿಯರು ಸಹಿತ 1,102 ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಹೆಸರು ನೋಂದಾಯಿಸಿದ್ದಾರೆ.

LEAVE A REPLY

Please enter your comment!
Please enter your name here