ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವರ ಆರಾಟ ಮಹೋತ್ಸವದ ಪ್ರಯುಕ್ತ ಮಾ.10ರಂದು ‘ಗೆಳೆಯರು- 94’ ವತಿಯಿಂದ 30ನೇ ವರ್ಷದ ‘ಸಂಗೀತ ಗಾನ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ.
ಇಲ್ಲಿನ ಹಳೆ ಬಸ್ನಿಲ್ದಾಣದಲ್ಲಿ ಸಂಜೆ 6:30ರಿಂದ ರಾತ್ರಿ 9:30ರವರೆಗೆ ಕೇರಳ ಮತ್ತು ಕರ್ನಾಟಕದ ಪ್ರಖ್ಯಾತ ಗಾಯಕರ ತಂಡವಾದ ಮಂಗಳೂರಿನ ‘ಅನುಗ್ರಹ ಮೆಲೋಡಿಸ್’ನವರು ‘ಸಂಗೀತ ಗಾನ ಸಂಭ್ರಮ’ ಕಾರ್ಯಕ್ರಮವನ್ನು ನಡೆಸಿಕೊಡಲಿದೆ.
ಗೆಳೆಯರು – 94 ತಂಡದ ಬಹು ವರ್ಷದ ಬೇಡಿಕೆಯಾಗಿದ್ದ ಹಳೆ ಬಸ್ನಿಲ್ದಾಣಕ್ಕೆ ಇಂಟರ್ಲಾಕ್ ಅಳವಡಿಕೆ ಕಾರ್ಯ ಶಾಸಕ ಸಂಜೀವ ಮಠಂದೂರು ಅವರ ಅನುದಾನದಿಂದ ಈ ವರ್ಷ ಈಡೇರಿದ್ದು, ಇದರ ಉದ್ಘಾಟನೆ ಕಾರ್ಯವೂ ರಾತ್ರಿ 7ಕ್ಕೆ ನಡೆಯಲಿದೆ ಎಂದು ‘ಗೆಳೆಯರು- 94’ನ ಅಧ್ಯಕ್ಷ ಗುಣಕರ ಅಗ್ನಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.