ಸರಕಾರಿ ಅಧಿಕಾರಿಗಳಾಗುವ ಕನಸನ್ನು ನನಸು ಮಾಡಿಕೊಳ್ಳಲು ಹೀಗೊಂದು ಸುವರ್ಣಾವಕಾಶ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಚಿಕ್ಕಂದಿನಿಂದಲೇ ಪೂರ್ವ ತಯಾರಿ ಮಾಡಿಕೊಂಡು ಭವಿಷ್ಯದ ಸರಕಾರಿ ಅಧಿಕಾರಿಗಳಾಗಲು ಕನಸು ಕಾಣುವ ವಿದ್ಯಾರ್ಥಿಗಳಿಗೆ ನೆರವಾಗಲು ಪುತ್ತೂರಿನ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಏಪ್ರಿಲ್ 1 ರಿಂದ 30 ರವರೆಗೆ ಒಂದು ತಿಂಗಳ ಬೇಸಿಗೆ ಶಿಬಿರದ ಮೂಲಕ ಪೂರ್ವ ತಯಾರಿ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಶಿಬಿರದ ಸಮಯ ಬೆಳಿಗ್ಗೆ 9:30 ರಿಂದ ಸಾಯಂಕಾಲ 3 ರವರೆಗೆ.
ಇದೊಂದು ವಿಶಿಷ್ಟವಾದ ಬೇಸಿಗೆ ಶಿಬಿರ – ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯು ಪಠ್ಯ ಮಾತ್ರದಿಂದ ಸಾಧ್ಯವಾಗುವುದಿಲ್ಲ. ಇಲ್ಲಿ ಪಠ್ಯದ ಜೊತೆಗೆ ವಿದ್ಯಾರ್ಥಿಗಳಲ್ಲಿ ವಿವಿಧ ರೀತಿಯ ಚಟುವಟಿಕೆಗಳನ್ನು ಹುಟ್ಟು ಹಾಕಿ ಪ್ರತಿ ವಿದ್ಯಾರ್ಥಿಯ ಬಗ್ಗೆ ಪ್ರತ್ಯೇಕ ಗಮನವಿರಿಸಿ ಆ ವಿದ್ಯಾರ್ಥಿಗೆ ಕಷ್ಟಕರವಾದ ವಿಷಯಗಳನ್ನು ಚಟುವಟಿಕೆಗಳ ಮೂಲಕ ಕಲ್ಪಿಸಬೇಕಾಗುತ್ತದೆ. ಗಣಿತ ಮತ್ತು ಸಮಾಜ ವಿಜ್ಞಾನ, ವಿಜ್ಞಾನ, ಸಾಮಾನ್ಯ ಅಧ್ಯಯನ, ಪ್ರಸ್ತುತ ವಿದ್ಯಾಮಾನಗಳು ಇತ್ಯಾದಿ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿ ಹುಟ್ಟುವಂತೆ ವಿವಿಧ ಚಟುವಟಿಕೆಗಳ ಮೂಲಕ ಅಧ್ಯಯನ ನಡೆಸುವುದರ ಮೂಲಕ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುವುದರ ಮೂಲಕ ಸರಕಾರಿ ಅಧಿಕಾರಿಗಳನ್ನಾಗಿಸಬಹುದಾಗಿದೆ.
ಶಿಬಿರದ ವಿವಿಧ ತರಬೇತಿಗಳು :
ಬ್ಯಾಚ್ 1: 5 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಅಖಿಲ ಭಾರತ ಸೈನಿಕ ಶಾಲೆ ಪ್ರವೇಶ ಪರೀಕ್ಷೆ ಪೂರ್ವ ತಯಾರಿ. ಬ್ಯಾಚ್2 — ಜವಾಹರ್ ನವೋದಯ ಶಾಲೆಯ ಪ್ರವೇಶ ಪರೀಕ್ಷೆಗಳಿಗೆ ಪೂರ್ವ ತಯಾರಿ.
ಬ್ಯಾಚ್ 3. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪ್ರವೇಶ ಪರೀಕ್ಷೆ (ಪಿ. ಯು. ಸಿ ಯಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ).
ಬ್ಯಾಚ್ 4. ಐ.ಎ.ಎಸ್/ ಕೆ.ಎ.ಎಸ್ ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ( ಎಸ್. ಎಸ್ ಎಲ್. ಸಿ, ಪಿ.ಯು.ಸಿ, ಪದವಿ) ಓದುತ್ತಿರುವವರಿಗೆ.
ಇಲ್ಲಿ ಯಾವುದೇ ಅಂಕಗಳ ಮಾನದಂಡವಿಲ್ಲದೆ ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿಯ ಬಗ್ಗೆ ಇರುವ ವಿದ್ಯಾರ್ಥಿಗಳ ಆಸಕ್ತಿಯನ್ನು ಪರಿಗಣಿಸಿ ಪ್ರವೇಶಾತಿಯನ್ನು ನೀಡಲಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು ಒಂದು ತಿಂಗಳ ಶಿಬಿರದ ನಂತರ ತಮ್ಮ ತರಬೇತಿಯನ್ನು ಮುಂದುವರಿಸಲು ಅವಕಾಶವನ್ನು ನೀಡಲಾಗುವುದು ಅಲ್ಲದೇ ಶಿಬಿರದಲ್ಲಿ ಭಾಗವಹಿಸುವ ಪ್ರತಿ ವಿದ್ಯಾರ್ಥಿಗೆ ಎಲ್ಲಾ ಸರಕಾರಿ ನೇಮಕಾತಿಗಳ ಬಗೆಗಿನ ಮಾಹಿತಿಯನ್ನು ಶಿಬಿರದ ನಂತರ ಒದಗಿಸಲಾಗುವುದು ಪ್ರವೇಶಾತಿಯನ್ನು ಪಡೆಯುವವರಿಗೆ 10-03-2023 ರಿಂದ ಅವಕಾಶವಿರುತ್ತದೆ.
(ವಿ. ಸೂ :1 ತಿಂಗಳ ಶಿಬಿರದ ನಂತರವೂ ತಮ್ಮ ತರಬೇತಿಯನ್ನು ಶೈಕ್ಷಣಿಕ ವರ್ಷದ ಪರೀಕ್ಷೆಗಳ ವರೆಗೂ ಮುಂದುವರಿಸಲು ಅವಕಾಶವಿರುತ್ತದೆ).
*ವಾರಾಂತ್ಯದ ತರಗತಿಗಳು ಲಭ್ಯವಿರುತ್ತದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ವಿದ್ಯಾಮಾತಾ ಅಕಾಡೆಮಿ
ಹಿಂದೂಸ್ಥಾನ್ ಬಿಲ್ಡಿಂಗ್, ಎ.ಪಿ.ಎಂ.ಸಿ ರಸ್ತೆ, ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು. ದ.ಕ-574201
ಫೋನ್ ನಂ: 9620468869/9148935808/8590773486