ಪ್ರತಿ ಸಂಕ್ರಾಂತಿಗೆ ದೀಪ ಸೇವೆ, ಭಾನುವಾರ ಅಗೇಲು ಸೇವೆ – ಕೆ ಬಾಬು ಪೂಜಾರಿ
ಪುತ್ತೂರು: ಶತಮಾನಗಳಿಂದ ಆರಾಧಿಸಿಕೊಂಡು ಬರುತ್ತಿರುವ ಬಲ್ನಾಡು ಗ್ರಾಮದ ಉಜ್ರುಪಾದೆ ಕಾರಣಿಕದ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಮಾ.11ರಂದು ಶ್ರೀ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಮೊಕ್ತೇಸರ ಕೆ. ಬಾಬು ಪೂಜಾರಿ ಬಲ್ನಾಡು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ 2019 ಜುಲೈ 7 ಮತ್ತು 8 ರಂದು ನಡೆದಿದೆ. ಆ ಬಳಿಕ ಕ್ಷೇತ್ರದಲ್ಲಿ ಪ್ರತಿ ಸಂಕ್ರಾಂತಿಗೆ ದೀಪ ಸೇವೆ ಹಾಗೂ ಪ್ರತಿ ಭಾನುವಾರ ಅಗೇಲು ಸೇವೆ ನಡೆಯುತ್ತಿದೆ. ಹರಕೆ ಕೋಲಕ್ಕೆ ಹಾಗೂ ಇತರ ಸೇವೆಗಳು ನಡೆಸಲು ಅವಕಾಶವಿದೆ. ಇದೀಗ 4ನೇ ವರ್ಷದ ನೇಮೋತ್ಸವ ಮಾ.11ಕ್ಕೆ ನಡೆಯಲಿದೆ. ಬೆಳಗ್ಗೆ ಸ್ಥಳ ಶುದ್ಧಿ, ಗಣಹೋಮ, ಕಲಶಾಭಿಷೇಕ, ರಾತ್ರಿ ಗಂಟೆ 7ಕ್ಕೆ ಶ್ರೀ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ. ಮುಂದಿನ ವರ್ಷ 5ನೇ ವರ್ಷದ ನೇಮೋತ್ಸವ ಅದ್ದೂರಿಯಾಗಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಕ್ಷೇತ್ರದಲ್ಲಿ ಸುಮಾರು 20 ಲಕ್ಷ ವೆಚ್ಚದಲ್ಲಿ ಪಾಕ ಶಾಲೆ, ಆವರಣಗೋಡೆ, ಕೊಠಡಿಗಳ ನಿರ್ಮಾಣ ಮತ್ತು ಇತರ ಸೌಲಭ್ಯಗಳನ್ನು ನೀಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಕಾರ್ಯದರ್ಶಿ ಯತೀಶ್ ಕುಮಾರ್ ಬಿ.ಕೆ., ಕೋಶಾಧಿಕಾರಿ ಗೌತಮ ಉಪಸ್ಥಿತರಿದ್ದರು.