ಯುವ ಸಮುದಾಯಕ್ಕೆ ಅದರ್ಶ- ರಾಕೇಶ್ ರೈ ಕೆಡೆಂಜಿ
ಇಲಾಖೆ ಮತ್ತು ಸಮಾಜಕ್ಕೆ ಗೌರವ ತಂದಿದ್ದಾರೆ- ಎಂ. ಬಿ.ಸದಾಶಿವ
ವೃತ್ತಿಯಲ್ಲಿ ದಕ್ಷತೆ- ಡಾ.ಸೂರ್ಯನಾರಾಯಣ ಭಟ್
ಬದುಕು ಮಾದರಿ- ಅಮೃತಕುಮಾರ್ ರೈ
ಪುತ್ತೂರು; ಪಶು ವೈದ್ಯಕೀಯ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಡಾ.ಸೋಮಶೇಖರ್ ರೈ ಕುಂಜಾಡಿರವರ ಉತ್ತರಕ್ರಿಯೆಯು ಮಾ. 10 ರಂದು ಪಾಲ್ತಾಡಿ ಗ್ರಾಮದ ಕೆಳಗಿನ ಕುಂಜಾಡಿಯಲ್ಲಿ ಜರಗಿತು. ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಜರಗಿತು.
ಯುವ ಸಮುದಾಯಕ್ಕೆ ಅದರ್ಶ- ರಾಕೇಶ್ ರೈ ಕೆಡೆಂಜಿ
ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿಯವರು ಮಾತನಾಡಿ ಸೋಮಶೇಖರ್ ರೈಯವರು ತಮ್ಮ ಬದುಕಿನಲ್ಲಿ ಉತ್ತಮ ಆದರ್ಶಗಳನ್ನು ಅನುಸರಿಸಿಕೊಂಡು ಬರುತ್ತಿದ್ದರು. ಇವರ ಬದುಕು ಯುವ ಸಮುದಾಯಕ್ಕೆ ಆದರ್ಶಪ್ರಾಯವಾಗಿದೆ ಎಂದರು.
ಇಲಾಖೆ ಮತ್ತು ಸಮಾಜಕ್ಕೆ ಗೌರವ ತಂದಿದ್ದಾರೆ- ಎಂ. ಬಿ.ಸದಾಶಿವ
ಸಾಮಾಜಿಕ ಧುರೀಣ ಎಂ.ಬಿ.ಸದಾಶಿವರವರು ಮಾತನಾಡಿ ಡಾ.ಸೋಮಶೇಖರ್ ರೈಯವರು ಇಲಾಖೆ ಮತ್ತು ಸಮಾಜಕ್ಕೆ ಗೌರವವನ್ನು ತಂದುಕೊಟ್ಟಿದ್ದಾರೆ. ಸುಳ್ಯದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿರುವ ಡಾ. ರೈಯವರು ಸಮಾಜಸೇವೆಯನ್ನು ಅತ್ಯಂತ ಗೌರವದಿಂದ ಮಾಡುತ್ತಿದ್ದರು ಎಂದರು.
ವೃತ್ತಿಯಲ್ಲಿ ದಕ್ಷತೆ- ಡಾ.ಸೂರ್ಯನಾರಾಯಣ ಭಟ್
ಪಶು ವೈದ್ಯಾಧಿಕಾರಿ ಡಾ.ಸೂರ್ಯನಾರಾಯಣ ಭಟ್ರವರು ಮಾತನಾಡಿ ವೃತ್ತಿ ಬದುಕಿನಲ್ಲಿ ಡಾ. ರೈಯವರು ಸಹದ್ಯೋಗಿಗಳನ್ನು ಅತ್ಯಂತ ಗೌರವದಿಂದ ಕಾಣುವ ಜೊತೆಗೆ ವೃತ್ತಿಯಲ್ಲಿ ಅತ್ಯಂತ ಧಕ್ಷತೆಯನ್ನು ಕಾಪಾಡಿಕೊಂಡು ಬರುತ್ತಿದ್ದರು ಎಂದರು.
ಬದುಕು ಮಾದರಿ- ಅಮೃತಕುಮಾರ್ ರೈ
ಸಾಮಾಜಿಕ ಮುಂದಾಳು ಅಮೃತಕುಮಾರ್ ರೈಯವರು ಡಾ. ಸೋಮಶೇಖರ್ ರೈಯವರ ಬದುಕು ಸಮಾಜಕ್ಕೆ ಮತ್ತು ಕುಟುಂಬಕ್ಕೆ ಮಾದರಿಯಾಗಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ಕುಮಾರ್ ಕಟೀಲ್ ಸೇರಿದಂತೆ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಮುಖಂಡರುಗಳು, ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮುಂದಾಳುಗಳು ಸೇರಿದಂತೆ ಊರ-ಪರವೂರ ಸಾವಿರಾರು ಮಂದಿ ಭಾಗವಹಿಸಿದ್ದರು.
ಡಾ.ಸೋಮಶೇಖರ್ ರೈಯವರ ಪತ್ನಿ ಬೆಳ್ಳೂರುಗುತ್ತು ಶಾಲಿನಿ ಎಸ್ ರೈ, ಮಕ್ಕಳಾದ ಸ್ಮಿತಾ ಆರ್ ನಾಯ್ಕ್, ಶ್ರುತ ಎಸ್.ಶೆಟ್ಟಿ, ಅಳಿಯಂದಿರಾದ ರಾಜೇಶ್ ನಾಯ್ಕ್. ಸತೀಶ್ ಶೆಟ್ಟಿ, ಮೊಮ್ಮಕ್ಕಳಾದ ಆದಿತಿ ನಾಯ್ಕ್. ಅನ್ವಿ ನಾಯ್ಕ್, ಶ್ಲೋಕ್ ಶೆಟ್ಟಿ, ದಕ್ಷ್ ಶೆಟ್ಟಿ, ಸಹೋದರ ಮಂಜುನಾಥ ರೈ ಕುಂಜಾಡಿ ಹಾಗೂ ಮೇಗಿನ ಕುಂಜಾಡಿ ಮತ್ತು ಕೆಳಗಿನ ಕುಂಜಾಡಿ ಕುಟುಂಬಸ್ಥರು ಉಪಸ್ಥಿತರಿದ್ದರು.