ಕಾಣಿಯೂರು: ಬೆಳಂದೂರು ಗ್ರಾಮದ ಗುಂಡಿನಾರು ಎಂಬಲ್ಲಿ ಸಾಮಾಜಿಕ ಅರಣ್ಯದ ಗುಡ್ಡೆಗೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಮಾ.10ರಂದು ನಡೆದಿದೆ. ಸುಮಾರು 2 ಎಕರೆಯಷ್ಟು ಜಾಗ ಬೆಂಕಿಗಾಹುತಿಯಾಗಿದೆ.
ಘಟನೆಯ ಬಗ್ಗೆ ವಿಷಯ ತಿಳಿದ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಲು ಹರಸಾಹಸ ಮೆರೆದರು. ಸುತ್ತಮುತ್ತಲೂ ಪೊದರುಗಳಿಂದ ಕೂಡಿದ್ದು ಎಷ್ಟೇ ಬೆಂಕಿಯನ್ನು ನಂದಿಸಿದರೂ ಜೋರಾಗಿ ಬೀಸುತ್ತಿದ್ದ ಗಾಳಿಗೆ ಮತ್ತಷ್ಟು ಜೋರಾಗಿ ಉರಿಯುತ್ತಿತ್ತು. ಬಳಿಕ ಆಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ, ಸಾಮಾಜಿಕ ಉಪ ವಲಯ ಅರಣ್ಯಾಧಿಕಾರಿ ಕೃಷ್ಣಜೋಗಿ, ಬೆಳಂದೂರು ಗ್ರಾ. ಪಂ. ಸದಸ್ಯ ಜಯಂತ ಅಬೀರ, ಬೆಳ್ಳಾರೆ ಶಾಖೆಯ ಉಪವಲಯ ಅರಣ್ಯಾಧಿಕಾರಿ ಪ್ರಸಾದ್ ಕೆ.ಜೆ, ಕಲ್ಪಡ ಮಲೆ ಗಸ್ತು ಪಾಲಕಿ ತೇಜಶ್ವಿನಿ, ಅರಣ್ಯ ವೀಕ್ಷಕ ಶೀನಪ್ಪ, ಸವಣೂರು ಮೆಸ್ಕಾಂ ಕಿರಿಯ ಇಂಜಿನಿಯರ್ ನಾಗರಾಜ್, ಪವರ್ ಮ್ಯಾನ್ ಶಿವಾನಂದ, ಮುಖ್ತಾರ್ ಮತ್ತಿತರರು ಉಪಸ್ಥಿತರಿದ್ದರು.