ಸಿಸ್ಟರ್ ವಿನಿಷಾರವರಿಗೆ ಪಿ.ಎಚ್.ಡಿ ಪದವಿ ಪ್ರದಾನ

0

ಪುತ್ತೂರು: ಸೈಂಟ್ ಜೆರೋಸಾ ಹೈಸ್ಕೂಲ್ ಜೆಪ್ಪು ಇಲ್ಲಿಯ ಮುಖ್ಯೋಪಾದಾಯಿನಿ ವೀಣಾ ಲಿಡಿಯಾ ಲೋಬೊ(ಸಿಸ್ಟರ್ ವಿನಿಷಾ)ರವರು ಮಂಗಳೂರು ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಪ್ರೊ| ರವಿಶಂಕರ್ ರಾವ್‌ರವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಎ ಸ್ಟಡಿ ಆಪ್ ಸೆಲೆಕ್ಟ್ ಫಿಕ್ಷನ್ ಬೈ ಕಮೀಲ ಶಮ್ಸಿ’ ಎಂಬ ವಿಷಯದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ.

ಸಿಸ್ಟರ್ ವಿನಿಷಾ ರವರು ಮಂಗಳೂರಿನ ಸಿಸ್ಟರ್ಸ್ ಆಫ್ ಚಾರಿಟಿ ಧಾರ್ಮಿಕ ಸಂಸ್ಥೆಯ ಭಗಿನಿಯಾಗಿರುತ್ತಾರೆ. ಇವರು ಮೂಲತಃ ಉಡುಪಿ ಜಿಲ್ಲೆಯ ಬಾರಕೂರಿನವರಾಗಿದ್ದು, ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರಾಗಿರುವ ಪ್ರಸ್ತುತ ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿರುವ ವಂ|ವಿಜಯ್ ಲೋಬೊರವರ ಸಹೋದರಿಯಾಗಿರುತ್ತಾರೆ.

LEAVE A REPLY

Please enter your comment!
Please enter your name here