ಪುತ್ತೂರು ಬದ್ರಿಯಾ ಮಸೀದಿಯ ಮೇಲಂತಸ್ತಿನ ಉದ್ಘಾಟನೆ-ನವವಿ ಇಮಾಂ ಅರೇಬಿಕ್ ಕಾಲೇಜು ವಿದ್ಯಾರ್ಥಿಗಳಿಗೆ ಸನದುದಾನ

0

ಉಲಮಾಗಳು ಧರ್ಮದ ಆಧಾರ ಸ್ಥಂಭಗಳಾದರೆ ಮಸೀದಿಗಳು ಮಾರ್ಗದರ್ಶನ ಕೇಂದ್ರಗಳು -ಸಯ್ಯದ್ ಜಿಫ್ರೀ ಮುತ್ತುಕೋಯ ತಂಙಳ್

ಪುತ್ತೂರು:ಮಸೀದಿಗಳನ್ನು ಕೇಂದ್ರವಾಗಿರಿಸಿಕೊಂಡು ಧಾರ್ಮಿಕ ವಿದೆ ಕಲಿತು ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ನೀಡಿ ಜನರನ್ನು ಒಳಿತಿನೆಡೆಗೆ ಕೊಂಡೊಯ್ಯುತ್ತಿರುವ ಉಲಮಾಗಳು ನಿಜವಾಗಿ ಪ್ರವಾದಿಗಳ ಉತ್ತರಾಧಿಕಾರಿಗಳಾಗಿದ್ದಾರೆ ಎಂದು ಸಮಸ್ತ ಕೇರಳ ಜಂಇಯ್ಯುತುಲ್ ಉಲಮಾದ ಅಧ್ಯಕ್ಷ, ಪುತ್ತೂರು ಸಂಯುಕ್ತ ಖಾಝಿಗಳೂ ಆಗಿರುವ ಸಯ್ಯಿದುಲ್ ಉಲಮಾ ಸಯ್ಯಿದ್ ಮೊಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್‌ರವರು ಹೇಳಿದರು.


ಪುತ್ತೂರು ಬದ್ರಿಯಾ ಮಸೀದಿಯ ಮೇಲಂತಸ್ತಿನ ಉದ್ಘಾಟನೆ ಹಾಗು ಬದ್ರಿಯಾ ಮಸೀದಿಯ ಸಭಾಂಗಣದಲ್ಲಿ ಸ್ಥಾಪನೆಗೊಂಡಿರುವ ನವವಿ ಇಮಾಂ ಅರೇಬಿಕ್ ಕಾಲೇಜು ವಿದ್ಯಾರ್ಥಿಗಳಿಗೆ ಸನದುದಾನ ನೆರವೇರಿಸಿ ಅವರು ಮಾತನಾಡಿದರು.ಸಾರ್ವಜನಿಕರು ಧರ್ಮದ ವಿಚಾರದಲ್ಲಿ ಉಲಮಾಗಳನ್ನೇ ಅವಲಂಬಿತರಾಗಿರುವುದರಿಂದ ಉಲಮಾಗಳಿಗೂ ಬಹಳಷ್ಟು ಜವಾಬ್ದಾರಿ ಇದೆ.ಸೈದ್ದಾಂತಿಕ, ರಾಜಕಿಯ ತೀವ್ರ ಹಿತಾಸಕ್ತಿ ಇಟ್ಟುಕೊಂಡಿರುವ ನೂತನವಾದಿಗಳನ್ನು ಜನರಿಗೆ ಮನದಟ್ಟು ಮಾಡಿ ಕೊಡಬೇಕಾದ ಕರ್ತವ್ಯ ಕೂಡಾ ಅವರಿಗಿದೆ ಎಂದರು.ಸಾಮಾಜಿಕ ತಾಣದಲ್ಲಿ ಸಮುದಾಯದ ಯವಕರು ಊಹಾಪೋಹದ ಆಧಾರದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿ ಸಮಯ ಕಳೆಯದೇ ಧರ್ಮದ ಆಚಾರ ವಿಚಾರಗಳನ್ನು ಸಾಧ್ಯವಾದಷ್ಟು ಅಳವಡಿಸಿಕೊಂಡರೆ ಅದುವೇ ನಿಜವಾದ ಹೋರಾಟ ಎಂದು ಅವರು ಅಭಿಪ್ರಾಯಪಟ್ಟರು.ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದರಿಂದ ದೇಶದಲ್ಲಿ ಅರಾಜಕತೆ ಉಂಟಾಗುವುದು.ಆದ್ದರಿಂದ ಯಾವುದೇ ಧರ್ಮೀಯರು ಇದಕ್ಕೆ ಆಸ್ಪದ ಕೊಡಬಾರದು ಎಂದು ಅವರು ಹೇಳಿದರು. ಪುತ್ತೂರು ಮುದರ್ರಿಸ್ ಸಯ್ಯಿದ್ ಅಹಮ್ಮದ್ ಪೂಕೋಯ ತಂಙಳ್ ಪುತ್ತೂರು ಅವರು ದುಆ: ನೇತೃತ್ವವನ್ನು ವಹಿಸಿ ಆಶೀರ್ವಚನ ನೀಡಿದರು.


ಕಲಿಕೆ ನಿರಂತರ-ಬಿ.ಕೆ.ಬಂಬ್ರಾಣ:
ಸಮಸ್ತ ಕೇರಳ ಜಂಯ್ಯಿತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯ,ಕೂರ್ನಡ್ಕ ಜಮಾಅತ್ ಖಾಝಿಗಳಾಗಿರುವ ಅಬ್ದುಲ್ ಖಾದರ್ ಅಲ್‌ಖಾಸಿಮಿ ಬಂಬ್ರಾಣಾರವರು ಮಾತನಾಡಿ ಮನುಷ್ಯ ಜೀವಮಾನವಿಡೀ ಕಲಿತರೂ ಜ್ಞಾನ ದಾಹ ನೀಗದು ಎಂದು ಅರ್ಥ ಮಾಡಿಕೊಂಡವರೇ ನಿಜವಾದ ಜ್ಞಾನಿಗಳು.ಇಮಾಂ ನವವಿ (ರ) ಕೆಲವೇ ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ಗ್ರಂಥಗಳನ್ನು ರಚಿಸಿದ್ದು ಅವರ ಸಕ್ರಿಯತೆ ಮತ್ತು ಪವಾಡಕ್ಕೆ ಅದು ಸಾಕ್ಷಿಯಾಗಿದೆ.ಸನದು ಪಡೆದ ಉಲಮಾಗಳು ಅದೇ ಪೂರ್ವಿಕ ಉಲಮಾಗಳ ಹಾದಿಯಲ್ಲಿ ಸಾಗ ಬೇಕೆಂದರು.


ಮಸೀದಿಗಳು ಮಾನವನ ಶ್ರದ್ಧಾ ಕೇಂದ್ರವಾಗಿದೆ- ಉಸ್ಮಾನುಲ್ ಫೈಝಿ:
ಸಮಸ್ತ ಕೇರಳ ಜಂಯ್ಯುತಿಲ್ ಉಲಮಾ ಸದಸ್ಯರಾದ ಕೆ.ಎಂ.ಉಸ್ಮಾನುಲ್ ಫೈಝಿ ಅವರು ಮಾತನಾಡಿ ಭಗವಂತನ ಸಾಮೀಪ್ಯ ಗಳಿಸಲು ಹೆಚ್ಚಿನ ಸಮಯ ಕಳೆಯುವ ಮಸೀದಿಗಳು ಮಾನವನ ಶ್ರದ್ದಾ ಕೇಂದ್ರವಾಗಿದೆ. ಇಂತಹ ಮಸೀದಿಗಳಿಂದ ದೇವರ ಜ್ಞಾನದಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.


ನವವಿ ಇಮಾಂ ಅರೇಬಿಕ್ ಕಾಲೇಜಿನಲ್ಲಿ ಸನದು ಪಡೆದುಕೊಂಡ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಜ್ಞಾನ ಗಳಿಸಲು ಮುಂದೆ ಬರಬೇಕು.ಆ ಮೂಲಕ ಸಮಾಜದ ಸಮಸ್ಯೆಗಳನ್ನು ಬಗೆಹರಿಸುವಂತಾಗಬೇಕೆಂದರು. ನವಮಿ ಅರೇಬಿಕ್ ಕಾಲೇಜಿನಲ್ಲಿ ಅರ್ಧದಲ್ಲಿ ನಿಲ್ಲಿಸಿದ ತಮ್ಮ ಧಾರ್ಮಿಕ ವಿದ್ಯಾಭ್ಯಾಸವನ್ನು ಮುಂದುವರಿಸಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟ ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಆಡಳಿತ ಮಂಡಳಿಯ ಸೇವೆ ಶ್ಲಾಘನೀಯವಾಗಿದೆ ಎಂದರು.


ಕಾರ್ಯಕ್ರಮದ ಯಶಸ್ಸಿಗೆ ಕೃತಜ್ಞತೆ – ಎಲ್.ಟಿ. ರಜಾಕ್ ಹಾಜಿ:
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಜಾಕ್ ಹಾಜಿ ಅವರು ಮಾತನಾಡಿ ಪುತ್ತೂರು ಬದ್ರಿಯಾ ಮಸೀದಿಯ ಮೇಲಂತಸ್ತಿನ ಉದ್ಘಾಟನೆ ಹಾಗು ನವವಿ ಇಮಾಂ ಅರೇಬಿಕ್ ಕಾಲೇಜು ವಿದ್ಯಾರ್ಥಿಗಳಿಗೆ ಸನದುದಾನ ಕಾರ್ಯಕ್ರಮ ಅತ್ಯಂತ ಯಶಸ್ವಿಗೊಂಡಿದೆ. ಈ ಕಾರ್ಯಕ್ರಮದ ಯಶಸ್ಸಿನಲ್ಲಿ ಸಹಕರಿಸಿದ ದಾನಿಗಳಿಗೆ ಹಗಲು ರಾತ್ರಿ ಶ್ರಮಿಸಿದದವರಿಗೆ ಹಾಗೂ ತನುಮನ ಧನದಿಂದ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.


ಶಿಷ್ಯಂದಿರ ಬಗ್ಗೆ ಅಭಿಮಾನವಿದೆ- ಅಬ್ಬಾಸ್ ಫೈಝಿ:
ನವವಿ ಇಮಾಮ್ ಕಾಲೇಜಿನ ಪ್ರಾಂಶುಪಾಲರಾಗಿರುವ ಪುತ್ತೂರು ಬದ್ರಿಯಾ ಮಸೀದಿ ಖತೀಬ್ ಅಬ್ಬಾಸ್ ಫೈಝಿ ಪುತ್ತಿಗೆ ಅವರು ಮಾತನಾಡಿ ಒಂದು ಹಂತದ ಕಲಿಕೆ ನಿಲ್ಲಿಸಿದ್ದ ವಿದ್ಯಾರ್ಥಿಗಳು ಮತ್ತೆ ಹೆಚ್ವಿನ ಜ್ಞಾನ ಗಳಿಸಲು ಇಲ್ಲಿನ ಕಾಲೇಜಿನಲ್ಲಿ ಸೇರಿ ಶಿಸ್ತಿನ ಸಿಪಾಯಿಗಳಾಗಿ ಎರಡು ವರ್ಷ ಕಲಿತು ಇಂದು ಸನದು ಪಡೆಯುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.ಇತರ ಕಸುಬಿನ ಜೊತೆಗೆ ವಿದ್ಯಾರ್ಜನೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳ ಬಗೆ ನನಗೆ ಅಭಿಮಾನವಿದೆ ಎಂದ ಅವರು ಈ ಕಾಲೇಜನ್ನು ಸ್ಥಾಪಿಸಲು ಮತ್ತು ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕು ಚೆಲ್ಲುವಂತಹ ಕೆಲಸಕ್ಕೆ ಕೈ ಹಾಕಿದ ಪುತ್ತೂರು ಅನ್ಸಾರುದೀನ್ ಜಮಾಅತ್ ಕಮಿಟಿಯವರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಹೇಳಿದರು.


ಪುತ್ತೂರಿನಲ್ಲಿ ಉನ್ನತ ಧಾರ್ಮಿಕ ಲೌಕಿಕ ವಿದ್ಯಾಕೇಂದ್ರ ತಲೆ ಎತ್ತಲಿ -ಎಸ್ ಬಿ ದಾರಿಮಿ:
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಮ್ಮಾರ ಸಂಶುಲ್ ಉಲಮಾ ಶರೀಹತ್ ಕಾಲೇಜಿನ ಮುಖ್ಯಸ್ಥ ಹಾಗು ಮುಲ್ಕಿ ಮಸೀದಿಯ ಖತೀಬ್ ಆಗಿರುವ ಎಸ್.ಬಿ.ಮೊಹಮ್ಮದ್ ದಾರಿಮಿಯವರು ಮಾತನಾಡಿ ಪುತ್ತೂರು ಅನ್ಸಾರುದ್ದೀನ್ ಜಮಾತ್ ಕಮಿಟಿ ಇಡೀ ಜಿಲ್ಲೆಯಲ್ಲೇ ಗುರುತಿಸಿಕೊಂಡಿರುವ ಪ್ರತಿಷ್ಟಿತ ಸಂಸ್ಥೆಯಾಗಿದೆ.ಉಲಮಾಗಳ ಮಾರ್ಗದರ್ಶನ ಪಡೆದು ಅಭಿವೃದ್ದಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ.ಇಲ್ಲಿನ ಸಂಪನ್ಮೂಲ ಬಳಸಿಕೊಂಡು ಉನ್ನತ ಧಾರ್ಮಿಕ ಲೌಕಿಕ ಸಮನ್ವಯ ವಿದ್ಯಾಸಂಸ್ಥೆಯೊಂದನ್ನು ತೆರೆಯಲು ಜಮಾತ್ ಸಮಿತಿ ಮುಂದೆ ಬಂದರೆ ಅದಕ್ಕೆ ಪುತ್ತೂರು ಅಸುಪಾಸಿನ ಜನರು ಸರ್ವ ರೀತಿಯ ಸಹಕಾರ ನೀಡಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಸಾಲ್ಮರ ಎಸ್.ಎಮ್. ತಂಙಳ್‌ರವರು ಆಗಮಿಸಿದ್ದರು. ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಮಾಜಿ ಅಧ್ಯಕ್ಷ ಯು. ಅಬ್ದುಲ್ಲಾ ಹಾಜಿ, ಇಂಜಿನಿಯರ್ ಅಬ್ದುಲ್ ರಹಿಮಾನ್, ಗುತ್ತಿಗೆದಾರ ಪುತ್ತುಬಾವು ಹಾಜಿ ಸವಣೂರು, ಅಬ್ಬಾಸ್ ದಾರಿಮಿ ಕೆಲಿಂಜ, ದರ್ಬೆ ಅಬ್ದುಲ್ ಹಮೀದ್ ಹನೀಫಿ, ಸಂಪ್ಯ ಅಬ್ದುಲ್ ಹಮೀದ್ ದಾರಿಮಿ, ಬಪ್ಪಳಿಗೆ ಉಮ್ಮರ್ ಫಾರೂಕ್ ಸಹದಿ, ಕೆ.ಎಮ್.ಎ ಕೊಡುಂಗಾಯಿ, ಸಿಟಿ ಬಜಾರ್ ಹಸೈನಾರ್ ಹಾಜಿ, ಕೆ.ಎಂ. ಬಾವಾ ಹಾಜಿ, ಆರ್ತಿಕೆರೆ ಉಮ್ಮರ್ ಹಾಜಿ, ಕೆ.ಪಿ. ಮುಹಮ್ಮದ್ ಹಾಜಿ, ಕಲ್ಲೇಗ ಮೂಸಲ್ ಫೈಝಿ, ಮುಪತ್ತೀಶ್ ಉಮ್ಮರ್ ದಾರಿಮಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸನ್ಮಾನ:
ಇದೇ ಸಂದರ್ಭದಲ್ಲಿ ಪುತ್ತೂರು ನವವಿ ಇಮಾಮ್ ಅರೇಬಿಕ್ ಕಾಲೇಜಿನ ಪ್ರಾಂಶುಪಾಲ ಅಬ್ಬಾಸ್ ಫೈಝಿ ಪುತ್ತಿಗೆ, ಪುತ್ತೂರು ಮುದರ್ರಿಸ್ ಸಯ್ಯದ್ ಅಹಮ್ಮದ್ ಪೂಕೋಯ ತಂಙಳ್ ಹಾಗು ಇಂಜಿನಿಯರ್ ಅಬ್ದುಲ್ ರಹೀಮ್, ಗುತ್ತಿಗೆದಾರ ಪುತ್ತುಬಾವು ಹಾಜಿ ಸವಣೂರು ಅವರನ್ನು ಸನ್ಮಾನಿಸಲಾಯಿತು.

ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಖಜಾಂಜಿ ಇಸ್ಮಾಯಿಲ್ ಸಾಲ್ಮರ, ಉಪಾಧ್ಯಕ್ಷ ಕೆ.ಎಮ್. ಅಬ್ದುಲ್ಲ, ಸದಸ್ಯರಾದ ಅಬ್ದುಲ್ ರಹಿಮಾನ್ ಅಜಾದ್ ದರ್ಬೆ, ಶೇಖ್ ಜೈನುದ್ದೀನ್, ವಿ.ಕೆ.ಶರೀಫ್ ಬಪ್ಪಳಿಗೆ, ಅಬ್ದುಲ್ ಹಮೀದ್ ಸಾಲ್ಮರ ಅಲ್ಲದೆ ಸೂಫಿ ಬಪ್ಪಳಿಗೆ, ಅಬ್ದುಲ್ ರಜಾಕ್ ಆರ್.ಪಿ ಪಡೀಲ್ ಮೊದಲಾದವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.


ಇದೇ ಸಂದರ್ಭದಲ್ಲಿ ನವವಿ ಇಮಾಂ ಅರೇಬಿಕ್ ಕಾಲೇಜಿನ ವಿದ್ಯಾರ್ಥಿಗಳು ಹೊರತಂದ ನವವಿ ಟೈಮ್ಸ್ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.ಸಾಲ್ಮರ ಸಯ್ಯದ್‌ಮಲೆ ಮಸೀದಿಯ ಖತೀಬ್ ಉಮ್ಮರ್ ದಾರಿಮಿಯವರು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here