




ಕಾಣಿಯೂರು: ನೆಹರು ಯುವ ಕೇಂದ್ರ – ಬೆಂಗಳೂರು ಅರ್ಬನ್ ಮಿನಿಸ್ಟರಿ ಆಫ್ ಯೂತ್ ಅಫ್ಫೇರ್ಸ್ ಆಂಡ್ ಸ್ಪೋರ್ಟ್ಸ್, ಅವಿನಾಶ್ ಯೋಗ ಆಂಡ್ ಅರೋಬಿಕ್ಸ್ ಇನ್ಸ್ಟಿಟ್ಯೂಟ್ ಆಚಾರ್ಯ ಯೋಗ ಯೂತ್ ಕ್ಲಬ್ ಅಂಡ್ ಜಮುನಾ ರವಿ ಫೌಂಡೇಶನ್ ಇವರು ಆನ್ಲೈನ್ ನಲ್ಲಿ ಮಾ.4 ರಂದು ನಡೆಸಿದ ಮೊದಲನೇ ವರ್ಷದ ಬೆಂಗಳೂರು ಅಂತರ್ರಾಷ್ಟ್ರೀಯ ಯೋಗ ಉತ್ಸವ -2023 ಯೋಗಾಸನ ಸ್ಪರ್ಧೆಯಲ್ಲಿ ಕಡಬ ಸೈ೦ಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಅನ್ವಿತಾ ಶೆಟ್ಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.



10 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ನಿರಂತರ ಯೋಗ ಕೇಂದ್ರ ಪಂಜದ ವಿದ್ಯಾರ್ಥಿ ಅನ್ವಿತಾ ಶೆಟ್ಟಿ ಚತುರ್ಥ ಸ್ಥಾನ ಪಡೆದಿರುತ್ತಾರೆ. ಸೈ೦ಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆ ಕಡಬದಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ಪಲ್ಲೋಡಿ, ಪಂಜ ಜಗನ್ನಾಥ ಶೆಟ್ಟಿ ಮತ್ತು ಜಯಲಕ್ಷ್ಮಿ. ಜೆ. ಶೆಟ್ಟಿ ರವರ ಪುತ್ರಿ.





ಇವರಿಗೆ ಶರತ್ ಮರ್ಗಿಲಡ್ಕರವರು ಮಾರ್ಗದರ್ಶನ ನೀಡಿರುತ್ತಾರೆ.







