ಕೆಯ್ಯೂರು: ಶ್ರೀ ಕ್ಷೇತ್ರ ಕೆಯ್ಯೂರು ದೇವಿಯ ಜಾತ್ರೋತ್ಸವ ಆರಂಭ

0

ಕೆಯ್ಯೂರು : ಕೆಯ್ಯೂರು ಗ್ರಾಮದ ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ದೇವಿಯ ವಾರ್ಷಿಕ ಜಾತ್ರೋತ್ಸವವು
ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಾ.21ರಿಂದ ಆರಂಭಗೊಂಡು ಮಾ.28ರ ತನಕ ನಡೆಯಲಿದೆ. ಮಾ.21ರಂದು ಬೆಳಿಗ್ಗೆ ಮುಹೂರ್ತಕ್ಕೆ ಗೊನೆ ಕಡಿಯುವುದು, ಮಧಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ನಡೆಯುಲಿದೆ.

ಮಾ:24ರಂದು ಬೆಳಿಗ್ಗೆ ಮಹಾಗಣಪತಿ ಹೋಮ ಮತ್ತು ಚಂಡಿಕಾಯಾಗದ ಪ್ರಾರಂಭ, ಉಗ್ರಾಣ ತುಂಬಿಸುವುದು, ಭಕ್ತಾದಿಗಳಿಂದ ಹಸಿರು ಹೊರೆ ಕಾಣಿಕೆ ಸಮರ್ಪಣೆ ನಡೆಯಲಿದೆ. ಬಳಿಕ  ಮಹಾಗಣಪತಿ ಹೋಮ ಮತ್ತು  ಚಂಡಿಕಾಯಗದ ಪೂರ್ಣಾಹುತಿ, ಶ್ರೀ ದೇವರಿಗೆ ಸಾನಿಧ್ಯ ಕಲಶಾಭಿಷೇಕ ನಡೆದು  ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಮಾ:26ರಂದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ  ನಡೆಯಲಿದೆ. ರಾತ್ರಿ ಶ್ರೀ ದೇವರಿಗೆ ರಂಗಪೂಜೆ, ಶ್ರೀ ದೇವರ ಬಲಿ ಹೊರಟು ಶ್ರೀ ಭೂತ ಬಲಿ ಮಹೋತ್ಸವ, ವಸಂತ ಕಟ್ಟೆ ಪೂಜೆ ಬಳಿಕ “ಕೆಯ್ಯೂರು ಬೇಡಿ” ಎಂದೇ ಪ್ರಸಿದ್ಧಿ ಪಡೆದು ಕೊಂಡಿರುವ ಸುಡುಮದ್ದು ಪ್ರದರ್ಶನ ನಡೆಯಲಿದೆ. ಮಾ.27ರಂದು ಮಹಾಗಣಪತಿ ಹೋಮ ಕೋಶ ಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಶ್ರೀ ದೇವರಿಗೆ ಕಲಶಾಭಿಷೇಕ,ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ,  ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ರಂಗಪೂಜೆ, ಶ್ರೀ ದೈವಗಳ ಭಂಡಾರ ತೆಗೆಯುವುದು ನಡೆಯಲಿದೆ.

ಮಾ:28ರಂದು ಬೆಳಿಗ್ಗೆ  ಉಳ್ಳಾಕುಲು ನೇಮ, ವರ್ಣರ ಪಂಜುರ್ಲಿ, ಶ್ರೀ ರಕ್ತೇಶ್ವರಿ, ಪಿಲಿಚಾಮುಂಡಿ ನೇಮ ನಡೆದು, ಮಧ್ಯಾಹ್ನ ಮಹಾಪೂಜೆ ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ ಕುಪ್ಪೆಪಂಜುರ್ಲಿ, ಗುಳಿಗ ದೈವದ ನೇಮ ನಡೆದು ರಾತ್ರಿ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ ಮತ್ತು ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರು ಇವರ ನೇತೃತ್ವದಲ್ಲಿ ಮಾ.21ರಿಂದ ಮಾ.28 ರವರಗೆ ಸಂಜೆ 6ರಿಂದ ರಾತ್ರಿ 8ರ ತನಕ ಪ್ರತಿ ದಿನ ಆಮಂತ್ರಿತ ಭಜನಾ ಮಂಡಳಿಯವರಿಂದ ನಿರಂತರ ಭಜನಾ ಕಾರ್ಯಕ್ರಮ ನಡೆಯಲಿರುವುದು ಎಂದು ಶ್ರೀ ಕ್ಷೇತ್ರ  ಕೆಯ್ಯೂರು ದೇವಾಲಯ ವ್ಯವಸ್ಥಾಪಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸದ್ದಾರೆ.

LEAVE A REPLY

Please enter your comment!
Please enter your name here