ಪುತ್ತೂರು : ಮಹಿಳೆಯರ, ಮಕ್ಕಳ ಚೆಂದದ ಹಲವು ಕಂಪನಿಗಳ ಭಿನ್ನ -ವಿಭಿನ್ನ ಮಾದರಿ, ವಿಧವಿಧ ಶೈಲಿಯ ಬ್ರಾಂಡೆಡ್ ಬಟ್ಟೆಗಳ ಬೃಹತ್ ಮಳಿಗೆ ,ಲಶ್ ಫ್ಯಾಶನ್ ಇನ್ಸೈಡ್ ಮಾ. 23 ರ ಬೆಳಗ್ಗೆ ಮುಖ್ಯರಸ್ತೆ ಜಿ.ಎಲ್.ಒನ್ ಮಾಲ್ ಇದರ ಮೊದಲ ಮಹಡಿಯಲ್ಲಿ ಶುಭಾರಂಭವಾಗಲಿದೆ.
ಶ್ರೀಮತಿ ರಾಜಿ ಬಲರಾಮ ಆಚಾರ್ಯ, ಜಿ.ಎಲ್.ಬಲರಾಮ ಆಚಾರ್ಯ ದಂಪತಿ ದೀಪ ಪ್ರಜ್ವಲನೆ ನೆರವೇರಿಸುವ ಮೂಲಕ ಮಳಿಗೆ ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಳಿಯ ಜ್ಯುವೆಲ್ಲರ್ಸ್ ನಿರ್ದೇಶಕರಾದ ಅಶ್ವಿನಿ ಕೃಷ್ಣ ಮುಳಿಯ, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷೆ ರಾಜೇಶ್ವರಿ ಆಚಾರ್ಯ, ಇಂಡಿಯನ್ ಓವರ್ ಸಿಸ್ ಬ್ಯಾಂಕ್ ಶಾಖಾ ವ್ಯವಸ್ಥಾಪಕರಾದ ಹರಿಲೇಖ, ಸುಳ್ಯ ಎನ್.ಎಂ.ಕಾಲೇಜ್ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ, ಗುಲಾಬಿ ನರಸಿಂಹ ಪ್ರಸಾದ್ ಹಾಗೂ ಮಿಸ್ ಕರ್ನಾಟಕ ಕಿಂಜಲ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಳೆದ ಕೆಲ ವರುಷದ ಹಿಂದೆ ಕೋರ್ಟುರೋಡ್ ಇಂಡಿಯನ್ ಆರ್ಕೇಡ್ ಇದರ ಮೊದಲ ಮಹಡಿಯಲ್ಲಿ ಪ್ರಾರಂಭಗೊಂಡಿರುವ ʼಲಶ್’ ಮಳಿಗೆ ಎಲ್ಲಾ ವರ್ಗದ ಗ್ರಾಹಕ ಜನತೆಯ ಅಚ್ಚು ಮೆಚ್ಚಿನ , ಪ್ರೀತಿಯ, ವಿಶ್ವಾಸಾರ್ಹ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಇದೀಗ ಪ್ರಿಯ ಗ್ರಾಹಕ ವರ್ಗಕ್ಕೆ ಇನ್ನೂ ಹೆಚ್ಚಿನ ಸೇವೆ ನೀಡುವ ಸಲುವಾಗಿ ಜಿ.ಎಲ್.ಒನ್ ಮಾಲ್ ನಲ್ಲಿ ತನ್ನ ಪ್ರಥಮ ಶಾಖೆಯನ್ನು ಆರಂಭಿಸುತ್ತಿದೆ.
ಕಿರಿಯರ, ಹಿರಿಯರ ಬೇಸಿಗೆ ಉಡುಪುಗಳು, ಒಳ ಉಡುಪುಗಳು, ಶೇಪ್ ವೇರ್, ಸ್ಪೋರ್ಟ್ಸ್ ವೇರ್ ಇವುಗಳ ಬೃಹತ್ ಸಂಗ್ರಹವಿದ್ದು, ಶುಭಾರಂಭದ ಪ್ರಯುಕ್ತ ಪ್ರಥಮವಾಗಿ 50 ಗ್ರಾಹಕರಿಗೆ ಲಶ್ ಉತ್ಪನ್ನಗಳ ಮೇಲೆ 20% ರಿಯಾಯಿತಿ ಇದ್ದು ಗ್ರಾಹಕರು ಈ ಕೊಡುಗೆಯ ಲಾಭ ಪಡೆಯುವಂತೆ ಮಾಲಕಿ ಮಾಲಿನಿ ಎಸ್ ಕಶ್ಯಪ್ ವಿನಂತಿಸಿದ್ದಾರೆ. ಲಶ್ ಗ್ರಾಹಕರು ಪಾರ್ಕಿಂಗ್ ಕೂಪನ್ ಅನ್ನು ಸಂಸ್ಥೆಯಿಂದ ಪಡೆಯಬಹುದು.