ಯುಗಾದಿ ಹೊಸತನದ ಸಂಕೇತ….

0

✍️ಸುಧಾಕರ ಆಚಾರ್ಯ ಕಾಣಿಯೂರು


ಯುಗ ಯುಗಾದಿ ಕಳೆದರೂ ..
 ಯುಗಾದಿ ಮರಳಿ ಬರುತ್ತಿದೆ.
ಹೊಸ ವರುಷಕ್ಕೆ ಹೊಸ ಹರುಷಕ್ಕೆ..
 ಹೊಸತು ಹೊಸತು ತರುತ್ತಿದೆ.

ನಿಜಕ್ಕೂ ಬಾಳಹಾದಿಯ, ಸುಖ-ದು:ಖದ ಪಯಣಕ್ಕೆ ಈ ಯುಗಾದಿ ದಾರಿ ದೀಪ. ಯುಗಾದಿ ಬಂದಿತೆಂದರೆ ಎಲ್ಲಡೆಯಲ್ಲಿ ಸಂತೋಷ.. ಸಂಭ್ರಮ.. ವಸಂತ ಋತುವಿನ ಆಗಮನ ಕಾಲದಲ್ಲಿ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಯುಗಾದಿ ಹಬ್ಬ ಸಮೃದ್ಧಿಯನ್ನು ಸೂಚಿಸುತ್ತದೆ. ಹಬ್ಬಗಳಲ್ಲಿ ಶ್ರೇಷ್ಠವಾದ ಪ್ರಸಿದ್ಧವಾದ ಯುಗಾದಿ ಹಬ್ಬವು ವರ್ಷಾರಂಭದ ಪವಿತ್ರ ದಿನ.
ಬದುಕಿನ ಅರ್ಥವನ್ನು ಹುಡುಕುವ, ಬದುಕಿನ ಮುಂದಿರುವ ಅರುಣೋದಯದ ಬೆಳಕಿನಲ್ಲಿ ಕಷ್ಟಗಳು ಕರಗಿ ಹೋಗುವ, ಹೊಸದಾಗಿ ಸಂಬAಧಗಳಿಗೆ ಸುಂದರವಾದ ಅರ್ಥವನ್ನು ಕೊಡುವುದೇ ಈ ಯುಗಾದಿ ಹಬ್ಬ. ತುಂಟಾಟದ ನೆನಪುಗಳೊಂದಿಗೆ ಜವಬ್ದಾರಿಯ ಜೀವನದತ್ತ ಅಡಿ ಇಡುವ ಶುಭ ಘಳಿಗೆಯೇ ಈ ಯುಗಾದಿ. ಯುಗಾದಿಯನ್ನು ಚಂದ್ರಮಾನ- ಸೌರಮಾನ ಹೀಗೆ ಎರಡು ಬಗೆಯಲ್ಲಿ ಆಚರಿಸುವ ಪದ್ಧತಿ ಇದೆ. ಬದುಕಿನಲ್ಲಿ ಸುಖ- ದುಃಖಗಳು ಅವಿಭಾಜ್ಯ ಅಂಶಗಳು. ಇವೆಲ್ಲವುಗಳೊಂದಿಗೆ ಸಮತೋಲನ ಕಾಯ್ದುಕೊಂಡೇ ಮನುಷ್ಯ ಬದುಕಬೇಕು. ಜೀವನ ಕಷ್ಟ- ಸುಖ ನೋವು ನಲಿವುಗಳ ಸಮ್ಮಿಶ್ರಣವಾಗಿದೆ. ಸಮದೃಷ್ಠಿಯಿಂದ ಸವಿಯುವುದನ್ನು ಕಲಿಯಲೆಂದೇ ಯುಗಾದಿಯಂದು ಬೇವು ಬೆಲ್ಲವನ್ನು ಸೇವಿಸಲಾಗುತ್ತದೆ. ಕನಸು ಮತ್ತು ವಾಸ್ತವಗಳ ಸಂಗಮವಾದ ಯುಗಾದ ಆದಿ, `ಯುಗಾದಿ’, ನೂರಾರು ಕನಸುಗಳನ್ನು ಹೊತ್ತು ತರುತ್ತಿದೆ. ಕೇವಲ ವರುಷದ ನೆನಪುಗಳನ್ನು ಮೆಲುಕು ಹಾಕುವ ಜೊತೆಗೆ ಏನಾದರೂ ಬದುಕಿನಲ್ಲಿ ಸಾಧಿಸಬೇಕೆನ್ನುವ ಸಂಕಲ್ಪ ತೊಡುವಂತೆ ಮಾಡುತ್ತದೆ. ಸುಖ ದು:ಖಗಳು ಸಾಂಕೇತಿಕ ಕಲ್ಪನೆಯೇ ಯುಗಾದಿ, ಈ ಯುಗಾದಿ ಕೇವಲ ಒಂದು ದಿನದ ಹಬ್ಬವಾಗಬಾರದು, ಬದಲಾಗಿ ದಿನಂಪ್ರತಿಯ ಹಬ್ಬವಾಗಬೇಕು.

LEAVE A REPLY

Please enter your comment!
Please enter your name here