ನೆಲ್ಯಾಡಿ: ಅಶೋಕ್ ಲೈಲ್ಯಾಂಡ್ ದೋಸ್ತ್ ಹಾಗೂ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ರಿಕ್ಷಾದಲ್ಲಿದ್ದ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಉಪ್ಪಿನಂಗಡಿ ಗ್ರಾಮದ ಮಠ ಎಂಬಲ್ಲಿ ಮಾ.22ರಂದು ಸಂಜೆ ನಡೆದಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಅಶೋಕ್ ಲೈಲ್ಯಾಂಡ್(ಕೆಎ 13 ಡಿ 2395) ಹಾಗೂ ಗೋಳಿತ್ತೊಟ್ಟಿನಿಂದ ಸರಳಿಕಟ್ಟೆಗೆ ಹೋಗುತ್ತಿದ್ದ ರಿಕ್ಷಾ (ಕೆಎ21 ಸಿ3321) ನಡುವೆ ಉಪ್ಪಿನಂಗಡಿ ಮಠದಲ್ಲಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಅಟೋ ರಿಕ್ಷಾ ಪಲ್ಟಿಯಾಗಿದ್ದು ರಿಕ್ಷಾ ಚಾಲಕ ಗೋಳಿತ್ತೊಟ್ಟು ಕೊಂಕೋಡಿ ನಿವಾಸಿ ಮಹಮ್ಮದ್ ಅನ್ಸಾರ್ (31ವ.), ಪ್ರಯಾಣಿಕರಾದ ಸುಮಯ್ಯ(27ವ.) ಹಾಗೂ ಒಂದೂವರೇ ವರ್ಷದ ಮಗು ಮಿಸ್ರೀಯಾ ಎಂಬವರು ಗಾಯಗೊಂಡಿದ್ದಾರೆ.
ಅಶೋಕ ಲೈಲ್ಯಾಂಡ್ ದೋಸ್ತ್ ವಾಹನದ ಚಾಲಕ ತೀರ್ಥೇಶ್ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಹೆದ್ದಾರಿಯ ರಾಂಗ್ ಸೈಡಿಗೆ ವಾಹನ ಚಲಾಯಿಸಿದ ಪರಿಣಾಮ ಈ ಅಪಘಾತ ನಡೆದಿದೆ ಎಂದು ವರದಿಯಾಗಿದೆ. ಘಟನೆ ಕುರಿತು ರಿಕ್ಷಾ ಚಾಲಕ ಮಹಮ್ಮದ್ ಅನ್ಸಾರ್‌ರವರು ನೀಡಿದ ದೂರಿನಂತೆ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.