ಅಗರಿ: ಸಂಪರ್ಕ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಉದ್ಘಾಟನೆ

0

ಹಿರೇಬಂಡಾಡಿ: ಗಂಡಿಬಾಗಿಲು-ಪೆರಿಯಡ್ಕ ಸಂಪರ್ಕ ರಸ್ತೆಯ ಹಿರೇಬಂಡಾಡಿ ಗ್ರಾಮದ ಅಗರಿ ಎಂಬಲ್ಲಿ 1.50 ಕೋಟಿ ರೂ.ಅನುದಾನದಲ್ಲಿ ನಿರ್ಮಾಣಗೊಂಡ ಸಂಪರ್ಕ ಸೇತುವೆ ಸಮೇತ ಕಿಂಡಿ ಅಣೆಕಟ್ಟಿನ ಉದ್ಘಾಟನೆ ಮಾ.24ರಂದು ನಡೆಯಿತು. ಶಾಸಕರ ಅನುದಾನದಲ್ಲಿ ಹಿರೇಬಂಡಾಡಿ ಗ್ರಾಮದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸವೂ ನಡೆಯಿತು.

ಸಂಪರ್ಕ ಸೇತುವೆ ಸಮೇತ ಕಿಂಡಿ ಅಣೆಕಟ್ಟು ಉದ್ಘಾಟಿಸಿ ಮಾತನಾಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು, ಅಗರಿಯಲ್ಲಿ ಸಂಪರ್ಕ ಸೇತುವೆ ಆಗಬೇಕೆಂಬುದು ಈ ಭಾಗದ ಜನರ 50 ವರ್ಷಗಳ ಬೇಡಿಕೆಯಾಗಿತ್ತು. ಮಳೆಗಾಲದಲ್ಲಿ ಸುತ್ತಿ ಬಳಸಿ ಹೋಗಬೇಕಾಗಿತ್ತು. ಇದೀಗ ಸಂಪರ್ಕ ಸೇತುವೆ ನಿರ್ಮಾಣಗೊಂಡಿರುವುದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ ಎಂದರು. ಕ್ಷೇತ್ರದ ಮತದಾರರು, ಪಕ್ಷದ ಕಾರ್ಯಕರ್ತರು ನನ್ನ ಮೇಲೆ ಇಟ್ಟಿರುವ ಪ್ರೀತಿ,ವಿಶ್ವಾಸಕ್ಕೆ ಸದಾ ಚಿರಋಣಿಯಾಗಿರುತ್ತೇನೆ. 5 ವರ್ಷಗಳಲ್ಲಿ ಶಾಸಕನಾಗಿ ಪ್ರಾಮಾಣಿಕವಾಗಿ ಅಭಿವೃದ್ಧಿ ಕಾರ್ಯ ನಡೆಸಿದ ತೃಪ್ತಿ ಇದೆ ಎಂದು ಹೇಳಿದರು

ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಗಣರಾಜ್ ಕುಂಬ್ಳೆ, ಹಿರೇಬಂಡಾಡಿ ಗ್ರಾ.ಪಂ.ಮಾಜಿ ಸದಸ್ಯ ಮುದ್ದ ತಾಳಿಪಡ್ಪು, ಅಗರಿ ಸೀತಾರಾಮ ಗೌಡ, ಹಿರೇಬಂಡಾಡಿ ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ ನೆಹರುತೋಟ, ಉಪಾಧ್ಯಕ್ಷೆ ಭವಾನಿ ಮುರದಮೇಲು, ಸದಸ್ಯರಾದ ವಾರಿಜಾಕ್ಷಿ ಬಡ್ಡಮೆ, ಉಷಾ ಸರೋಳಿ, ಶಾಂಭವಿ ಮುರ ಕಾಟ್ರಸ್, ಲಕ್ಷ್ಮೀಶ ನಿಡ್ಡೆಂಕಿ, ಶೌಕತ್ ಆಲಿ, ಹೇಮಂತ್ ಮೈತಳಿಕೆ, ಸದಾನಂದ ಶೆಟ್ಟಿ ಅಡೆಕ್ಕಲ್, ನಿತಿನ್ ತಾರಿತ್ತಡಿ, ಉಮೇಶ್ ಶೆಣೈ ಉಪ್ಪಿನಂಗಡಿ, ದಯಾನಂದ ಸರೋಳಿ, ವಾಮನ ಬರಮೇಲು, ನಾರಾಯಣ ಕನ್ಯಾನ, ವಿಶ್ವನಾಥ ಕೆಮ್ಮಾಟೆ, ಹೊನ್ನಪ್ಪ ಗೌಡ ಜಾಲು, ಜನಾರ್ದನ ಅನಂತಿಮಾರು, ಸದಾಶಿವ ಬಂಗೇರ ಎಲಿಯ, ಕೊರಗಪ್ಪ ಜಾಲು, ಮಾಧವ ಗೌಡ ಹೆನ್ನಾಳ, ಅಶೋಕ್ ಪಡ್ಪು, ನೀಲಯ್ಯ ಸರೋಳಿ, ದಿನೇಶ ಅಗರಿತೋಟ, ಮಹೇಶ್ ಅಗರಿತೋಟ, ಸುರೇಶ್ ಅತ್ರಮಜಲು, ಗಣೇಶ್ ಮಠಂದೂರು, ಹರಿಪ್ರಸಾದ್ ಜಾಡೆಂಕಿ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶಿಲಾನ್ಯಾಸ:
ಹಿರೇಬಂಡಾಡಿ ಗ್ರಾಮದ ಮುರದಮೇಲು ದೇವಸ್ಥಾನ ಸಂಪರ್ಕಿಸುವ ನಾಲ್‌ಮಾರ್ಗ ಎಂಬಲ್ಲಿ ಸುಮಾರು 25 ಲಕ್ಷ ರೂ. ಅನುದಾನದಲ್ಲಿ ನಡೆಯುವ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಹಾಗೂ 10 ಲಕ್ಷ ರೂ. ಅನುದಾನದಲ್ಲಿ ಅಡ್ಕರೆಗುರಿ- ಹೆನ್ನಾಳ ರಸ್ತೆ ಕಾಂಕ್ರಿಟೀಕರಣಕ್ಕೂ ಶಾಸಕ ಸಂಜೀವ ಮಠಂದೂರು ಅವರು ಶಿಲಾನ್ಯಾಸ ನೆರವೇರಿಸಿದರು.

ಶಾಸಕರಿಗೆ ಸನ್ಮಾನ:

ಅಗರಿಯಲ್ಲಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಅನುದಾನ ಒದಗಿಸಿದ ಶಾಸಕ ಸಂಜೀವ ಮಠಂದೂರು ಅವರನ್ನು ಅಗರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸನ್ಮಾನಿಸಿದರು.

LEAVE A REPLY

Please enter your comment!
Please enter your name here