





ಉಪ್ಪಿನಂಗಡಿ : ದಕ್ಷಿಣ ಭಾರತ ಆಫ್ ರೋಡ್ ಚಾಲೆಂಜ್ – 2023 ಎಂಬ ಜೀಪು ರೇಸ್ ಮಾರ್ಚ್ 26ರಂದು ಉಪ್ಪಿನಂಗಡಿಯ ಕಡವಿನಬಾಗಿಲು ಪ್ರದೇಶದಲ್ಲಿ ರೋಚಕವಾಗಿ ನಡೆಯಿತು.


ಪೆಟ್ರೋಲ್, ಡಿಸೇಲ್, ಹಾಗೂ ಮಹಿಳಾ ವಿಭಾಗ , ಮೋಡಿಫೈ ವಿಭಾಗದಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಕೆಸರು ತುಂಬಿದ ಗದ್ದೆ, ಅಪಾಯಕಾರಿ ತಿರುವು, ಗುಂಡಿ , ಏರು ಇಳಿಜಾರು , ಕಡಿದಾದ ಸ್ಥಳ ಸಹಿತ ಸವಾಲೊಡ್ಡುವ ಪಥವಲ್ಲದ ಪಥದಲ್ಲಿ ಜೀಪುಗಳನ್ನು ಚಲಾಯಿಸುವ ಈ ಸ್ಪರ್ಧೆಯಲ್ಲಿ ಸರಿ ಸುಮಾರು 90 ವಾಹನಗಳು ಭಾಗವಹಿಸಿದವು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಸ್ವತಃ ಜೀಪನ್ನು ಚಲಾಯಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ ಸ್ಪರ್ಧಾಳುಗಳನ್ನು ಹುರಿದುಂಬಿಸಿದರು. ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಸಾಮಾಜಿಕ ಮುಂದಾಳು ವಿಕ್ರಂ ಶೆಟ್ಟಿ, ತಿಮ್ಮಪ್ಪ ಗೌಡ, ರಮೇಶ್ ನಾಯಕ್ , ಸುಧಿನ್ ರೈ, ರತನ್, ಮೊದಲಾದ ಹಲವು ಮಂದಿ ಪ್ರಮುಖರು ಭಾಗವಹಿಸಿದ್ದರು.





ಕಡವಿನ ಬಾಗಿಲು ಪಟೇಲ್ ಮನೆತನಕ್ಕೆ ಸೇರಿದ ಭೂ ಪ್ರದೇಶದಲ್ಲಿ ಗದ್ದೆಯ ಕಾಡಿನ ಪ್ರದೇಶಗಳನ್ನು ಸ್ಪರ್ಧೆಗೆ ವಿನ್ಯಾಸಗೊಳಿಸಿ ಆಯೋಜಿಸಲಾದ ರಸ್ತೆಯಲ್ಲದ ಪಥದಲ್ಲಿ ಜೀಪು ಚಲಾಯಿಸುವ ಈ ಸ್ಪರ್ಧೆಯಲ್ಲಿ ಈ ಬಾರಿ ಮಹಿಳಾ ಸ್ಪರ್ಧಿಗಳ ಸಂಖ್ಯೆಯೂ ಗಮನಾರ್ಹವಾಗಿತ್ತು.








