ಕಡಬ: ಮಾ.14ರಂದು ನಿಧನರಾದ ಕೋಡಿಂಬಾಳ ಗ್ರಾಮದ ಪೊಸವಳಿಕೆ ದಿ. ವೆಂಕಮ್ಮ ಅವರ ಉತ್ತರಕ್ರಿಯೆ ಹಾಗೂ ಶ್ರದ್ಧಾಂಜಲಿ ಸಮರ್ಪಣೆ ಮಾ.25ರಂದು ಪೊಸವಳಿಕೆ ಮನೆಯಲ್ಲಿ ನಡೆಯಿತು.
ಬಿಜೆಪಿ ಮುಖಂಡ ವಾಡ್ಯಪ್ಪ ಗೌಡ ಎರ್ಮಾಯಿಲ್, ನಿವೃತ್ತ ಶಿಕ್ಷಕ ಸಾಂತಪ್ಪ ಗೌಡ ಪಿಜಕಳ,ಮೃತರ ಪುತ್ರ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ ಅವರುಗಳು ದಿ.ವೆಂಕಮ್ಮ ಅವರಿಗೆ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಪುತ್ರರಾದ ಶಿವಣ್ಣ ಗೌಡ, ವಾಸುದೇವ ಗೌಡ, ಶಿಕ್ಷಕ ಕುಶಾಲಪ್ಪ ಗೌಡ, ಚೆನ್ನಪ್ಪ ಗೌಡ ಪುತ್ರಿಯರಾದ ಸೀತಮ್ಮ, ಬೇಬಿ,ಕುಸುಮಾ ಅಳಿಯಂದಿರರಾದ ಚೆನ್ನಪ್ಪ ಗೌಡ ಪಾಲೋಲಿ, ಭಾಸ್ಕರ ಗೌಡ ಪಡೆಜ್ಜಾರು, ಸಾಂತಪ್ಪ ಗೌಡ ಕೊಲಂತ್ತಾಡಿ ಸೇರಿದಂತೆ ಹಲವಾರು ಬಂಧು-ಮಿತ್ರರು ಉಪಸ್ಥಿತರಿದ್ದರು.