ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಹಿನ್ನೆಲೆ; ಎ.8ಕ್ಕೆ ಹೊರೆಕಾಣಿಕೆ ಸಮರ್ಪಣಾ ಕಾರ್ಯಕ್ರಮ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಅಂಗವಾಗಿ ಎ.8ರಂದು ಹೊರೆಕಾಣಿಕೆ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ.

ಪುತ್ತೂರು ಸೀಮೆಯ ಎಲ್ಲಾ ದೇವಸ್ಥಾನಗಳು, ಭಜನಾ ಮಂಡಳಿ, ದೈವಸ್ಥಾನ ಮತ್ತು ಹಿಂದೂ ಶ್ರದ್ಧಾ ಕೇಂದ್ರಗಳು ಮತ್ತು ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ.
ಹೊರೆಕಾಣಿಕೆ ಮೆರವಣಿಗೆಯು ಅಂದು ಸಂಜೆ ಗಂಟೆ 3.30ಕ್ಕೆ ದರ್ಬೆ ಮತ್ತು ಬೊಳುವಾರು ವೃತ್ತಗಳಿಂದ ಏಕಕಾಲಕ್ಕೆ ಹೊರಡಲಿದೆ. ಗೊಂಬೆಕುಣಿತ, ಕುಣಿತ ಭಜನೆ, ಚೆಂಡೆ, ಕೊಂಬು ಕಹಳೆ ವಾದ್ಯಗಳೊಂದಿಗೆ ಪುತ್ತೂರು ಪ್ರಧಾನ ಅಂಚೆ ಕಚೇರಿ ಬಳಿ ಮೆರವಣಿಗೆ ದೇವಳದ ಮುಖ್ಯದ್ವಾರ ಪ್ರವೇಶಿಸಲಿದೆ.

ದರ್ಬೆಗೆ ಸೇರುವ ಹೊರೆಕಾಣಿಕೆ ವಿವರ:
ಸುಳ್ಯ, ನೆಟ್ಟಣಿಗೆಮುಡ್ನೂರು, ಕಾಣಿಯೂರು, ಪಾಣಾಜೆ, ಬೆಳ್ಳಾರೆ ಮಾರ್ಗವಾಗಿ ಹೊರೆಕಾಣಿಕೆ ತರುವ ವಾಹನಗಳು ದರ್ಬೆಯ ರೈ ಸರ್ವಿಸ್ ಸ್ಟೇಷನ್ ಪಕ್ಕ ನೇಸರ ರವಿ ಶೆಟ್ಟಿ ಕತಾರ್‌ರವರ ಸ್ಥಳದಲ್ಲಿ ಒಟ್ಟು ಸೇರುವುದು.

ಬೊಳುವಾರಿನಲ್ಲಿ ಸೇರುವ ಹೊರೆಕಾಣಿಕೆ ವಿವರ:
ಮಂಗಳೂರು, ವಿಟ್ಲ, ಉಪ್ಪಿನಂಗಡಿ, ಬಲ್ನಾಡು ಮಾರ್ಗವಾಗಿ ಹೊರೆಕಾಣಿಕೆ ತರುವ ವಾಹನಗಳು ಬೊಳುವಾರಿನ ಸುಬ್ರಹ್ಮಣ್ಯ ನಗರದಲ್ಲಿ ಒಟ್ಟು ಸೇರುವುದು. ಒಟ್ಟು ಹೊರೆಕಾಣಿಕೆ ಮೆರವಣಿಗೆಯನ್ನು ಯಶಸ್ವಿಗೊಳಿಸುವಂತೆ ದೇವಳದ ಆಡಳಿತ ಮಂಡಳಿ ವಿನಂತಿಸಿದೆ.

ಬಾಲಾಜಿ ಅಥವಾ ಟೈಗರ್ ಬ್ರ್ಯಾಂಡ್, ಬೆಳ್ತಿಗೆ ಅಕ್ಕಿ, ಬಾಳೆಗೊನೆ, ತೆಂಗಿನಕಾಯಿ, ಬಾಳೆಎಲೆ, ಎಳನೀರು, ಹಿಂಗಾರ, ಊಟದ ಹಾಳೆ ತಟ್ಟೆ, ಅವಲಕ್ಕಿ ಕಡ್ಲೆ, ಹೆಸರುಕಾಳು, ಕಡ್ಲೆಬೇಳೆ, ಹೆಸರುಬೇಳೆ, ಉದ್ದಿನಬೇಳೆ, ಬೆಲ್ಲ, ಸಕ್ಕರೆ, ದ್ರಾಕ್ಷಿ, ಗೋಡಂಬಿ, ತರಕಾರಿ ಮುಂತಾದ ಸುವಸ್ತುಗಳನ್ನು ಕೃತಜ್ಞತಾಪೂರಕವಾಗಿ ಜಾತ್ರೋತ್ಸವದ ಅನ್ನಸಂತರ್ಪಣೆಗೆ ಸ್ವೀಕರಿಸಲಾಗುವುದು. ಭಕ್ತರು ಸಹಕಾರ ನೀಡುವಂತೆ ವಿನಂತಿ
ಕೇಶವಪ್ರಸಾದ್ ಮುಳಿಯ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

LEAVE A REPLY

Please enter your comment!
Please enter your name here