ರಾಮಕುಂಜ ಆ.ಮಾ.ಶಾಲೆಯಲ್ಲಿ ಬೇಸಿಗೆ ಶಿಬಿರ’ ಚಿಣ್ಣರ ಮೇಳ’ಕ್ಕೆ ಚಾಲನೆ-ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ 1 ವಾರ ನಡೆಯಲಿರುವ ಬೇಸಿಗೆ ಶಿಬಿರ-2023 ‘ಚಿಣ್ಣರ ಮೇಳ’ ಉದ್ಘಾಟನೆ ಹಾಗೂ ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಎ.3ರಂದು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.


ಎಸ್‌ಆರ್‌ಕೆ ಲ್ಯಾಡರ್‍ಸ್ ಪುತ್ತೂರು ಇಲ್ಲಿನ ಕೇಶವ ಎ.,ಅವರು ಶಿಬಿರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ರಜೆಯಲ್ಲಿ ಅನುಭವಿಸುತ್ತಿದ್ದ ಸಂಭ್ರಮಗಳಿಂದ ಈಗಿನ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಆದ್ದರಿಂದ ಈಗ ಬೇಸಿಗೆ ಶಿಬಿರಗಳು ಅನಿವಾರ್ಯವಾಗಿವೆ. ಮಕ್ಕಳು ಇದರಲ್ಲಿ ಸಂಪೂರ್ಣವಾಗಿ ತೊಡಗಿಕೊಂಡು ಸಂಭ್ರಮಿಸಬೇಕು. ಶೈಕ್ಷಣಿಕವಾಗಿ ಬೆಳೆಯಲೂ ಇಂತಹ ಶಿಬಿರಗಳು ಪೂರಕವಾಗಿವೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಚಿಣ್ಣರ ಮೇಳ ಆಯೋಜಿಸಲಾಗಿದೆ. ಮಕ್ಕಳು ಇದರಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ಹೇಳಿದ ಅವರು, ಎಸ್‌ಆರ್‌ಕೆಯ ಕೇಶವ ಅವರು ದೈಹಿಕವಾಗಿ ನ್ಯೂನ್ಯತೆ ಇದ್ದರೂ ಯಶಸ್ವಿ ಉದ್ಯಮಿಯಾಗಿ ರಾಜ್ಯದಲ್ಲಿಯೇ ಗುರುತಿಸಿಕೊಂಡಿದ್ದಾರೆ. ಅವರಲ್ಲಿರುವ ಸಾಧನೆಯ ಕಿಚ್ಚು ಎಲ್ಲಾ ವಿದ್ಯಾರ್ಥಿಗಳಲ್ಲೂ ಬೆಳೆಯಬೇಕೆಂದು ಹೇಳಿದರು.

ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಜನಾರ್ದನ ಬಿ.ಎಲ್.ರವರು ಶುಭಹಾರೈಸಿದರು. ಶಾಲಾ ಆಡಳಿತಾಧಿಕಾರಿ ಆನಂದ ಎಸ್.ಟಿ., ತಾಂತ್ರಿಕ ಸಲಹೆಗಾರ ಜಯೇಂದ್ರ ಬಿ., ರಕ್ಷಕ ಶಿಕ್ಷಕ ಸಂಘದ ಜೊತೆ ಕಾರ್ಯದರ್ಶಿ ಸುಚಿತ್ರಾ, ಸಂಪನ್ಮೂಲ ವ್ಯಕ್ತಿಗಳಾದ ಸುಮನಾ ಕೆರೆಕರೆ, ಕಾವ್ಯ ಕೆ.ಟಿ.ಆಲಂಕಾರು, ಸತೀಶ್ ಆಚಾರ್ಯ ಮಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ಗಾಯತ್ರಿ ಯು.ಎನ್.ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಲೋಹಿತ ಎ.,ವಂದಿಸಿದರು. ಶಿಕ್ಷಕ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ:
2022-23ನೇ ಶೈಕ್ಷಣಿಕ ಸಾಲಿನ ಎಂ.ಕಾಂ.ಪರೀಕ್ಷೆಯಲ್ಲಿ ೪ನೇ ರ್‍ಯಾಂಕ್ ಗಳಿಸಿರುವ ಸಂಸ್ಥೆಯ ಹಳೆವಿದ್ಯಾರ್ಥಿನಿ ಶ್ಲಾಘ್ಯ ಆಳ್ವ, 5ನೇ ರ್‍ಯಾಂಕ್ ಗಳಿಸಿದ ಹಳೆವಿದ್ಯಾರ್ಥಿನಿ ಚೈತ್ರಾ ಬಿ.,ಹಾಗೂ ಬಿ.ಕಾಂ.ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಪಡೆದ ಹಳೆವಿದ್ಯಾರ್ಥಿನಿ ಆಕಾಂಕ್ಷ ಪರ ಆಕೆಯ ತಂದೆ ತನುಜ್‌ಕುಮಾರ್ ಶೆಟ್ಟಿಯವರಿಗೆ ಶಾಲುಹಾಕಿ, ಹಾರಾರ್ಪಣೆ, ಫಲತಾಂಬೂಲ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಶ್ಲಾಘ್ಯ ಆಳ್ವ ಹಾಗೂ ಚೈತ್ರಾ ಬಿ., ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕಿ ಜ್ಯೋತಿ ಸನ್ಮಾನಿತರನ್ನು ಪರಿಚಯಿಸಿದರು.

LEAVE A REPLY

Please enter your comment!
Please enter your name here