ಎ.6: ಒಡಿಯೂರು ಸಂಸ್ಥಾನದಲ್ಲಿ ಶ್ರೀ ಹನುಮೋತ್ಸವ-ಶ್ರೀಮದ್ರಾಮಾಯಣ ಮಹಾಯಜ್ಞ

0

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಎ. 6 ರಂದು ಶ್ರೀ ಹನುಮೋತ್ಸವ-ಶ್ರೀಮದ್ರಾಮಾಯಣ ಮಹಾಯಜ್ಞವು ನಡೆಯಲಿದೆ.


ಆ ಪ್ರಯುಕ್ತ ಶ್ರೀ ರಾಮನವಮಿಯ ಸೂರ್ಯೋದಯದಿಂದ ಆರಂಭಗೊಂಡ ಅಖಂಡ (ನಿರಂತರ 168 ಗಂಟೆಗಳ)ಭಗವನ್ನಾಮ ಸಂಕೀರ್ತನೆಯ ಮಂಗಲ ಪ್ರಾತಃಕಾಲ ನಡೆಯಲಿದೆ. ಬೆಳಿಗ್ಗೆ ಗಂಟೆ 9ಕ್ಕೆ ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ, ನಾಗತಂಬಿಲ ಬಳಿಕ ಶ್ರೀಮದ್ರಾಮಾಯಣ ಮಹಾಯಜ್ಞ ಆರಂಭಗೊಳ್ಳಲಿದೆ. ಬಳಿಕ ಒಡಿಯೂರು‌ ಶ್ರೀ ಗಳು ಅನುಗ್ರಹ ಸಂದೇಶ ನೀಡಿಲಿದ್ದಾರೆ. ಮಧ್ಯಾಹ್ನ ಯಜ್ಞದ ಪೂರ್ಣಾಹುತಿ, ಮಹಾಪೂಜೆ, ಮಹಾಸಂತರ್ಪಣೆ ಜರಗಲಿದೆ.


ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ, ಪುತ್ತೂರು ಇವರಿಂದ ಶ್ರೀ ಭಾಸ್ಕರ ಬಾರ್ಯ ಅವರ ನೇತೃತ್ವದಲ್ಲಿ ಹನುಮ ವಿಜಯ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಾಯಂಕಾಲ ಸಾಮೂಹಿಕ ಶ್ರೀ ಹನುಮದ್ವೃತ ಪೂಜೆ, ರಾತ್ರಿ ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ ಮತ್ತು ಉಯ್ಯಾಲೆ ಸೇವೆ ಜರಗಲಿರುವುದು.

LEAVE A REPLY

Please enter your comment!
Please enter your name here