





ಪುತ್ತೂರು:ಪುತ್ತೂರಿನ ಸುದಾನ ಶಾಲೆಯಲ್ಲಿ 70 ನೇ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 1 ರಂದು ಆಚರಿಸಿದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಸುದಾನ ಶಾಲೆಯ ಆಡಳಿತಾಧಿಕಾರಿ ಸುಶಾಂತ್ ಹಾರ್ವಿನ್ ಮತ್ತು ಎಲ್ಲಾ ಅಭ್ಯಾಗತರು ಕನ್ನಡಾಂಬೆಯ ಚಿತ್ರಪಟದ ಎದುರು ದೀಪ ಬೆಳಗಿ, ಪುಷ್ಪನಮನವನ್ನು ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ “ಪ್ರತಿಯೊಂದರ ಬಗೆಗೂ ಗೌರವಭಾವವನ್ನು ಹೊಂದುವುದು ಭಾರತೀಯ ಸಂಸ್ಕೃತಿ. ಎಲ್ಲಾ ಭಾಷೆಗಳ ಬಗೆಗೂ ಗೌರವ ಇರುವುದರೊಂದಿಗೆ ತಾಯ್ನುಡಿಯಾದ ಕನ್ನಡವನ್ನು ಉಸಿರಿನಂತೆ ಕಾಪಾಡಬೇಕು” ಎಂದರು. ಸ್ಥಳದಲ್ಲೇ ಕನ್ನಡದಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡುವ ಸ್ಪರ್ಧೆಯನ್ನು ಏರ್ಪಡಿಸಿ, ಬಹುಮಾನ ವಿತರಿಸಿ ಭಾಷೆಯ ಮಹತ್ವವನ್ನು ವಿವರಿಸಿದರು.





ವಿದ್ಯಾರ್ಥಿನಿ ಸ್ವೀಕೃತಿಯು ಕನ್ನಡ ಭಾಷೆಯ ಹಿರಿಮೆಯ ಬಗೆಗೆ ವಿವರಿಸಿದರು. ಮುಖ್ಯ ಸಹ ಶಿಕ್ಷಕಿ ಲವೀನ ರೋಸ್ಲೀನ್ ಹನ್ಸ್,ಸಂಯೋಜಕರಾದ ಪ್ರತಿಮಾ, ಗಾಯತ್ರಿ, ಅಮೃತವಾಣಿ ಮತ್ತು ಲಹರಿ ಸಾಹಿತ್ಯ ಸಂಘದ ನಿರ್ದೇಶಕಿ ಅನಿತಾ ,ಉಪ ನಿರ್ದೇಶಕಿ ಪವಿತ್ರಾ ,ಲಹರಿ ಸಾಹಿತ್ಯ ಸಂಘದ ವಿದ್ಯಾರ್ಥಿ ಪ್ರತಿನಿಧಿ ಅಭಿಜ್ಞಾ, ಪ್ರಾಪ್ತಿ ಯು ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿ ರಾಘವ ಸ್ವಾಗತಿಸಿ, ವಿದ್ಯಾರ್ಥಿ ಪ್ರಾಪ್ತಿ ಯು ಶೆಟ್ಟಿ ವಂದಿಸಿದರು. ವಿದ್ಯಾರ್ಥಿಗಳಾದ ವಂಶಿ ಎ ಪಿ ಮತ್ತು ಪೃಥ್ವಿ ಕಾರ್ಯಕ್ರಮವನ್ನು ನಿರೂಪಿಸಿದರು.
ಸಭೆಯ ಬಳಿಕ ವಿದ್ಯಾರ್ಥಿಗಳಿಂದ ಕನ್ನಡ ಗೀತೆಗಾಯನ, ನೃತ್ಯ ಪ್ರದರ್ಶನ ಮತ್ತು ತಾ.ಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಮೈಸೂರು ವಿಭಾಗೀಯ ಮಟ್ಟದಲ್ಲಿ ಬಹುಮಾನ ಪಡೆದ ವಿಜ್ಞಾನ ನಾಟಕ ” ನೆರಳು” ಪ್ರದರ್ಶನಗೊಂಡಿತು. ವಿದ್ಯಾರ್ಥಿಗಳಿಗೆ ನಡೆಸಿದ್ದ ಕನ್ನಡ ಪರ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಶಾಲಾ ಲಹರಿ ಸಾಹಿತ್ಯ ಸಂಘವು ಈ ಕಾರ್ಯಕ್ರಮದ ನೇತೃತ್ವವನ್ನು ವಹಿಸಿತ್ತು.










