ಪುಣ್ಚಪ್ಪಾಡಿ ಶಾಲೆಯಲ್ಲಿ ಬಣ್ಣದ ಬಣ್ಣ ಮಕ್ಕಳ‌ ರಂಗ ಶಿಬಿರ ಉದ್ಘಾಟನೆ

0

ಹೊಸತನದ ಹುಡುಕಾಟದ ಕಲಿಕೆಯೇ ಇಂದಿನ ಅಗತ್ಯ – ಗೋಪಾಡ್ಕರ್

ಮಕ್ಕಳನ್ನು ಸೃಜನಶೀಲರನ್ನಾಗಿಸುವುದು ಪ್ರತಿ ಶಿಕ್ಷಕನ ಕರ್ತವ್ಯ – ಲೋಕೇಶ್ ಎಸ್.ಆರ್.

ಪುತ್ತೂರು: ಹೊಸತನದ ಹುಡುಕಾಟದ ಕಲಿಕೆಯೇ ಇಂದಿನ ಅಗತ್ಯ ಎಂದು ಕರ್ನಾಟಕದ ಹಿರಿಯ ಶೈಕ್ಷಣಿಕ ಚಿಂತಕ ಕಲಾ ನಿಧಿ ಗೋಪಾಡ್ಕರ್ ಮಂಗಳೂರು ಹೇಳಿದರು. ಅವರು ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಣ್ಚಪ್ಫಾಡಿಯಲ್ಲಿ ಎ. 6 ರಿಂದ ನಡೆಯಲಿರುವ ಮೂರು ದಿನಗಳ ಮಕ್ಕಳ ರಂಗ ಶಿಬಿರ ಬಣ್ಣದ ಬಣ್ಣವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಕಲಿಕೆ ಎನ್ನುವುದು ಮಕ್ಕಳ ಮನಸ್ಸಿನ ಹುಡುಕಾಟ, ಮಕ್ಕಳು ಸ್ವತಹ ಅನುಭವಿಸಿದಾಗ ಮಾತ್ರ ಕಲಿಕೆ ಉಂಟಾಗಲು ಸಾಧ್ಯ. ಅನುಭವದ ಸಾಧ್ಯತೆಯನ್ನು ಮಕ್ಕಳ ಮುಂದೆ ತೆರೆದಿಡುವುದೇ ಕಲಿಕೆಯ ಸಾಧ್ಯತೆ. ಇಂತಹ ಮಕ್ಕಳ ಶಿಬಿರಗಳು ಹೊಸತನದ ಹುಡುಕಾಟಕ್ಕೆ ದಾರಿ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡಿ ಸೃಜನಶೀಲತೆ ಎನ್ನುವುದೇ ಕಲಿಕೆಯ ಮೂಲ, ಎಲ್ಲ ಮಕ್ಕಳನ್ನು ಸೃಜನಶೀಲರನ್ನಾಗಿಸುವುದು ಪ್ರತಿಯೊಬ್ಬ ಶಿಕ್ಷಕನ ಕರ್ತವ್ಯವಾಗಬೇಕು. ಇಂತಹ ಶಿಬಿರಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.

ಸವಣೂರು ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿ ಕುಶಾಲಪ್ಪ ಬಿರವರು ಶುಭಹಾರೈಸಿದರು

ಅತಿಥಿ ಎ ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ ಮಾತನಾಡಿ ಶಾಲೆಗಳು ಮಕ್ಕಳ ಚಟುವಟಿಕೆಯ ಕೇಂದ್ರಗಳಾಗಬೇಕು. ಆಗಾಗ ವಿಭಿನ್ನ ವಿಶೇಷ ಚಟುವಟಿಕೆಗಳು ಶಾಲೆಗಳಲ್ಲಿ ನಡೆಯುತ್ತಿರಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಕುಶಲ ಪಿ ರೈ ಪುಣ್ಚಪ್ಪಾಡಿ, ವಿಶಾಖ್ ರೈ ತೋಟತ್ತಡ್ಕ, ಎಸ್.ಡಿ.ಎಮ್.ಸಿ. ಸದಸ್ಯೆ ಕಾವೇರಿ ಅಜಿಲೋಡಿ ಮುಂತಾದವರು ಉಪಸ್ಥಿತರಿದ್ದರು.

ಶಾಲಾ ಮುಖ್ಯಗುರು ರಶ್ಮಿತಾ ನರಿಮೊಗರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಪದವೀಧರ ಶಿಕ್ಷಕಿ ಫ್ಲಾವಿಯಾ ಧನ್ಯವಾದ ಸಲ್ಲಿಸಿದರು. ಅತಿಥಿ ಶಿಕ್ಷಕಿ ಚಂದ್ರಿಕಾ, ಗೌರವ ಶಿಕ್ಷಕಿ ತೃಪ್ತಿ ಸಹಕರಿಸಿದರು.

ಕಾರ್ಯಕ್ರಮದ ವಿಶೇಷತೆಗಳು :

ವಿಭಿನ್ನವಾಗಿ ಹೂ ಬರವಣಿಗೆಯ ಮೂಲಕ ಉದ್ಘಾಟನೆ, ವಿಶಿಷ್ಟವಾದ ರಂಗ ವೇದಿಕೆಯನ್ನು ಗೂಡುದೀಪ, ಮುಖವಾಡ, ಬಣ್ಣದ ಗ್ಲಾಸ್, ಗೆರಟೆಗಳಿಂದ ಅಲಂಕಾರ, ಮಧ್ಯಾಹ್ನ ವಿಶೇಷ ದೇಸಿ ಭೋಜನವನ್ನು ತಯಾರಿಸಲಾಗಿತ್ತು.

LEAVE A REPLY

Please enter your comment!
Please enter your name here