ಪುತ್ತೂರು : ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಪೆರಾಜೆ ಎಂಬಲ್ಲಿ ಮಾಣಿ ಮಠಕ್ಕೆ ಹೋಗುವ ದಾರಿಯ ಆರಂಭದ ಮುನ್ನ ಸ್ವಾಗತ ಕಮಾನು ಭಕ್ತಾಧಿಗಳ ಕಣ್ಮನ ಸೆಳೆಯುತ್ತಿದೆ. ವಿಶಿಷ್ಟ ರೀತಿಯಲ್ಲಿ ಧನುಸ್ಸು ಸ್ವಾಗತ ಕಮಾನ್ ನಿರ್ಮಿಸಿದ್ದು ಎತ್ತಿದರೆ ಗಧೆ ಎಂಬಂತೆ ಎರಡು ಗಧೆ ಮೇಲೆ ಧನುಸ್ಸು ಅನ್ನು ನಿರ್ಮಿಸಿ ನಬೋಮಂಡಲಕ್ಕೆ (ಅಂಬರಕ್ಕೆ) ಬಾಣ ಚಿಮ್ಮುವಂತೆ ಸುಂದರ ನಿರ್ಮಾಣ ಮಾಡಿದ್ದು ,ಪ್ರಸಂಶೆಗೆ ಕಾರಣವಾಗಿದೆ. ಇದನ್ನು ಗಾಂಡಿವ, ಕೋದಂಡ ಧನುಸ್ಸು, ಬಿಲ್ಲು ಬಾಣ ಎಂದೆಲ್ಲಾ ಕರೆಯುವರು. ಶಿಲ್ಪಕ್ಕೆ ಬೇಕಾದಂತಹ ಅತ್ಯಾಕರ್ಷಕ ಬಣ್ಣದ ಸಂಯೋಜನೆ ಹೆದ್ದಾರಿಯಲ್ಲಿ ಹೋಗುವ ವೀಕ್ಷಕರೂ ಒಂದು ಬಾರಿ ಅತ್ತ ಕಡೆ ಕಣ್ಣು ಹಾಯಿಸುವಂತೆ ರೂಪಿತಗೊಂಡಿದೆ. ಇತ್ತೀಚೆಗೆ ನೂತನ ಶಿಲಾಮಯ ಗರ್ಭಗುಡಿಯಲ್ಲಿ ಸಪರಿವಾರ ಶ್ರೀರಾಮದೇವರ ರಜತ ಸೋಪಾನ ಪೀಠದಲ್ಲಿ ಶ್ರೀ ಸೀತಾರಾಮಚಂದ್ರ ಚಂದ್ರ ಮೌಳೇಶ್ವರ ರಾಜರಾಜೇಶ್ವರಿ ದೇವರ ಪುನಃ ಪ್ರತಿಷ್ಠೆ ಹಾಗೂ ಸಾರ್ವಲಂಕಾರ ಭೂಷಿತ ಸುವರ್ಣ ಮಂಟಪದಲ್ಲಿ ನಡೆದಿತ್ತು.
ಚಿತ್ರ ನೂಜಿ ವೆಂಕಟರಮಣ ಭಟ್
ಬರಹ:ಕುಮಾರ್ ಪೆರ್ನಾಜೆ ಪುತ್ತೂರು
ಪೆರ್ನಾಜೆ ಪೋಸ್ಟ್ ಕಾವು ವಯ ದ.ಕ 574223
ಮೋ:9480240643