ಸಂತ ಫಿಲೋಮಿನಾ ಕಾಲೇಜಿನಲ್ಲಿ ಓಪ್ಟಮ್‌ ಕಂಪನಿಯ ಕ್ಯಾಂಪಸ್‌ ನೇಮಕಾತಿ ಕಾರ್ಯಕ್ರಮದ ಉದ್ಘಾಟನೆ

0

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ವೃತ್ತಿ ಮಾರ್ಗದರ್ಶನ ಹಾಗೂ ನೇಮಕಾತಿ ಕೋಶ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶಗಳ ಸಂಯುಕ್ತ ಆಶ್ರಯದಲ್ಲಿ ಯುನೈಟೆಡ್‌ ಸ್ಟೇಟ್ಸ್‌ ಮೂಲದ ಬಹುರಾಷ್ಟ್ರೀಯ ಹೆಲ್ತ್‌ ಕೇರ್‌ ಮತ್ತು ಇನ್ಶೂರೆನ್ಸ್ ಕಂಪನಿ ಓಪ್ಟಮ್‌ನ ಮೆಡಿಕಲ್‌ ಕೋಡರ್‌ ಹುದ್ದೆಗಳಿಗಾಗಿ ಎ.10ರಂದು ಕ್ಯಾಂಪಸ್‌ ನೇಮಕಾತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಲಿಖಿತ ಪರೀಕ್ಷೆ ನಡೆಸುವ ಮೊದಲು ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ವಂ| ಡಾ| ಆಂಟೊನಿ ಪ್ರಕಾಶ್‌ ಮೊಂತೆರೊರವರು
ವಹಿಸಿದ್ದರು. ಅಭ್ಯರ್ಥಿಗಳನ್ನುದ್ದೇಶಿಸಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ಕ್ಯಾಂಪಸ್‌ ನೇಮಕಾತಿ ಕಾರ್ಯಕ್ರಮಗಳು ಅಭ್ಯರ್ಥಿಗಳಿಗೆ ತಮ್ಮ ಕೌಶಲ್ಯಗಳನ್ನು ಅರಿತುಕೊಳ್ಳಲು ಸಹಕಾರಿಯಾಗುತ್ತವೆ. ನಾವು ಕಲಿತ ವಿಷಯಗಳ ಕುರಿತು ಆಳವಾದ ಜ್ಞಾನ ಹೊಂದಿದ್ದರೆ ಮಾತ್ರ ಸಾಲದು ಅದನ್ನು ಇನ್ನೊಬ್ಬರಿಗೆ ಮನಮುಟ್ಟುವ ರೀತಿಯಲ್ಲಿ ವಿವರಿಸಲು ಸಹ ನಾವು
ಶಕ್ತರಾಗಿರಬೇಕು. ನೇಮಕಗೊಳಿಸಿದ ಸಂಸ್ಥೆಗೆ ಅತ್ಯುತ್ತಮ ಸೇವೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ” ಎಂದು ಹೇಳಿದರು.

ಓಪ್ಟಮ್‌ ಕಂಪನಿಯ ಟ್ಯಾಲೆಂಟ್‌ ಅಕ್ವಿಸಿಶನ್‌ ತಂಡದ ಮುಖ್ಯಸ್ಥರಾದ ಕ್ಲೆಮೆಂಟ್‌ ಜೋಯಲ್‌ ಸಿಕ್ವೇರಾ ಹಾಗೂ ಮೆಡಿಕಲ್‌ ಕೋಡಿಂಗ್‌ ವಿಭಾಗದ ಮುಖ್ಯಸ್ಥರಾದ ಸುದೀಪ್ತೋ ಕುಮಾರ್‌ ದಾಸ್‌ ಇವರುಗಳು ನೇಮಕಾತಿ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. 2022ರಲ್ಲಿ ಅಥವಾ ಹಿಂದಿನ ವರ್ಷಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ 100 ಮಂದಿ
ಆಭ್ಯರ್ಥಿಗಳು ಕ್ಯಾಂಪಸ್‌ ನೇಮಕಾತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.


ಕಾಲೇಜಿನ ಮಾರ್ಗದರ್ಶನ ಹಾಗೂ ನೇಮಕಾತಿ ಕೋಶದ ಸಂಯೋಜಕ ಡಾ| ರಾಧಾಕೃಷ್ಣ ಗೌಡ ಸ್ವಾಗತಿಸಿದರು. ಉಪನ್ಯಾಸಕರಾದ ಜೋನ್ಸ್ಸನ್‌ ಡೇವಿಡ್‌ ಸಿಕ್ವೆರಾ ವಂದಿಸಿದರು, ಗೀತಾ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.


LEAVE A REPLY

Please enter your comment!
Please enter your name here