ರಾಮಕುಂಜ: ಎ.2ರಂದು ನಿಧನರಾದ ರಾಮಕುಂಜ ಗ್ರಾಮದ ಕಟ್ಟಪುಣಿ ತಿಮ್ಮಪ್ಪ ಗೌಡರವರ ಉತ್ತರಕ್ರಿಯೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮ ಎ.13ರಂದು ಕಟ್ಟಪುಣಿ ಮನೆಯಲ್ಲಿ ನಡೆಯಿತು.
ನಿವೃತ್ತ ಮುಖ್ಯಶಿಕ್ಷಕ ನಾಗಪ್ಪ ಗೌಡ ಮರುವಂತಿಲ ಅವರು ಮಾತನಾಡಿ, ತಿಮ್ಮಪ್ಪ ಗೌಡರವರು ಸರಳ ವ್ಯಕ್ತಿತ್ವ, ಸರಳ ಜೀವನದ ಬಗ್ಗೆ ತಿಳಿಸಿ ಅವರ ಗುಣಗಾನ ಮಾಡಿದರು. ಎಪಿಎಂಸಿ ಮಾಜಿ ಸದಸ್ಯ ಸೀತಾರಾಮ ಗೌಡ ಪೊಸವಳಿಕೆ, ನಿವೃತ್ತ ಮುಖ್ಯಶಿಕ್ಷಕರಾದ ಪೆರ್ಗಡೆ ಗೌಡ ದೇರಾಜೆ, ಸೀತಾರಾಮ ಗೌಡ ದೇರಾಜೆ, ಕುಶಾಲಪ್ಪ ಗೌಡ ಕೆಮ್ಮಾರ, ಪುಟ್ಟಣ್ಣ ಗೌಡ ಎಣ್ಣೆಮಜಲು, ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿಶೇಖರ ಗೌಡ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ ಕೆ., ರಾಮಕುಂಜ ಗ್ರಾ.ಪಂ.ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ., ಶಿಕ್ಷಕಿಯರಾದ ಶಾಲಿನಿ ಬಳ್ಪ, ಪೂರ್ಣಿಮಾ, ಪುಷ್ಪಾವತಿ ಕೆಮ್ಮಾರ, ಪ್ರಮುಖರಾದ ಗಿರಿಜಾಬಾಲಕೃಷ್ಣ ಗೌಡ ಕಟ್ಟಪುಣಿ, ಸುಂದರ ಗೌಡ ಸಚಿನ್ ಉಪ್ಪಿನಂಗಡಿ, ವಿಶ್ವನಾಥ ಗೌಡ ಪಿಜಕ್ಕಳ, ಬೆಳಿಯಪ್ಪ ಗೌಡ ಕಾರ್ಕಳ, ಆಲಂಕಾರು ಭವಾನಿ ಮೆಡಿಕಲ್ಸ್‌ನ ಸುನೀಲ್ ಸೇರಿದಂತೆ ಬಂಧುಮಿತ್ರರು, ಕಟ್ಟಪುಣಿ ಕುಟುಂಬಸ್ಥರು, ಗ್ರಾಮಸ್ಥರು ಆಗಮಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.
ಮೃತರ ಪತ್ನಿ ರೋಹಿಣಿ, ಪುತ್ರರಾದ ಪುರಂದರ, ಶಾಂತರಾಮ, ಪ್ರಕಾಶ, ಸೊಸೆಯಂದಿರಾದ ಸರಸ್ವತಿ, ಚಂದ್ರಾವತಿ, ಶೃತಿ, ಪುತ್ರಿ ಜಯಂತಿ, ಅಳಿಯ ನಾಗೇಶ್ ಅರ್ಬಿ ಹಾಗೂ ಮೊಮ್ಮಕ್ಕಳು, ಕಟ್ಟಪುಣಿ ಕುಟುಂಬಸ್ಥರು ಅತಿಥಿಗಳನ್ನು ಸತ್ಕರಿಸಿದರು.